ಪೋರ್ಟ್-ಔ-ಪ್ರಿನ್ಸ್ ,ಹೈಟಿ: ಶನಿವಾರ ಬೆಳಿಗ್ಗೆ ಹೈಟಿಯಲ್ಲಿ ಅತ್ಯಂತ ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 227 ಜನರು ಸಾವನ್ನಪ್ಪಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಸಾಕಷ್ಟು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಯುಎಸ್ ಜಿಯಾಲಾಜಿಕಲ್ ಸರ್ವೇ ಪ್ರಕಾರ ಹೈಟಿಯ ನಗರವಾದ ಸೇಂಟ್-ಲೂಯಿಸ್-ಡು-ಸುದ್ನಿಂದ ಈಶಾನ್ಯಕ್ಕೆ ಸುಮಾರು 12 ಕಿಲೋಮೀಟರ್ ಮತ್ತು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂಬ ಮಾಹಿತಿ ದೊರಕಿದೆ.
ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದ್ದು, ಮನೆಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅಮೆರಿಕನ್ ರೆಡ್ ಕ್ರಾಸ್ ವಕ್ತಾರ ಕೇಟೀ ವಿಲ್ಕ್ಸ್ ಹೇಳಿದ್ದಾರೆ.
-
We stand in solidarity with the people of #Haiti.
— World Health Organization (WHO) (@WHO) August 14, 2021 " class="align-text-top noRightClick twitterSection" data="
WHO and @pahowho are working to assess health needs and to support emergency medical care. https://t.co/FQvscKKw4y
">We stand in solidarity with the people of #Haiti.
— World Health Organization (WHO) (@WHO) August 14, 2021
WHO and @pahowho are working to assess health needs and to support emergency medical care. https://t.co/FQvscKKw4yWe stand in solidarity with the people of #Haiti.
— World Health Organization (WHO) (@WHO) August 14, 2021
WHO and @pahowho are working to assess health needs and to support emergency medical care. https://t.co/FQvscKKw4y
ಈ ಭಾರಿ ಭೂಕಂಪದ ನಂತರ ಸುನಾಮಿ ಸಂಭವಿಸಬಹುದಾದ ಸಾಧ್ಯತೆಯನ್ನು ತಜ್ಞರು ಉಲ್ಲೇಖಿಸಿದ್ದು, ಎಚ್ಚರಿಕೆ ನೀಡಲಾಗಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದ್ದು, ಹೈಟಿ ದೇಶದ ಜನರೊಂದಿಗೆ ನಾವಿದ್ದೇವೆ, ಎಲ್ಲಾ ಬೆಂಬಲ, ತುರ್ತು ವೈದ್ಯಕೀಯ ಸಹಾಯವನ್ನು ಒದಗಿಸಲಾಗುತ್ತದೆ ಎಂದಿದೆ.
ಹೈಟಿ ಪ್ರಧಾನಿ ಅರಿಯಲ್ ಹೆನ್ರಿ ಸರ್ಕಾರಿ ಸಂಸ್ಥೆಗಳು ಸಂತ್ರಸ್ಥರ ಸಹಾಯಕ್ಕೆ ಮುಂದಾಗಬೇಕೆಂದು ಆದೇಶಿಸಿದ್ದು, ಒಂದು ತಿಂಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಏಸೂರು ಕೊಟ್ಟರು ಈಸೂರು ಕೊಡೆವು.. 1942ರಲ್ಲೇ ಮಲೆನಾಡಿನ ಈ ಹಳ್ಳಿ ಸ್ವಾತಂತ್ರ್ಯ ಘೋಷಿಸಿಕೊಂಡಿತ್ತು..