ಕೇಪ್ಟೌನ್: ಕೊನೆಯ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ದ.ಆಫ್ರಿಕಾ ತಂಡ ಪಾಕಿಸ್ತಾನದ ವಿರುದ್ಧ 3-2ರಲ್ಲಿ ಸರಣಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಪಾಕಿಸ್ತಾನವನ್ನು ಬ್ಯಾಟಿಂಗ್ಗೆ ಅಹ್ವಾನ ನೀಡಿದ ಆಫ್ರಿಕಾ ತಂಡ ಪಾಕ್ ತಂಡವನ್ನು 240 ರನ್ಗಳಿಗೆ ನಿಯಂತ್ರಿಸಿತು.
ಡೇಲ್ ಸ್ಟೈನ್ 1, ಕಗಿಸೋ ರಬಡಾ, ಡ್ವೈನ್ ಪೆಟೋರಿಯಸ್ 2, ವಿಲಿಯಮ್ ಮಲ್ಡರ್ 1, ಆಂಡಿಲೇ ಪೆಹ್ಲುಕ್ವಾಯೋ 2 ವಿಕೆಟ್ ಪಡೆದರು.
A disciplined combined bowling effort, a blitz from Quinton de Kock, and a cool pair of half-centuries from Faf du Plessis and Rassie van der Dussen were enough to seal the series for South Africa in the fifth ODI against Pakistan.#SAvPAK REPORT 👇https://t.co/mSse1qNw10 pic.twitter.com/qkkmyGcjR6
— ICC (@ICC) January 30, 2019 " class="align-text-top noRightClick twitterSection" data="
">A disciplined combined bowling effort, a blitz from Quinton de Kock, and a cool pair of half-centuries from Faf du Plessis and Rassie van der Dussen were enough to seal the series for South Africa in the fifth ODI against Pakistan.#SAvPAK REPORT 👇https://t.co/mSse1qNw10 pic.twitter.com/qkkmyGcjR6
— ICC (@ICC) January 30, 2019A disciplined combined bowling effort, a blitz from Quinton de Kock, and a cool pair of half-centuries from Faf du Plessis and Rassie van der Dussen were enough to seal the series for South Africa in the fifth ODI against Pakistan.#SAvPAK REPORT 👇https://t.co/mSse1qNw10 pic.twitter.com/qkkmyGcjR6
— ICC (@ICC) January 30, 2019
241 ರನ್ಗಳ ಮೊತ್ತ ಬೆನ್ನೆತ್ತಿದ ಆಫ್ರಿಕಾ ಪಡೆ 40 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಆರಂಭದಿಂದಲೇ ಅಬ್ಬರಿಸಿದ ಕ್ವಿಂಟನ್ ಡಿ ಕಾಕ್ 83, ರೀಝಾ ಹೆಂಡ್ರಿಕ್ಸ್ 34, ನಾಯಕ ಪ್ಲೆಸಿಸ್ ಔಟಾಗದೇ 50 ಹಾಗೂ ವ್ಯಾನ್ ಡರ್ ಡಸನ್ ಔಟಾಗದೆ 50 ರನ್ ಗಳಿಸಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಉಸ್ಮಾನ್ ಖಾನ್, ಶಹೀನ್ ಆಫ್ರಿದಿ, ಅಮೀರ್ ತಲಾ ಒಂದು ವಿಕೆಟ್ ಪಡೆದರು. 58 ಎಸೆತಗಳಲ್ಲಿ 83 ರನ್ಗಳಿಸಿದ ಡಿಕಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇಮಾಮ್ ಹುಲ್ ಹಕ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.