ETV Bharat / international

ಮಾಡೆರ್ನಾ ಕೋವಿಡ್​ ಲಸಿಕೆಯ ತುರ್ತು ಬಳಕೆಗೆ ಡಬ್ಲ್ಯುಹೆಚ್​​ಒ ಅನುಮತಿ

author img

By

Published : May 1, 2021, 11:48 AM IST

ಸ್ವಿಟ್ಜರ್​ಲ್ಯಾಂಡ್ ಮೂಲದ ಮಾಡೆರ್ನಾ ಕೋವಿಡ್​ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸಿದೆ. ಇದು ತುರ್ತು ಬಳಕೆಗೆ ಅನುಮತಿ ಪಡೆದ ಜಗತ್ತಿನ ಐದನೇ ಕೋವಿಡ್​ ಲಸಿಕೆಯಾಗಿದೆ.

WHO gives Emergency Use Authorisation to Moderna
ಮಾಡೆರ್ನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ

ಜಿನೇವಾ (ಸ್ವಿಟ್ಜರ್​ಲ್ಯಾಂಡ್)​ : ವಿಶ್ವ ಆರೋಗ್ಯ ಸಂಸ್ಥೆ ಮಾಡೆರ್ನಾ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಮೂಲಕ ಕೋವಿಡ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಆಯುಧ ದೊರೆತಂತಾಗಿದೆ.

ದಿ ಹಿಲ್ ಪ್ರಕಾರ, ಮಾಡೆರ್ನಾ, ಫೈಝರ್ -ಬಯೋಟೆಕ್, ಆಸ್ಟ್ರಾಜೆನೆಕಾ-ಎಸ್​ಕೆ ಬಯೋ ಮತ್ತು ಸೆರಂ ಇನ್ಸ್​ಟ್ಯೂಟ್​ ಆಫ್ ಇಂಡಿಯಾದ ಲಸಿಕೆಗಳು ಡಬ್ಲ್ಯುಹೆಚ್​ಒ ತುರ್ತು ಬಳಕೆಯ ಕೋವಿಡ್ ಲಸಿಕೆಯ ಪಟ್ಟಿಯಲ್ಲಿವೆ.

ಇವತ್ತು ವಿಶ್ವ ಆರೋಗ್ಯ ಸಂಸ್ಥೆಯು ಮಾಡೆರ್ನಾ ಲಸಿಕೆ (ಎಂಆರ್​ಎನ್​ಎ 1273 ) ಯನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸಿದೆ. ಇದು ತುರ್ತು ಬಳಕೆಯ ಪಟ್ಟಿಯಲ್ಲಿ ಸ್ಥಾನ ಪಡೆದ ಐದನೇ ಲಸಿಕೆಯಾಗಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಓದಿ : ಇಂದು ರಷ್ಯಾದಿಂದ ಭಾರತಕ್ಕೆ ಬರಲಿದೆ 'ಸ್ಪುಟ್ನಿಕ್ ವಿ' ಲಸಿಕೆ

18 ವರ್ಷ ಮೇಲ್ಪಟ್ಟವರಿಗೆ ಮಾಡೆರ್ನಾ ಲಸಿಕೆ ಬಳಸಬಹುದು. ಡಬ್ಲ್ಯುಹೆಚ್​ಒ ಪ್ರಕಾರ ಈ ಲಸಿಕೆ ಶೇ. 94.1 ರಷ್ಟು ಪರಿಣಾಮಕಾರಿಯಾಗಿದೆ. -250 ಡಿಗ್ರಿ ಸೆಲ್ಸಿಯಸ್​ನಿಂದ -150 ಡಿಗ್ರಿ ಸೆಲ್ಸಿಯಸ್​ ತಾಪಮಾನದಲ್ಲಿ ಈ ಲಸಿಕೆಯನ್ನು ಸಂಗ್ರಹಿಸಿಡಬೇಕು. 2 ಡಿಗ್ರಿ ಸೆಲ್ಸಿಯಸ್​ನಿಂದ 8 ಡಿಗ್ರಿ ಸೆಲ್ಸಿಯಸ್​ ತಾಪಮಾನದಲ್ಲಿ 30 ದಿನಗಳವರೆಗೂ ಸಂರಕ್ಷಿಸಿಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.