ಕೊಲಂಬಿಯಾ (ಅಮೆರಿಕ): ಎರಡು ವರ್ಷಗಳ ಹಿಂದೆ ಗಂಡನ ಕಿರುಕುಳಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದ ಮಹಿಳೆ ಸಮುದ್ರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ಸ್ಥಳೀಯ ಮೀನುಗಾರರು ಆಕೆಯನ್ನು ರಕ್ಷಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಘಟನೆ ವಿವರ:
ಮದುವೆಯಾಗಿ ಮೊದಲ ಮಗು ನಂತರ ಗಂಡನಿಂದ ನಿರಂತರ ಕಿರುಕುಳ ಅನುಭವಿಸಿದ್ದೇನೆ. ಬಳಿಕ ಎರಡನೇ ಮಗುವಾಯ್ತು. ಆಗಲೂ ಗಂಡನ ಕಿರುಕುಳ ನಿಲ್ಲಲಿಲ್ಲ. ಅನೇಕ ಬಾರಿ ಈ ವ್ಯಕ್ತಿಯಿಂದ ಮನೆ ಬಿಟ್ಟು ಹೋಗಲು ಮನಸ್ಸಾದಾಗಲೆಲ್ಲಾ ಮಕ್ಕಳನ್ನು ನೋಡಿ ಸುಮ್ಮನಾಗುತ್ತಿದ್ದೆ. ಗಂಡನ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜವಾಗಲಿಲ್ಲ ಎಂದು ಗೈಟನ್ ಆರೋಪಿಸಿದ್ದಾರೆ.
- " class="align-text-top noRightClick twitterSection" data="">
2018ರಲ್ಲಿ ಮತ್ತೆ ನಮ್ಮಬ್ಬಿರ ನಡುವೆ ಕಲಹವುಂಟಾಯಿತು. ಈ ವೇಳೆ ನನ್ನ ಪತಿ ನನ್ನನ್ನು ಕೊಲ್ಲಲು ಯತ್ನಿಸಿದ್ದ. ಹೀಗಾಗಿ ನಾನು ಪತಿ ಮತ್ತು ಮಕ್ಕಳನ್ನು ಬಿಟ್ಟು ಮನೆಯಿಂದ ಓಡಿ ಬಂದೆ. ಬಳಿಕ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದೆ. ಕೆಲ ತಿಂಗಳ ನಂತರ ನಿರಾಶ್ರಿತ ಕೇಂದ್ರ ತ್ಯಜಿಸಬೇಕೆಂದು ಅಲ್ಲಿನವರು ಹೇಳಿದರು. ನನಗೆ ಮುಂದಿನ ದಾರಿ ತಿಳಿಯಲಿಲ್ಲ. ನನ್ನ ಲೈಫ್ನಲ್ಲಿ ಎಲ್ಲವೂ ಮುಗಿಯಿತು ಅಂದುಕೊಂಡೆ. ಹೀಗಾಗಿ ನಾನು ಸಾಯಲು ಸಮುದ್ರಕ್ಕೆ ಹಾರಿದೆ. ಆದ್ರೆ ಆ ದೇವರಿಗೂ ನನ್ನ ಸಾವು ಇಷ್ಟವಿಲ್ಲ ಅಂತಾ ಕಾಣಿಸುತ್ತೆ. ಹೀಗಾಗಿ ಮತ್ತೆ ಬದುಕಿಸಿದ್ದಾನೆ ಎಂದು ಏಂಜೆಲಿಕಾ ಗೈಟನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ನೀರಿನಲ್ಲಿ ತೆಲುತ್ತಿರುವ ಮಹಿಳೆಯನ್ನು ನೋಡಿದ ಮೀನುಗಾರ ರೋಲ್ಯಾಂಡೊ ಮತ್ತು ಆತನ ಸ್ನೇಹಿತ ಆಕೆಯನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಆಕೆಯನ್ನು ರಕ್ಷಿಸಿದ ವಿಡಿಯೋವನ್ನು ರೋಲ್ಯಾಂಡೊ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.