ETV Bharat / international

ಕೊಲೆ ಮಾಡಿ10 ಶವಗಳನ್ನು ಬಿಟ್ಟು ಹೋದ ಚಾಲಕ!

author img

By

Published : Jan 7, 2022, 7:15 AM IST

Updated : Jan 7, 2022, 9:16 AM IST

ಗವರ್ನರ್ ಕಚೇರಿಯ ಮುಂದೆ ಪಿಕ್​ಅಪ್​ ವಾಹನದಲ್ಲಿ 10 ಶವಗಳನ್ನು ಬಿಟ್ಟು ಹೋದ ಘಟನೆ ಉತ್ತರ - ಮಧ್ಯ ಮೆಕ್ಸಿಕನ್ ರಾಜ್ಯವಾದ ಝಕಾಟೆಕಾಸ್​​​ನಲ್ಲಿ ನಡೆದಿದೆ.

bodies left in front of governor office, bodies left in front of Mexican governor office, Mexican governor office, Mexican governor office news, ಗವರ್ನರ್​ ಕಚೇರಿ ಬಳಿ ಮೃತ ದೇಹಗಳನ್ನು ಬಿಟ್ಟು ಹೋದ ದುಷ್ಕರ್ಮಿಗಳು, ಮೆಕ್ಸಿಕೊದ ಗವರ್ನರ್​ ಕಚೇರಿ ಬಳಿ ಮೃತ ದೇಹಗಳನ್ನು ಬಿಟ್ಟು ಹೋದ ದುಷ್ಕರ್ಮಿಗಳು, ಮೆಕ್ಸಿಕೊದ ಗವರ್ನರ್​ ಕಚೇರಿ, ಮೆಕ್ಸಿಕೊದ ಗವರ್ನರ್​ ಕಚೇರಿ ಸುದ್ದಿ,
ವಗಳನ್ನು ಬಿಟ್ಟು ಹೋದ ಚಾಲಕ

ಮೆಕ್ಸಿಕೊ ಸಿಟಿ: ಉತ್ತರ - ಮಧ್ಯ ಮೆಕ್ಸಿಕನ್ ರಾಜ್ಯವಾದ ಝಕಾಟೆಕಾಸ್‌ನಲ್ಲಿ ಗುರುವಾರ ಗವರ್ನರ್ ಕಚೇರಿಯ ಮುಂದೆ ದಾಳಿಕೋರರು 10 ಜನರ ಹಲ್ಲೆ ಮಾಡಿ ಹತ್ಯೆ ಮಾಡಿ ದೇಹಗಳನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ.

ರಾಜ್ಯ ರಾಜಧಾನಿಯ ಮುಖ್ಯ ಪ್ಲಾಜಾದ ಕ್ರಿಸ್ಮಸ್ ಟ್ರೀ ಬಳಿ ಮುಂಜಾನೆ ಪಿಕಪ್ ಟ್ರಕ್‌ನಲ್ಲಿ ದೇಹಗಳಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಗವರ್ನರ್ ಡೇವಿಡ್ ಮೊನ್ರಿಯಲ್ ಮಾತನಾಡಿ, ಪತ್ತೆಯಾಗಿರುವ ದೇಹಗಳ ಮೇಲೆ ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಭಯಾನಕ ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವ್ಯಕ್ತಿಯೊಬ್ಬ ಟ್ರಕ್​ನ್ನು ಪ್ಲಾಜಾ ಬಳಿಗೆ ತಂದು ನಂತರ ವಾಹನ ಅಲ್ಲೆ ಬಿಟ್ಟು ನಿರ್ಗಮಿಸಿದ್ದಾನೆ. ತನಿಖೆಯಲ್ಲಿ ಸಹಾಯ ಮಾಡಲು ಫೆಡರಲ್ ಏಜೆನ್ಸಿಗಳು ಝಕಾಟೆಕಾಸ್‌ಗೆ ಕಳುಹಿಸುವುದಾಗಿ ಇಲಾಖೆ ಹೇಳಿದೆ.

ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್​​ ಗೆ ಮೆಕ್ಸಿಕೋದಲ್ಲಿ ನರಹತ್ಯೆಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. 2021 ರ ಮೊದಲ 11 ತಿಂಗಳುಗಳಲ್ಲಿ 31,615 ಹತ್ಯೆಗಳು ನಡೆದಿವೆ, 2020 ರಲ್ಲಿ 32,814 ಕೊಲೆಗಳು ದೇಶದಲ್ಲಿ ನಡೆದಿದ್ದವು.

ಇದನ್ನೂ ಓದಿ:

Last Updated : Jan 7, 2022, 9:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.