ETV Bharat / headlines

ನಮ್ಮ ಪಕ್ಷದ ಅಜೆಂಡಾದಲ್ಲಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ: ಡಿಸಿಎಂ ಕಾರಜೋಳ ಸ್ಪಷ್ಟನೆ - karnataka cm change matter

ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪನವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ನಾಯಕರು ಸಿಎಂ ಬದಲಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ಈ ಸಂಬಂಧ ನಡೆಯುತ್ತಿರುವ ಬೆಳವಣಿಗೆ ಕೇವಲ ಊಹಾಪೋಹವಷ್ಟೇ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

 There is no change of CM in karnataka: DCM Govinda karajola

author img

By

Published : Jun 9, 2021, 7:44 PM IST

Updated : Jun 9, 2021, 9:53 PM IST

ಬೆಳಗಾವಿ : ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಅಜೆಂಡಾ ಇಲ್ಲವೇ ಇಲ್ಲ. ನಮ್ಮ ಹೈಕಮಾಂಡ್ ಹಾಗೂ ರಾಜ್ಯದ ನಾಯಕರ ಮುಂದೆ ಸಿಎಂ ಬದಲಾವಣೆ ವಿಷಯವೇ ಇಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ನಮ್ಮ ಪಕ್ಷದ ಅಜೆಂಡಾದಲ್ಲಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಆಗಿರಬಹುದು ಹಾಗೂ ಕೋವಿಡ್ ಆಗಿರಬಹುದು. ಕಳೆದ ಎರಡು ವರ್ಷಗಳಿಂದ ಬಹಳ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪನವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ನಾಯಕರು ಸಿಎಂ ಬದಲಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ಈ ಸಂಬಂಧ ನಡೆಯುತ್ತಿರುವ ಬೆಳವಣಿಗೆ ಕೇವಲ ಊಹಾಪೋಹವಷ್ಟೇ ಎಂದಿದ್ದಾರೆ.

ಮಹಾರಾಷ್ಟ್ರ- ಗೋವಾ ಲಾಕ್​ಡೌನ್: ಬೆಮುಲ್​ಗೆ ಕೋಟಿ ಕೋಟಿ ನಷ್ಟ!

ಈ ವಿಷಯಕ್ಕೆ ಮಾಧ್ಯಮಗಳಲ್ಲಿ ರೆಕ್ಕೆಪುಕ್ಕ ಜೋಡಿಸುವ ಕೆಲಸವಾಗುತ್ತಿದೆ. ಈ ಸರ್ಕಾರದ ಪೂರ್ಣಾವಧಿಗೆ ಯಡಿಯೂರಪ್ಪನವರೇ ಸಿಎಂ ಆಗಿರಲಿದ್ದಾರೆ ಎಂದು ಸ್ಪಷ್ಟಪಡಿಸುತ್ತೇನೆ. ಸಿಎಂ ಪೂರ್ಣಾವಧಿ ಪೂರೈಸಲಿರುವ ಪರ್ಯಾಯ ನಾಯಕತ್ವದ ಬಗ್ಗೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ನಿಮ್ಮ ನಂತರ ಪರ್ಯಾಯ ನಾಯಕರಿಲ್ಲವಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪಕ್ಷದಲ್ಲಿ ಪರ್ಯಾಯ ನಾಯಕರಿದ್ದಾರೆ ಎಂದು ಸಿಎಂ ಹೇಳಿದ್ದಾರಷ್ಟೇ. ಅಲ್ಲದೇ ಸಿಎಂ ಬದಲಾವಣೆ ಸಂಬಂಧ ಪದೆ ಪದೇ ಪ್ರಶ್ನೆ ಕೇಳುತ್ತಿರುವುದಕ್ಕೆನೇ ಸಿಎಂ ರಾಜೀನಾಮೆ ಪದ ಬಳಸಿರಬಹುದು.

ನಾಯಕತ್ವ ಬದಲಾವಣೆ ಮಾಡುವ ಅಧಿಕಾರ ಹೈಕಮಾಂಡ್​ಗಿದೆ. ನಮ್ಮ ಪಕ್ಷದಲ್ಲಿ ಪಾರ್ಲಿಮೆಂಟರಿ ಬೋರ್ಡ್ ಇದೆ. ಪ್ರಧಾನಿ, ಗೃಹಮಂತ್ರಿ, ಪಕ್ಷದ ಅಧ್ಯಕ್ಷರು ಹಾಗೂ ರಾಷ್ಟ್ರೀಯ ನಾಯಕರಿದ್ದಾರೆ. ಇವರೇ ಬದಲಾವಣೆ ಬಗ್ಗೆ ಮಾತನಾಡಬೇಕು. ಹಾದಿಬಿದಿಯಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ರೆ ನಾಯಕತ್ವ ಬದಲಾವಣೆ ಆಗಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್​ಗೆ ತಿರುಗೇಟು ನೀಡಿದರು.

