ಬಮಾಕೋ: ಅಪರಿಚಿತ ಬಂದೂಕುದಾರಿಗಳು 10 ಗ್ರಾಮಸ್ಥರನ್ನು ಕೊಂದಿದ್ದಲ್ಲದೆ, ಇಡೀ ಊರನ್ನೇ ಸುಟ್ಟು ಹಾಕಿದ್ದಾರೆ. ಈ ಗ್ರಾಮ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಜರುಗಿದ ಜಿಹಾದಿ ಮತ್ತು ಅಂತರ್ ಜನಾಂಗೀಯ ಹಿಂಸಾಚಾರಕ್ಕಿಂತ ಈ ರಕ್ತಪಾತ ಅತ್ಯಂತ ಕ್ರೂರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ಗಡಿಯ ಸಮೀಪವಿರುವ ಕೌರ್ಕಂಡಾ ಗ್ರಾಮದ ಮೇಲೆ ದಾಳಿಕೋರರು ಸೋಮವಾರ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮುಖ್ಯಸ್ಥ ಯೂಸೂಪ್ ಟೋಗೊ ತಿಳಿಸಿದ್ದಾರೆ.
ಸಣ್ಣ ಗುಂಪುಗಳಾಗಿ ಶಸ್ತ್ರಾಸ್ತ್ರಗಳೊಂದಿಗೆ ಮಾರ್ಚ್ 9ರಂದು ರಾತ್ರಿ 8ಗಂಟೆ ಸುಮಾರಿಗೆ ಮೋಟಾರ್ ಸೈಕಲ್ಗಳ ಮೂಲಕ ಗ್ರಾಮ ಪ್ರವೇಶಿಸಿದರು. ಬಳಿಕ ದಾಳಿಕೋರರು ಹಳ್ಳಿಯನ್ನ ಸುತ್ತುವರೆದು ದಾಳಿ ನಡೆಸಿದ್ದಾರೆ. ಆಗ 10 ಜನರಿಗೆ ಗುಂಡು ಹಾರಿಸಿದರು. ಇಡೀ ಗ್ರಾಮಕ್ಕೆ ಬೆಂಕಿ ಹಚ್ಚಿದರು ಎಂದು ಹತ್ತಿರದ ಪಟ್ಟಣ ಬ್ಯಾಂಕಾಸ್‌ನ ಅಧಿಕಾರಿ ಯಾನಾ ಡೊಲೊ ಹೇಳಿದ್ದಾರೆ.
ದಾಳಿಕೋರರು ಯಾರು? ಎಲ್ಲಿಂದ ಬಂದರು ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ. ಡೊಲೊ ಅವರ ಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿದರು. ಅಲ್ಲದೇ, ಒಂದು ವರ್ಷದ ಅಂತರದಲ್ಲಿ ಎರಡು ಹತ್ಯಾಕಾಂಡಗಳನ್ನು ಒಗೊಸಾಗೌ ಎಂಬ ಕಂಡಿದೆ. ಈಗ ಅದರ ಸಾಲಿಗೆ ಕೌರ್ಕಂಡಾ ಕೂಡ ಸೇರಿತು.
2019ರ ಫೆಬ್ರವರಿ 14ರಂದು ಒಗೊಸಾಗೌದಲ್ಲಿ 31 ಜನರನ್ನು, ಬಳಿಕ ಮಾರ್ಚ್ ತಿಂಗಳಲ್ಲೇ ಒಂದೇ ಜನಾಂಗದ 160 ಮಂದಿ ಗ್ರಾಮಸ್ಥರನ್ನು ಹತ್ಯೆ ಮಾಡಲಾಗಿತ್ತು. 2012ರಲ್ಲಿ ಪಶ್ಚಿಮ ಆಫ್ರಿಕಾದ ಉತ್ತರದಲ್ಲಿ ಜಿಹಾದಿ ದಂಗೆ ಸಂಭವಿಸಿತ್ತು. ಆ ಕಾರಣದಿಂದಲೇ ಅಂತರ್ ಜನಾಂಗೀಯ ಹಿಂಸಾಚಾರ ನಡೆದಿದೆ. ಅಂದು ನಡೆದ ದಂಗೆ ಸಾವಿರಾರು ಜನರನ್ನು ಬಲಿ ಪಡೆದುಕೊಂಡಿತು. ದಶ ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು.