ETV Bharat / international

ಇಸ್ಲಾಮಿಕ್ ಉಗ್ರರ ಅಟ್ಟಹಾಸ: ಫುಟ್ಬಾಲ್​​ ಮೈದಾನದಲ್ಲಿ 50ಕ್ಕೂ ಹೆಚ್ಚು ಜನರ ಶಿರಚ್ಛೇದ!!

ಆಫ್ರಿಕಾದಲ್ಲಿ ಅಟ್ಟಹಾಸ ಮೆರೆದಿರುವ ಇಸ್ಲಾಮಿಕ್ ಉಗ್ರರು ಪುಟ್ಬಾಲ್ ಕ್ರೀಡಾಂಗಣದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರ ಶಿರಚ್ಛೇದ ಮಾಡಿದ್ದಾರೆ ಎಂದು ವರದಿಯಾಗಿದೆ.

fotball pitch into execution ground
ಇಸ್ಲಾಮಿಕ್ ಉಗ್ರರ ಅಟ್ಟಹಾಸ
author img

By

Published : Nov 11, 2020, 10:22 AM IST

ನವದೆಹಲಿ: ಆಫ್ರಿಕಾದ ಉತ್ತರ ಮೊಜಾಂಬಿಕ್‌ನ ಹಳ್ಳಿಯೊಂದರಲ್ಲಿ ಇಸ್ಲಾಮಿಕ್ ಉಗ್ರರು ಸುಮಾರು 50ಕ್ಕೂ ಹೆಚ್ಚು ಜನರ ಶಿರಚ್ಛೇದ ಮಾಡಿದ್ದಾರೆ ಎನ್ನಲಾಗಿದೆ.

ಉಗ್ರರು ಫುಟ್ಬಾಲ್ ಕ್ರೀಡಾಂಗಣವನ್ನು ಶಿರಚ್ಛೇದ ಮಾಡಲು ಬಳಸಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ ಗ್ರಾಮದ ಮೇಲೆ ದಾಳಿ ನಡೆಸಿದ ಉಗ್ರರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇತರ ಗ್ರಾಮದಲ್ಲಿ ಇನ್ನೂ ಕೆಲವು ಜನರ ಶಿರಚ್ಛೇದ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 2017 ರಿಂದ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದಲ್ಲಿ ಉಗ್ರರು ಸರಣಿ ದಾಳಿ ನಡೆಸುತ್ತಿದ್ದಾರೆ.

ಇಲ್ಲಿಯವರೆಗೆ ಸಂಘರ್ಷ ಪೀಡಿತ ಪ್ರಾಂತ್ಯದಲ್ಲಿ ಕನಿಷ್ಠ 2,000 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಈ ಪ್ರದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ, ಈ ಗುಂಪು ನಿರುದ್ಯೋಗ ಮತ್ತು ಬಡತನದಿಂದ ಸಂಕಷ್ಟದಲ್ಲಿರುವ ಯುವಕರನ್ನು ಸಂಘಟನೆಗೆ ನೇಮಿಸಿಕೊಳ್ಳುತ್ತಿದೆ.

ಇತ್ತೀಚಿನ ದಾಳಿಯು ಭಯೋತ್ಪಾದಕರ ಸರಣಿಯ ದಾಳಿಯಲ್ಲಿ ಅತ್ಯಂತ ಭೀಕರ ಎಂದು ಹೇಳಲಾಗುತ್ತದೆ. ದಾಳಿಯ ಉಗ್ರತೆಯು, ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಲು ಕರೆ ನೀಡಿದ ಜನರಿಗೆ ಆಘಾತವನ್ನುಂಟು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.