ವಾಷಿಂಗ್ಟನ್: ಕಾನೂನು ಬಾಹಿರವಾಗಿ ಉಳಿದುಕೊಂಡ ಆರೋಪದ ಮೇಲೆ ಫೆಡರಲ್ ಕಾನೂನು ಜಾರಿ ಸಂಸ್ಥೆಗಳು ಭಾರತದ 11 ವಿದ್ಯಾರ್ಥಿಗಳು ಸೇರಿದಂತೆ ಸೇರಿದಂತೆ 15 ಮಂದಿಯನ್ನು ಬಂಧಿಸಿವೆ.
ಈ ವಿದ್ಯಾರ್ಥಿಗಳನ್ನು ಬೋಸ್ಟನ್, ವಾಷಿಂಗ್ಟನ್, ಹೂಸ್ಟನ್, ಲಾಡರ್ ಡೇಲ್, ನೆವಾರ್ಕ್, ಪಿಟ್ಸ್‌ಬರ್ಗ್ ಮತ್ತು ಹ್ಯಾರಿಸ್ಬರ್ಗ್ನ ವಿವಿಧ ಸ್ಥಳಗಳಿಂದ ಬುಧವಾರ ಬಂಧಿಸಲಾಗಿದೆ. 11 ಭಾರತೀಯ ಪ್ರಜೆಗಳಲ್ಲದೆ, ಇಬ್ಬರು ಲಿಬಿಯನ್ನರು, ಒಬ್ಬ ಸೆನೆಗಲೀಸ್ ಮತ್ತು ಒಬ್ಬ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿದ್ದಾರೆ.
ಅಮೆರಿಕದಲ್ಲಿ ಉಳಿಯಲು ಒಪಿಟಿ ಕಾರ್ಯಕ್ರಮವನ್ನು ಮೋಸದಿಂದ ಬಳಸಿದ ವಲಸೆ ರಹಿತ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಾನೂನು ಜಾರಿ ಕಾರ್ಯಾಚರಣೆ ಆಪರೇಷನ್ ಆಪ್ಟಿಕಲ್ ಇಲ್ಯೂಷನ್‌ನ ಪರಿಣಾಮವಾಗಿ ಇವರನ್ನು ಬಂಧಿಸಲಾಗಿದೆ ಎಂದು ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಅಧಿಕಾರಿಗಳು ತಿಳಿಸಿದ್ದಾರೆ.
"ಇದು ಟ್ರಂಪ್ ಆಡಳಿತವು ಅಮೆರಿಕವನ್ನು ಮೊದಲ ಸ್ಥಾನಕ್ಕೆ ತರುವುದಲ್ಲದೆ ವಲಸೆ ವ್ಯವಸ್ಥೆಯ ಕಾನೂನುಗಳನ್ನು ಜಾರಿಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಕ್ರಮದ ಮತ್ತೊಂದು ಉದಾಹರಣೆಯಾಗಿದೆ" ಎಂದು ಕಾರ್ಯಕಾರಿ ಉಪ ಕಾರ್ಯದರ್ಶಿ ಕೆನ್ ಕುಕಿನೆಲ್ಲಿ ಹೇಳಿದ್ದಾರೆ.