ಪಾರ್ಟಿ ನಡೆಯುತ್ತಿದ್ದ ಮನೆಯ ಮೇಲೆ ಗುಂಡಿನ ದಾಳಿ 13 ಮಂದಿಗೆ ಗಾಯ - ಅಮೆರಿಕಾದಲ್ಲಿ ಗುಂಡಿನ ದಾಳಿ ಲೇಟೆಸ್ಟ್ ನ್ಯೂಸ್
ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಿದ್ದು, 13 ಮಂದಿ ಗಾಯಗೊಂಡಿರೋ ಘಟನೆ ಅಮೆರಿಕದ ಶಿಕಾಗೊದಲ್ಲಿ ನಡೆದಿದೆ.
ಶಿಕಾಗೊ(ಅಮೆರಿಕ): ಶಿಕಾಗೊದಲ್ಲಿರುವ ಮನೆಯೊಂದರಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ನಡೆದ ಗುಂಡಿನ ದಾಳಿಯಲ್ಲಿ 13 ಜನರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಶಿಕಾಗೊ ಪೊಲೀಸರು ತಿಳಿಸಿದ್ದಾರೆ.
-
US: 13 people shot at residence in Chicago
— ANI Digital (@ani_digital) December 22, 2019 " class="align-text-top noRightClick twitterSection" data="
Read @ANI Story | https://t.co/PngQIGbJgC pic.twitter.com/AcOyJelL1B
">US: 13 people shot at residence in Chicago
— ANI Digital (@ani_digital) December 22, 2019
Read @ANI Story | https://t.co/PngQIGbJgC pic.twitter.com/AcOyJelL1BUS: 13 people shot at residence in Chicago
— ANI Digital (@ani_digital) December 22, 2019
Read @ANI Story | https://t.co/PngQIGbJgC pic.twitter.com/AcOyJelL1B
ಏಪ್ರಿಲ್ನಲ್ಲಿ ಹತನಾದ ವ್ಯಕ್ತಿಯ ಸ್ಮರಣಾರ್ಥ ಮನೆಯಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು. ಈ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. 16 ರಿಂದ 48 ವರ್ಷದೊಳಗಿನ 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀರು ತಿಳಿಸಿದ್ದಾರೆ.
ಘಟನೆ ಸಂಬಂಧ ಇಬ್ಬರನ್ನ ವಿಚಾರಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಒಬ್ಬ ಶಸ್ತ್ರಾಸ್ತ ಸಮೇತ ಸಿಕ್ಕಿಬಿದ್ದಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿಂದೆ ನಡೆದಿರುವ ಕೊಲೆಗೂ, ಈ ಶೂಟೌಟ್ ಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.