ಕೇಪ್ಟೌನ್: ಪಾಕಿಸ್ತಾನದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ದ.ಆಫ್ರಿಕಾ ತಂಡ 6 ರನ್ಗಳ ರೋಚಕ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ 20 ಓವರ್ಗಳಲ್ಲಿ 192 ರನ್ಗಳಿಸಿತ್ತು. ಇದನ್ನು ಬೆನ್ನೆತ್ತಿದ ಪಾಕ್ ತಂಡ 20 ಓವರ್ಗಳಲ್ಲಿ 186 ರನ್ಗಳಿಸುವ ಮೂಲಕ 6 ರನ್ಗಳಿಂದ ಸೋಲನುಭವಿಸಿತು.