ETV Bharat / international

ಪತ್ನಿಯನ್ನು ಮೇಕಪ್‌ರಹಿತವಾಗಿ ನೋಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ! - ಮೇಕಪ್ ಮತ್ತು ಡೈವೋರ್ಸ್

ಮೊದಲಿಗೆ ಆಕೆಯನ್ನು ಫೇಸ್​ಬುಕ್​ನಲ್ಲಿ ನೋಡಿದ್ದೆ. ಆಗ ಆಕೆ ತುಂಬಾ ಸುಂದರವಾದ ಭಾವಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದಳು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ವ್ಯಕ್ತಿ ಹೇಳಿಕೆ ನೀಡಿದ್ದಾನೆ.

Man seeks divorce after seeing wife without makeup in Egypt
ಪತ್ನಿಯನ್ನು ಮೇಕಪ್ ರಹಿತವಾಗಿ ನೋಡಿದ ಪತಿ​: ಆಮೇಲೆ ನಡೆದಿದ್ದೇ ಬೇರೆ..
author img

By

Published : Nov 5, 2021, 6:35 PM IST

ಕೈರೋ(ಈಜಿಪ್ಟ್): ವ್ಯಕ್ತಿಯೋರ್ವ ವಿಚಿತ್ರವಾದ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದು, ಈ ಕುರಿತು ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ಕೂಡಾ ದಾಖಲಿಸಿದ್ದಾನೆ. ಈ ಘಟನೆ ನಡೆದಿರುವುದು ಈಜಿಪ್ಟ್​​ನಲ್ಲಿ.

'ವಿವಾಹವಾದ ಒಂದು ತಿಂಗಳ ಬಳಿಕ ಪತ್ನಿಯನ್ನು ಮೇಕಪ್‌ರಹಿತವಾಗಿ ನೋಡಿ, ನಾನು ಆಘಾತಕ್ಕೆ ಒಳಗಾಗಿದ್ದೇನೆ. ನನಗೆ ನನ್ನ ಪತ್ನಿಯಿಂದ ವಿಚ್ಛೇದನ ಕೊಡಿಸಿ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದು, ಮೇಕಪ್ ಇಲ್ಲದೇ ನನ್ನ ಪತ್ನಿ ಕುರೂಪಿಯಾಗಿ ಕಾಣುತ್ತಾಳೆ' ಎಂದು ಆತ ಹೇಳಿಕೆ ನೀಡಿದ್ದಾನೆ.

'ವಿವಾಹಕ್ಕೂ ಮೊದಲು ಆಕೆ ಅತಿಯಾದ ಮೇಕಪ್ ಮಾಡಿಕೊಂಡು ಸುಂದರವಾಗಿ ಕಾಣುತ್ತಿದ್ದಳು. ಇದರಿಂದ ನಾನು ಮೋಸ ಹೋಗಿದ್ದೇನೆ. ಮೊದಲಿಗೆ ಆಕೆಯನ್ನು ಫೇಸ್​ಬುಕ್​ನಲ್ಲಿ ನೋಡಿದ್ದೆ. ಆಗ ಆಕೆ ತುಂಬಾ ಸುಂದರವಾದ ಭಾವಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಹಲವು ಬಾರಿ ಆಕೆಯನ್ನು ಭೇಟಿಯಾದ ಬಳಿಕ ಮದುವೆಯಾಗಲು ನಿರ್ಧರಿಸಿದ್ದೆ' ಎಂದು ಆತ ಹೇಳಿದ್ದಾನೆ.

'ಮೇಕಪ್ ಇಲ್ಲದೇ ಮೊದಲು ಕಾಣುವುದಕ್ಕಿಂತ ತುಂಬಾ ಭಿನ್ನವಾಗಿ ಆಕೆ ಕಾಣುತ್ತಾಳೆ. ಮದುವೆಗೂ ಮುನ್ನ ಕಾಣುತ್ತಿದ್ದ ಹಾಗೆ ಈಗ ಕಾಣುತ್ತಿಲ್ಲ. ಇದೇ ಕಾರಣದಿಂದ ನಾನು ಆಕೆಗೆ ವಿಚ್ಛೇದನ ಕೊಡಲು ನಿರ್ಧರಿಸಿದ್ದೇನೆ' ಎಂದ ಆತ ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ:ಬೈಕ್​​ನಲ್ಲಿ ಪಟಾಕಿ ಸಾಗಿಸುವಾಗ ಸಿಡಿದ ಕ್ರ್ಯಾಕರ್ಸ್​.. ತಂದೆ-ಮಗ ಸಜೀವದಹನ - Video

ETV Bharat Logo

Copyright © 2025 Ushodaya Enterprises Pvt. Ltd., All Rights Reserved.