ಲಂಡನ್: ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡುವುದರಿಂದ ವಿಶ್ವದ ಬೆಸ್ಟ್ ಆಟಗಾರರಿಗೆ ಆತ್ಮ ವಿಶ್ವಾಸ ನೀಡಲಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ಆಟಗಾರರ ಮೇಲೆ ದಾಳಿ ಆದ ಬಳಿಕ ಅಲ್ಲಿಗೆ ಯಾವ ವಿದೇಶಿ ತಂಡಗಳು ತೆರಳಿಲ್ಲ. ಪಾಕಿಸ್ತಾನ ಬಹುತೇಕ ಸರಣಿಗಳನ್ನ ಯುಎಇದಲ್ಲಿ ಆಡಿದೆ.
ಈ ನಡುವೆ ಪಾಕಿಸ್ತಾನ ಸೂಪರ್ ಲೀಗ್ ( ಪಿಎಸ್ಎಲ್) ನಲ್ಲಿ ಆಡಲು ಎ.ಬಿ. ಡಿವಿಲಿಯರ್ಸ್ ತೆರಳುತ್ತಿದ್ದಾರೆ . ಈ ಬಗ್ಗೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ವಿದೇಶಿ ಆಟಗಾರರು ಹೆಚ್ಚು ಹೆಚ್ಚು ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಆಡುವಂತೆ ಆಗಬೇಕು. ಈ ಬಗ್ಗೆ ಯೋಚಿಸಬೇಕಿದೆ. ಮುಂದಿನ ಪಿಎಸ್ಎಲ್ನಲ್ಲಿ ಆಡುವಂತೆಯೂ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಪಡೆದಿರುವ ಈ ಅವಕಾಶ ಅಂತಾರಾಷ್ಟ್ರೀಯ ಕ್ರಿಕೆಟ್ ಪಾಕ್ ನೆಲದಲ್ಲಿ ನಡೆಯುವಂತಾಗಲು ಸಹಕಾರಿ ಆಗಬಹುದು ಎಂದು ಅವರು ತಮ್ಮ ಆಶಯ ಹೊರಹಾಕಿದ್ದಾರೆ. ಕೆಲ ವರ್ಷಗಳ ಹಿಂದೆ ನನಗೂ ಪಾಕಿಸ್ತಾನಕ್ಕೆ ಹೋಗುವ ಮನಸಿರಲಿಲ್ಲ. ಆದರೆ ಈಗ ಅಲ್ಲಿಗೆ ತೆರಳಲು ಸಕಾಲ ಎಂದು ಭಾವಿಸಿದ್ದೇನೆ ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿರುವ ಅವರು, ಪಾಕ್ಗೆ ತೆರಳಿ ಅಲ್ಲಿ ಜನರಿಗೆ ಪನ್ ಹಾಗೂ ಕೆಲ ಶೋ ನೀಡಬೇಕೆಂದುಕೊಂಡಿದ್ದೇನೆ. ಈ ಮೂಲಕ ವಿಶ್ವಕ್ಕೆ ಪಾಕಿಸ್ತಾನ ಸೇಫ್ ಎಂದು ತೋರಿಸಬೇಕಿದೆ ಎಂಬ ಆಶಯವನ್ನೂ ಹೊಂದಿದ್ದೇನೆ ಎಂದಿದ್ದಾರೆ.
34 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ 2020 ರಿಂದ ಆರಂಭವಾಗಲಿರುವ ನ್ಯೂ 100 ಟೂರ್ನಮೆಂಟ್ನಲ್ಲಿ ಆಡುವುದನ್ನ ಪ್ರೀತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.