ನ್ಯೂಯಾರ್ಕ್: ಕ್ರಿಸ್‌ಮಸ್ ಹಬ್ಬದ ನಂತರ ಯುರೋಪ್ ಮತ್ತು ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಕ್ರಿಸ್‌ಮಸ್ ವಾರಾಂತ್ಯದ ಜಾಗತಿಕ ಪ್ರಯಾಣವೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ವಿಶ್ವಾದ್ಯಂತ ಸುಮಾರು 11,500 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅನೇಕ ವಿಮಾನಗಳ ಪ್ರಯಾಣದ ಸಮಯವೂ ವಿಳಂಬವಾಗಿವೆ. ವರ್ಷದ ಅತ್ಯಂತ ಜನನಿಬಿಡ ಪ್ರಯಾಣದ ಅವಧಿಯಲ್ಲಿ ಕೊರೊನಾವೈರಸ್ ರೂಪಾಂತರ ಒಮಿಕ್ರಾನ್ ಪ್ರಕರಣಗಳಿಂದಾಗಿ ಸಿಬ್ಬಂದಿ ಕೊರತೆ ಉದ್ಭವಿಸಿದೆ ಎಂದು ಅನೇಕ ವಿಮಾನಯಾನ ಸಂಸ್ಥೆಗಳು ಹೇಳುತ್ತವೆ.
ಇದನ್ನೂ ಓದಿ: Night Curfew: ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ, ಏನೆಲ್ಲಾ ನಿರ್ಬಂಧಗಳು?
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ರೋಗ ಲಕ್ಷಣಗಳಿಲ್ಲದ ಕೋವಿಡ್ ಪ್ರಕರಣಗಳ ಐಸೋಲೇಷನ್ ಅವಧಿಯನ್ನು 10 ರಿಂದ 5 ದಿನಗಳವರೆಗೆ ಇಳಿಸಿದೆ. ಈ ಮೂಲಕ ಹೆಚ್ಚಿನ ಪ್ರಯಾಣಿಕರು ಶೀಘ್ರವಾಗಿ ಕೆಲಸಕ್ಕೆ ಮರಳಲು ಮತ್ತು ಸಾಮೂಹಿಕ ಕಾರ್ಮಿಕರ ಕೊರತೆ ನೀಗಿಸಲು ಹೊಸ ಮಾರ್ಗ ಕಂಡುಕೊಂಡಿದೆ.