ETV Bharat / headlines

ಕೊರೊನಾ ಸಂಬಂಧ ಪ್ರತಿಪಕ್ಷ ಹಳಿ ತಪ್ಪಿಸುವ ಕೆಲಸ ಮಾಡುತ್ತಿವೆ : ನಡ್ಡಾ ಕಿಡಿ - ಮುಖ್ಯಸ್ಥ ಜೆ.ಪಿ.ನಡ್ಡಾ

ಜನರ ಬಳಿ ಹೋಗಿ ಪ್ರತಿಪಕ್ಷಗಳು ಮಾಡುತ್ತಿರುವ ನಾಟಕಗಳನ್ನು ಜನರಿಗೆ ತಿಳಿಸಬೇಕಿದೆ. ಹಾಗೆ ಅವರಿಗೆ ಕೊರೊನಾ ಬಗ್ಗೆ ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನು ತಿಳಿಸಬೇಕಿದೆ ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದರಿಗೆ ನಡ್ಡಾ ಸೂಚನೆ ನೀಡಿದ್ದಾರೆ..

nadda-asks-bjp-leaders-to-expose-oppositions-plan-to-derail-attempts-to-contain-covid-19

author img

By

Published : Jun 18, 2021, 5:22 PM IST

ನವದೆಹಲಿ : ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಾಡಿದ ಕಾರ್ಯಗಳನ್ನು ಶ್ಲಾಘಿಸುತ್ತಾ, ಕೊರೊನಾ ಸೋಲಿಸಲು ಕೇಂದ್ರವು ಕೈಗೊಂಡ ಕ್ರಮಗಳನ್ನು ಹಳಿ ತಪ್ಪಿಸಿದ್ದಕ್ಕಾಗಿ ನಡ್ಡಾ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಪಕ್ಷದ ಸಂಸತ್ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶದಲ್ಲಿ ಕೊರೊನಾ ನಿಯಂತ್ರಣದ ಕ್ರಮಗಳನ್ನ ಹಳಿ ತಪ್ಪಿಸುವ ಪ್ರತಿಪಕ್ಷಗಳ ಯೋಜನೆಯನ್ನು ಬಹಿರಂಗಪಡಿಸಬೇಕಿದೆ ಎಂದಿದ್ದಾರೆ.

ರೋಗದ ವಿರುದ್ಧ ದೊಡ್ಡ ಪಿತೂರಿ

ಕೊರೊನಾ ಲಸಿಕೆ ಅಭಿಯಾನ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ದೊಡ್ಡ ಪಿತೂರಿ ನಡೆಸಲಾಯಿತು. ಪ್ರತಿಪಕ್ಷಗಳು ಇದರಲ್ಲಿ ರಾಜಕಾರಣ ಮಾಡಿದವು. ಲಾಕ್​ಡೌನ್​ ಯಾಕೆ ಮಾಡಿದ್ರಿ? ಯಾಕೆ ಲಾಕ್​ಡೌನ್​ ಮಾಡಿಲ್ಲ ಎಂದು ಪ್ರಶ್ನಿಸಿದ್ದರು. ಈಗ ಲಸಿಕೆ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವ್ಯಾಕ್ಸಿನೇಷನ್ ಬಗ್ಗೆ, ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಗುರಿಯಾಗಿಸಿಕೊಂಡು ಅವರು ಸ್ವತಃ ಲಸಿಕೆಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎಂದರು.

ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಬೇಕು

ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸದರು ಹಾಗೂ ಇತರೆ ಮುಖಂಡರು ಜನರ ಬಳಿ ಹೋಗಿ ಪ್ರತಿಪಕ್ಷಗಳು ಮಾಡುತ್ತಿರುವ ನಾಟಕಗಳನ್ನು ಜನರಿಗೆ ತಿಳಿಸಬೇಕಿದೆ. ಹಾಗೆ ಅವರಿಗೆ ಕೊರೊನಾ ಬಗ್ಗೆ ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನು ತಿಳಿಸಬೇಕಿದೆ ಎಂದು ಸಲಹೆ ನೀಡಿದರು. ನಾವು ಜನರಿಗೆ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಜನರಿಗೆ ಅರಿವು ಮೂಡಿಸಬೇಕಿದೆ. ಆದರೆ, ವಿರೋಧ ಪಕ್ಷಗಳ ವಿರೋಧವು ಹಳಿ ತಪ್ಪಿಸಿದೆ ಎಂದು ನಡ್ಡಾ ವಾಗ್ದಾಳಿ ನಡೆಸಿದರು.

