ಬ್ರೆಸಿಲಿಯಾ : ಭೀಕರ ಪ್ರವಾಹಕ್ಕೆ ಬ್ರೆಜಿಲ್ ತತ್ತರಿಸಿದೆ. ದೇಶದ ಈಶಾನ್ಯ ಭಾಗದ ಪ್ರದೇಶಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ. 280ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ, ಕೆಲವರು ನಾಪತ್ತೆಯಾಗಿದ್ದಾರೆ. 35,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ನಾಗರಿಕ ರಕ್ಷಣಾ ಮತ್ತು ಸಂರಕ್ಷಣಾ ಸಂಸ್ಥೆ ತಿಳಿಸಿದೆ.
ಬಹಿಯಾ ರಾಜ್ಯದಲ್ಲಿ ಅತಿ ಹೆಚ್ಚು ಹಾನಿ ವರದಿಯಾಗಿದೆ. ಇಲ್ಲಿನ ಸುಮಾರು 40 ನಗರಗಳು ಜಲಾವೃತವಾಗಿವೆ. 4 ಲಕ್ಷಕ್ಕೂ ಅಧಿಕ ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ. ಇದೊಂದು ದೊಡ್ಡ ದುರಂತವಾಗಿದೆ. ಇಂತಹ ಭೀಕರತೆಯನ್ನು ಬಹಿಯಾ ಕಂಡಿರಲಿಲ್ಲ ಎಂದು ಗವರ್ನರ್ ರುಯಿ ಕೋಸ್ಟಾ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಸೋಂಕಿತರ 'ರೈಲ್ವೆ ಬೋಗಿ ವಾರ್ಡ್'ನಲ್ಲಿ ಬೆಂಕಿ ಅವಘಡ.. ಸುಟ್ಟು ಕರಕಲಾದ ಬೋಗಿ
ಎರಡು ನಗರಗಳಲ್ಲಿ ಅಣೆಕಟ್ಟುಗಳು ಒಡೆದು ನೀರು ನುಗ್ಗಿದ ಪರಿಣಾಮ ರಸ್ತೆಗಳು, ಸೇತುವೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಮನೆಯೊಳಗೆ ಸಿಲುಕಿರುವ ಜನರನ್ನು ರಕ್ಷಿಸಲು ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.