ಲಾಕ್​ಡೌನ್ ವಿಸ್ತರಿಸುವ ಅಗತ್ಯವಿದೆ

ಲಾಕ್​ಡೌನ್ ವಿಸ್ತರಿಸುವ ಅಗತ್ಯವಿದೆ:

ಕುಂದಾನಗರಿ ಬೆಳಗಾವಿ ಗಡಿ ಜಿಲ್ಲೆ ಜೊತೆಗೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಾರಣಕ್ಕೆ ಲಾಕ್‍ಡೌನ್ ವಿಸ್ತರಣೆ ಮಾಡಲು ನಮ್ಮ ಸಹಮತವಿದೆ. ಬೆಳಗಾವಿ ಜಿಲ್ಲೆಯದ್ದು ಉಳಿದ ಜಿಲ್ಲೆಗಳಿಗಿಂತ ವಿಭಿನ್ನವಾದ ಪರಿಸ್ಥಿತಿ ಇದ್ದು, ಬೆಳಗಾವಿ, ಬಾಗಲಕೋಟೆ, ಬೀದರ್, ಕಲಬುರಗಿ ಗಡಿ ಜಿಲ್ಲೆಗಳಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಕೊರೊನಾ ವೈರಸ್ ಹರಡುವ ಚಾನ್ಸ್ ಇದೆ. ಇದಲ್ಲದೇ ಮಹಾರಾಷ್ಟ್ರದಿಂದ ಕಾರ್ಮಿಕರು ಓಡಾಡುವ ಕಾರಣಕ್ಕೆ ಲಾಕ್ ಡೌನ್ ಸೂಕ್ಷ್ಮವಾಗಿ ನೋಡಿ ವಿಸ್ತರಣೆ ಮಾಡುವ ಅವಶ್ಯಕತೆ ಅನ್ನಿಸಿದ್ರೆ ನಾಳೆ ನಡೆಯಲಿರುವ ಸಭೆಯಲ್ಲಿ ಸಿಎಂ ಜೊತೆಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ:

ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಮಳೆಯಿಂದ ಮುಂದಾಗುವ ಪ್ರವಾಹದ ಬೀತಿ ಕುರಿತು ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದ್ದು,ಈಗಾಗಲೇ ಅಲ್ಲಿನ‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇವೆ.ಹೀಗಾಗಿ ಪ್ರವಾಹದ ಕುರಿತು ಒಂದು ತಿಂಗಳ ಮಟ್ಟಿಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಸದ್ಯ 105ಟಿಎಂಸಿ ಸಾಮರ್ಥ್ಯ ಹೊಂದಿರುವ ಮಹಾರಾಷ್ಟ್ರದ ಕೋಯ್ನಾ ಡ್ಯಾಂನಲ್ಲಿ‌ 28ಟಿಎಂಸಿ ನೀರು ಸ್ಟಾಕ್ ಇದೆ.

ಹೀಗಾಗಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ. ಇನ್ನು ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರ ನೀರಾವರಿ ಅಧಿಕಾರಿ ಜೊತೆಗೆ ಸಂಪರ್ಕ ಮಾಡಲು ಓರ್ವ ಇಂಜನಿಯರ್ ನೇಮಕ ಮಾಡಿದ್ದೇವೆ. 26 ಬೋಟ್ ಗಳನ್ನ ಇಟ್ಟಿದ್ದೇವೆ, 326 ಪ್ರವಾಹ ಬರುವ ಗ್ರಾಮಗಳಲ್ಲಿ ನೊಡಲ್ ಅಧಿಕಾರಿ ನೇಮಕ ಮಾಡಿದ್ದೇವೆ. ಒಂದು ಎನ್‌ಡಿಆರ್‌ಎಪ್ ತಂಡ ಚಿಕ್ಕೋಡಿಗೆ ಆಗಮಿಸಿದೆ ಎಂದು ಮಾಹಿತಿ ನೀಡಿದರು.

ಫಂಗಸ್ ಗೆ 15ಜನ ಬಲಿ:

ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಸ್ವಲ್ಪ ಇಳಿಕೆಯಾಗುತ್ತಿದ್ದು 8.9ರಷ್ಟು ಪಾಸಿಟಿವಿಟಿ ರೇಟ್ ಇದೆ.ಈಗಾಗಲೇ 1300ಹಳ್ಳಿಗಳಲ್ಲಿ ಕೊವಿಡ್ ತಪಾಸಣೆ ಮಾಡಲಾಗಿದೆ. 7ಲಕ್ಷ 72ಸಾವಿರ ಜನರಿಗೆ ಬೆಳಗಾವಿ ಜಿಲ್ಲೆಯಲ್ಲಿ ಲಸಿಕೆ ಹಾಕಲಾಗಿದ್ದು, 18ವರ್ಷ ಮೇಲ್ಪಟ್ಟವ 37ಸಾವಿರ ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 136ಜನರಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.ಅದರಲ್ಲಿ ಬ್ಲ್ಯಾಕ್ ಫಂಗಸ್ ‌ಗೆ 15ಜನರು ಬಲಿಯಾಗಿದ್ದಾರೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆ ನೀಡಲು ಹೊರಗಿನ ವೈದ್ಯರ ನೇಮಕ ಮಾಡಲು ಸೂಚನೆ ನೀಡಲಾಗಿದೆ ಎಂದು‌ ಡಿಸಿಎಂ ಗೋವಿಂದ್ ಕಾರಜೋಳ ಹೇಳಿದರು.

Last Updated : Jun 9, 2021, 9:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.