ETV Bharat / international

ಲಿಬಿಯಾದಲ್ಲಿ ಅಕ್ರಮ ವಲಸಿಗರ ದಾರುಣ ಹತ್ಯೆ: ವಿಶ್ವಸಂಸ್ಥೆ ತೀವ್ರ ಖಂಡನೆ

ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿರುವ ಮಬನಿ ಬಂಧನ ಕೇಂದ್ರದಲ್ಲಿ ಆರು ಮಂದಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಆರೋಪಿಸಿದ್ದು, ಲಿಬಿಯಾ ಸರ್ಕಾರವನ್ನು ತೀವ್ರವಾಗಿ ಖಂಡಿಸಿದೆ.

author img

By

Published : Oct 10, 2021, 7:36 AM IST

UN migration agency condemns killing of illegal immigrants in Libyan detention center
ಬಂಧನ ಕೇಂದ್ರದಲ್ಲಿಟ್ಟು ವಲಸಿಗರ ಹತ್ಯೆ ಆರೋಪ: ವಿಶ್ವಸಂಸ್ಥೆಯ ಏಜೆನ್ಸಿಯಿಂದ ಖಂಡನೆ

ನ್ಯೂಯಾರ್ಕ್(ಅಮೆರಿಕ): ಅಕ್ರಮ ವಲಸಿಗರನ್ನು ಬಂಧನ ಕೇಂದ್ರದಲ್ಲಿಟ್ಟು (detention centers) ಗುಂಡು ಹಾರಿಸಿದ ಪ್ರಕರಣವನ್ನು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ಗಂಭೀರವಾಗಿ ಪರಿಗಣಿಸಿದ್ದು ಲಿಬಿಯಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಅಕ್ರಮ ಬಂಧನದಲ್ಲಿ ಇಟ್ಟಿದ್ದನ್ನು ಪ್ರಶ್ನಿಸಿ ಬಂಧನ ಕೇಂದ್ರದೊಳಗೆ ಪ್ರತಿಭಟನೆ ನಡೆಸುತ್ತಿದ್ದ ವಲಸಿಗರ ಮೇಲೆ ಗುಂಡು ಹಾರಿಸಿ ಕೊಂದಿದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಟ್ರಿಪೋಲಿಯಲ್ಲಿರುವ ಮಬನಿ ಬಂಧನ ಕೇಂದ್ರದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿ ವಲಸಿಗರ ಮೇಲೆ ಗುಂಡು ಹಾರಿಸಿದ್ದು, ಆರು ಮಂದಿ ಸಾವನ್ನಪ್ಪಿ, 24 ಮಂದಿ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಲಿಬಿಯಾದ ಗೃಹ ಸಚಿವ, ಈ ಘಟನೆಯಲ್ಲಿ ಕೇವಲ ಓರ್ವ ವ್ಯಕ್ತಿ ಮಾತ್ರ ಸಾವನ್ನಪ್ಪಿದ್ದಾನೆ. ಆತ ಬಂಧನ ಕೇಂದ್ರವನ್ನು ಬಿಡಬೇಕಾದರೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಎಂದು ಸ್ಪಷ್ಟನೆ ನೀಡಿದ್ದಾರೆ.

2011ರಲ್ಲಿ ಸರ್ವಾಧಿಕಾರಿ ಗಡಾಫಿಯ ಸಾವಿನ ನಂತರ ಲಿಬಿಯಾದಲ್ಲಿ ಅಭದ್ರತೆ ಹೆಚ್ಚಾಗಿದೆ. ಇದರಿಂದಾಗಿ ಬೇರೆ ದೇಶಗಳಿಂದ ವಲಸೆ ಬರುವವರಿಗೆ ಈ ದೇಶ ತಾಣವಾಗಿ ಮಾರ್ಪಾಡಾಗಿದೆ. ಈಗಿನ ಮೊಹಮದ್ ಅಲ್-ಮೆನ್ಫಿ ನೇತೃತ್ವದ ಲಿಬಿಯಾ ಸರ್ಕಾರ ಅತ್ಯಂತ ಎಚ್ಚರಿಕೆ ನೀಡಿದರೂ ಸಾಕಷ್ಟು ಮಂದಿ ವಲಸಿಗರು ಧಾವಿಸುತ್ತಿದ್ದರು.

ಇಂಥವರನ್ನು ಲಿಬಿಯಾದ ಡಿಟೆನ್​ಷನ್ ಸೆಂಟರ್​ಗಳಲ್ಲಿ ಇರಿಸಲಾಗಿದ್ದು, ಶುಕ್ರವಾರ ಮಬನಿ ಬಂಧನ ಕೇಂದ್ರದಲ್ಲಿ ಕೆಲವರ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ಕಾಂಗೋ ನದಿಯಲ್ಲಿ ಮಗುಚಿದ ಹಡಗು: 50 ಕ್ಕೂ ಹೆಚ್ಚು ಮಂದಿ ಜಲಸಮಾಧಿ.. 70 ಕ್ಕೂ ಅಧಿಕ ಜನರು ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.