ಕ್ವಾರಾ (ನೈಜೀರಿಯಾ): ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದು, 16 ಜನರು ಗಾಯಗೊಂಡಿರುವ ಘಟನೆ ನೈಜೀರಿಯಾದ ಪಾಶ್ಚಾತ್ಯ ರಾಜ್ಯವಾದ ಕ್ವಾರಾದಲ್ಲಿ ಇಂದು ನಡೆದಿದೆ.
ಕ್ವಾರಾದ ರಾಜಧಾನಿ ಐಲೋರಿನ್ನಲ್ಲಿ ಎರಡು ವಾಹನಗಳು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಲ್ಲಿ 9 ಮಂದಿ ಗುರುತಿಸಲಾಗದಷ್ಟು ಸುಟ್ಟುಕರಕಲಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮನೆಗೆ ಬೆಂಕಿ: ತಾಯಿಯೊಂದಿಗೆ ಮೂವರು ಮಕ್ಕಳ ಸಜೀವ ದಹನ
ಅತಿಯಾದ ವೇಗ ಹಾಗೂ ಓವರ್ ಟೇಕ್ ಅವಘಡಕ್ಕೆ ಕಾರಣ ಎಂದುಕ್ವಾರಾದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಕಮಾಂಡರ್ ಜೊನಾಥನ್ ಒವಾಡೆ ಹೇಳಿದ್ದಾರೆ.