ETV Bharat / headlines

ಚೀನಾ, ರಷ್ಯಾ ಸಂಶೋಧನೆಯ ಕೊರೊನಾ ಲಸಿಕೆ ನಮಗೆ ಬೇಡ ; ಅಮೆರಿಕಾ - ಚೀನಾ, ರಷ್ಯಾ ವ್ಯಾಕ್ಸಿನ್

ಕೋವಿಡ್‌ ಕಾಣಿಸಿದ 6 ತಿಂಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿತ್ತು. ನೋವೆಲ್‌ ಕೊರೊನಾ ವೈರಸ್‌ಗೆ ಈಗಾಗಲೇ 6,79,000 ಬಲಿಯಾಗಿವೆ. ಕನಿಷ್ಠ 17.9 ಮಿಲಿಯನ್‌ ಸೋಂಕಿತರಾಗಿದ್ದಾರೆ ಎಂದು ಎಎಫ್‌ಪಿ ಅಂಕಿ ಅಂಶಗಳನ್ನು ಬಿಡುಗೊಳಿಸಿದೆ..

US Says It Is Unlikely To Use China, Russia Coronavirus Vaccines
ಚೀನಾ, ರಷ್ಯಾ ಸಂಶೋಧನೆಯ ಕೊರೊನಾ ಲಸಿಕೆ ನಮಗೆ ಬೇಡ; ಅಮೆರಿಕಾ
author img

By

Published : Aug 1, 2020, 4:23 PM IST

ವಾಷಿಂಗ್ಟನ್ : ಕೊರೊನಾ ವೈರಸ್‌ನ ಮೂಲ ಪುರುಷ ಚೀನಾ ವಿರುದ್ಧ ಕೆಂಡ ಕಾರುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕಾ ಡ್ರ್ಯಾಗನ್‌ ದೇಶದ ವಿರುದ್ಧ ಮತ್ತೊಂದು ಸಮರ ಸಾರುತ್ತಿದೆ. ಚೀನಾ ಅವಿಷ್ಕಾರ ಮಾಡುತ್ತಿರುವ ವ್ಯಾಕ್ಸಿನ್‌ನ ಯಾವುದೇ ಕಾರಣಕ್ಕೂ ಅಮೆರಿಕಾ ಬಳಸುವುದಿಲ್ಲ ಎಂದು ಯುಎಸ್‌ನ ಸಾಂಕ್ರಾಮಿಕ ರೋಗ ತಜ್ಞ ಅಂಟೋನಿ ಫೌಸಿ ಹೇಳಿದ್ದಾರೆ.

ಚೀನಾ ಮಾತ್ರವಲ್ಲದೆ ರಷ್ಯಾ ಸಂಶೋಧನೆ ಮಾಡುವ ಲಸಿಕೆಯನ್ನೂ ಅಮೆರಿಕಾ ತನ್ನ ರೋಗಿಗಳ ಚಿಕಿತ್ಸೆಗೆ ನೀಡುವುದಿಲ್ಲ ಎಂದು ಫೌಸಿ ಸ್ಪಷ್ಟ ಪಡಿಸಿದ್ದಾರೆ. ತನ್ನ ದೇಶದ ಸುರಕ್ಷತೆಯ ಅಗ್ರಮಾನ್ಯ ಕಾರಣ ನೀಡಿರುವ ಅಮೆರಿಕಾ, ತನ್ನ ನೀತಿ ನಿಯಮಗಳಲ್ಲಿ ಯಾವ ದೇಶ ಪಾರದರ್ಶನ ಹೊಂದಿಲ್ಲವೋ ಅಂತಹ ದೇಶಗಳ ವ್ಯಾಕ್ಸಿನ್‌ ಬಳಸುವುದಿಲ್ಲ ಎಂದಿದೆ.

ಕೋವಿಡ್‌ ಕಾಣಿಸಿದ 6 ತಿಂಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿತ್ತು. ನೋವೆಲ್‌ ಕೊರೊನಾ ವೈರಸ್‌ಗೆ ಈಗಾಗಲೇ 6,79,000 ಬಲಿಯಾಗಿವೆ. ಕನಿಷ್ಠ 17.9 ಮಿಲಿಯನ್‌ ಸೋಂಕಿತರಾಗಿದ್ದಾರೆ ಎಂದು ಎಎಫ್‌ಪಿ ಅಂಕಿ ಅಂಶಗಳನ್ನು ಬಿಡುಗೊಳಿಸಿದೆ.

ಕೋವಿಡ್‌ಗೆ ವ್ಯಾಕ್ಸಿನ್‌ ಕಂಡು ಹಿಡಿಯಲು ಚೀನಾ ಸೇರಿ ಹಲವು ದೇಶಗಳು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿವೆ. ಮಾತ್ರವಲ್ಲದೆ ರಷ್ಯಾ ಸೆಪ್ಟೆಂಬರ್‌ ಅಂತ್ಯದೊಳಗೆ ಲಸಿಕೆ ಕಂಡು ಹಿಡಿಯಬೇಕೆಂಬ ಗುರಿಯೊಂದಿಗೆ ಕೆಲಸ ಮಾಡ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.