ETV Bharat / international

ಘಾನಾದಲ್ಲಿ ಚರ್ಚ್ ಕುಸಿತ: 22 ಜನರ ದುರ್ಮರಣ

author img

By

Published : Oct 24, 2020, 5:22 PM IST

ಆರು ಅಂತಸ್ತಿನ ಚರ್ಚ್ ಕುಸಿದು ಬಿದ್ದು 22 ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿರುವ ಘಟನೆ ಘಾನಾದ ಅಸೆನ್-ಮಾನ್ಸೊ ಜಿಲ್ಲೆಯಲ್ಲಿ ನಡೆದಿದೆ. ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರೆದಿದೆ.

22 killed in church collapse in Ghana
ಘಾನಾದಲ್ಲಿ ಚರ್ಚ್ ಕುಸಿತ

ಆಕ್ರಾ (ಘಾನಾ): ಆರು ಅಂತಸ್ತಿನ ಚರ್ಚ್ ಕುಸಿದು ಬಿದ್ದು, 22 ಜನರು ಸಾವನ್ನಪ್ಪಿರುವ ಘಟನೆ ಪೂರ್ವ ಘಾನಾದಲ್ಲಿ ನಡೆದಿದೆ.

ಘಾನಾದ ಅಸೆನ್-ಮಾನ್ಸೊ ಜಿಲ್ಲೆಯಲ್ಲಿರುವ ಚರ್ಚ್ ಇದಾಗಿದ್ದು, ಅವಘಡದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ತಂಡಗಳು 22 ಮೃತದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರತೆಗೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.

ಘಟನೆ ನಡೆದ ವೇಳೆಯಲ್ಲಿ 60ಕ್ಕೂ ಹೆಚ್ಚು ಜನರು ಚರ್ಚ್​ನಲ್ಲಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.