ಕಠ್ಮಂಡು (ನೇಪಾಳ ) : ಬಹುಮತ ಕಳೆದುಕೊಂಡು ನೇಪಾಳ ಸಂಸತ್ತನ್ನು ವಿಸರ್ಜಿಸಲು ಪ್ರಧಾನಿ ಕೆ.ಪಿ ಶರ್ಮಾ ಒಲಿ ನಿರ್ಧರಿಸಿದ ಬೆನ್ನಲ್ಲೆ, ಸಂಸತ್ ಚುನಾವಣೆ ನಡೆಸುವ ಪ್ರಸ್ತಾಪವನ್ನು ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ಅಂಗೀಕರಿಸಿದ್ದಾರೆ.
ಮೂಲಗಳ ಪ್ರಕಾರ, ಎರಡು ಹಂತಗಳಲ್ಲಿ ನೇಪಾಳ ಸಂಸತ್ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಏಪ್ರಿಲ್ 30 ಮತ್ತು ಮೇ 10 ರ ನಡುವೆ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಸಂಸತ್ತನ್ನು ವಿಸರ್ಜಿಸಿದ ನಂತರ ಪ್ರಧಾನಿ ಒಲಿ ದೇಶದ ಭದ್ರತಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಕಠ್ಮಂಡುವಿನಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.