ಶಿಕಾಗೊ(ಅಮೆರಿಕಾ): ಶಿಕಾಗೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹತ್ತು ಜನರು ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿದ್ದಾರೆ.
ಶಿಕಾಗೊ ಮೆಮೊರಿಯಲ್ ಡೇ ಆಚರಣೆ ದಿನವೇ ಈ ಗುಂಡಿನ ದಾಳಿ ನಡೆದಿದೆ. 2015 ರಲ್ಲೂ ಇದೇ ದಿನ 12 ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.
ಅದರಂತೆ 2018 ರಲ್ಲಿ ಏಳು ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದರು. 2017 ರಲ್ಲಿ ಆರು ಜನರು ಸಾವನ್ನಪ್ಪಿದ್ದು, 44 ಮಂದಿ ಗಾಯಗೊಂಡಿದ್ದರು ಹಾಗೂ 2016 ರಲ್ಲಿ ಆರು ಜನರು ಸಾವನ್ನಪ್ಪಿದ್ದು, 56 ಮಂದಿ ಗಾಯಗೊಂಡಿದ್ದರು.
2015ರಲ್ಲಿ ನಡೆದ ಗುಂಡಿನ ದಾಳಿಯಿಂದ ಅತೀ ಹೆಚ್ಚು ಜನರು ಶಿಕಾಗೊದಲ್ಲಿ ಪ್ರಾಣತೆತ್ತಿದ್ದು, ಇದನ್ನು ಹೊರತುಪಡಿಸಿದರೆ ಈ ವರ್ಷದ ಸಾವಿನ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕಾವಾಗಿದೆ ಎಂದು ಸನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.