ವಾಷಿಂಗ್ಟನ್(ಅಮೆರಿಕ): ಜನವರಿ 6ರಂದು ಅನುಭವಿಸಿದಂತೆ ಯಾವುದೇ ಹಿಂಸಾಚಾರವನ್ನು ತಡೆಗಟ್ಟಲು 20,000 ರಾಷ್ಟ್ರೀಯ ಗಾರ್ಡ್‌ಗಳನ್ನು, ಬೈಡೆನ್ ಪ್ರಮಾಣವಚನ ಕಾರ್ಯಕ್ರಮಕ್ಕೂ ಒಂದು ವಾರ ಮುಂಚಿತವಾಗಿ ನಿಯೋಜಿಸಲಾಗುತ್ತಿದ್ದು, ದೇಶಾದ್ಯಂತ ಹಿಂಸಾಚಾರ ಮತ್ತು ಅವ್ಯವಸ್ಥೆ ಸೃಷ್ಟಿಸುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ಪಡೆಯುತ್ತಿವೆ.
ಈಗಾಗಲೇ ಕ್ಯಾಪಿಟಲ್ ಹಿಲ್ ಮತ್ತು ಸುತ್ತಮುತ್ತ 15,000 ಜನರನ್ನು ನಿಯೋಜಿಸಲಾಗಿದೆ ಮತ್ತು ಜನವರಿ 20 ರಂದು ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಪ್ರಮಾಣ ವಚನ ಸಂದರ್ಭದಲ್ಲಿ ಇನ್ನೂ 5,000 ಜನರನ್ನು ನಿಯೋಜಿಸಲಾಗುತ್ತದೆ. ಇದು ಈಗ ಅಫ್ಘಾನಿಸ್ತಾನ ಮತ್ತು ಇರಾಕ್ನಲ್ಲಿನ ಅಮೆರಿಕನ್ ಸೈನಿಕರ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಓದಿ ಎರಡನೇ ಬಾರಿಗೆ ದೋಷಾರೋಪಣೆಗೆ ಗುರಿಯಾದ ಟ್ರಂಪ್!
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್, ಟ್ರಂಪ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದಂತೆ, ಕ್ಯಾಪಿಟಲ್ ಹಿಲ್ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಯಿತು.
ಓದಿ ದೋಷಾರೋಪಣೆ ನಂತರ ವಿಡಿಯೋ ಬಿಡುಗಡೆ: ಹಿಂಸಾಚಾರ ಖಂಡಿಸಿದ ಟ್ರಂಪ್
ಕ್ಯಾಪಿಟಲ್ ಕಟ್ಟಡ ಸುತ್ತ ಭದ್ರತೆಯ ಹೊಣೆ ಹೊತ್ತಿರುವ ಗಾರ್ಡ್‌ಮನ್‌ಗಳು ಮಾರಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಪಾಲಿಟಿಕೊ ವರದಿ ಮಾಡಿದೆ. ಸುಮಾರು 16 ಗುಂಪುಗಳು ಪ್ರತಿಭಟನೆ ನಡೆಸಲು ನೋಂದಾಯಿಸಿಕೊಂಡಿದ್ದು, ಸಶಸ್ತ್ರ ಸಂಘರ್ಷದ ಸಾಧ್ಯತೆಗಾಗಿ ಕಾನೂನು ಜಾರಿ ಸಂಸ್ಥೆಗಳು ತಯಾರಿ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.