ಲಸಿಕೆಗಳನ್ನು ನೀಡುವುದು ಕೇಂದ್ರದ ಕಾರ್ಯವಾದರೆ, ಲಸಿಕೆಗಳನ್ನು ಬಳಕೆ ಮಾಡಿಕೊಳ್ಳುವುದು ರಾಜ್ಯದ ಕಾರ್ಯವಾಗಿತ್ತು ಎಂದ ಅವರು, ಮನೀಶ್ ತಿವಾರಿ ಮತ್ತು ಶಶಿ ತರೂರ್ ಅವರ ಬಗ್ಗೆ ಮಾತನಾಡಿ, ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಹೆದರುವಂತೆ ಸಮಾಜವನ್ನು ಮಾಡಲಾಗಿದೆ. ಕೇಂದ್ರವು ರಾಜ್ಯ ಸರ್ಕಾರಗಳಿಗೆ ಹೇಳಿದ್ದನ್ನು ಅನುಸರಿಸುವಲ್ಲಿ ವಿಫಲವಾಗಿವೆ ಮತ್ತು ಅವರಿಗೆ ಕಳುಹಿಸಿದ ಸಲಹೆಗಳನ್ನು ಅವರು ಅನುಸರಿಸಲು ಮುಂದಾಗಿಲ್ಲ ಎಂದು ಬೇಸರ ಹೊರ ಹಾಕಿದರು.

ಟ್ವಿಟರ್​ನಲ್ಲಿ ಮಾತ್ರ ರಾಜಕೀಯ

ಪ್ರತಿಪಕ್ಷಗಳು ಮೂಲೆಗುಂಪಿನಿಂದ ಹೊರ ಬರುತ್ತಿಲ್ಲ. ಟ್ವಿಟರ್​ನಲ್ಲಿ ಮಾತ್ರ ರಾಜಕೀಯ ಮಾಡುತ್ತಿದ್ದಾರೆ. ಎಲ್ಲರೂ ನಕಾರಾತ್ಮಕತೆಯನ್ನು ಹರಡುತ್ತಿರುವಾಗ, ಪಿಎಂ ಮೋದಿ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಿದರು ಎಂದು ಬಣ್ಣಿಸಿದರು. ಸರ್ಕಾರವು ಲಸಿಕೆಗಳನ್ನು ತಯಾರಿಸುವಾಗ, ಪ್ರತಿಪಕ್ಷ ನಾಯಕರು ಹಲವಾರು ಅಡೆತಡೆಗಳನ್ನು ಸೃಷ್ಟಿಸಿದ್ದಾರೆ. ಶಶಿ ತರೂರ್ ಹಾಗೂ ತಿವಾರಿ ಅವರಂತವರನ್ನು ಜನ ಕ್ಷಮಿಸುವುದಿಲ್ಲ ಎಂದ ಅವರು, ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಹೊರತುಪಡಿಸಿ ಈಗ ನಾವು ಸ್ಪುಟ್ನಿಕ್ ವಿ ಕೂಡ ಹೊಂದಿದ್ದೇವೆ. ಭಾರತ್ ಬಯೋಟೆಕ್​ಗೆ ಅದರ ಸಾಮರ್ಥ್ಯವನ್ನು ಹೆಚ್ಚಿಸಲು ಹೇಳಲಾಗಿದೆ ಎಂದು ಮಾಹಿತಿ ನೀಡಿದರು.

ಫೆಡರಲಿಸಂ ತತ್ವ :

ಪ್ರಧಾನಿ ಮೋದಿ ಫೆಡರಲಿಸಂ ತತ್ವಗಳನ್ನು ಅನುಸರಿಸಿದ್ದಾರೆ ಮತ್ತು ರಕ್ಷಕರಾಗಿ ಅವರು ರಾಜ್ಯಗಳು ಎದುರಿಸಬಹುದಾದ ಸವಾಲುಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಭಾರತವು ಫೆಡರಲ್ ಸ್ವರೂಪದಲ್ಲಿದೆ ಮತ್ತು ಯೋಜನೆಗಳನ್ನು ಜನರಿಗೆ ಮುಟ್ಟಿಸುವುದು ಸುಲಭದ ಕೆಲಸವಲ್ಲ. ವಿದೇಶಗಳನ್ನು ಭಾರತದೊಂದಿಗೆ ಹೋಲಿಸದಿರಲು ಇದು ಹೆಚ್ಚು ಯಶಸ್ವಿಯಾಗಿದೆ ಎಂದು ನಡ್ಡಾ ಹೇಳಿದರು.

ಇಷ್ಟು ಆಮ್ಲಜನಕ ಬೇಕು ಎಂದು ನಮಗೆ ತಿಳಿದಿರಲಿಲ್ಲ :

900 ಮೆಟ್ರಿಕ್ ಟನ್‌ಗಳಿಂದ ಆಮ್ಲಜನಕದ ಸಾಮರ್ಥ್ಯವನ್ನು ಒಂದು ವಾರದ ಅವಧಿಯಲ್ಲಿ 9400 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಲಾಯಿತು. ಆಕ್ಸಿಜನ್ ಟ್ಯಾಂಕರ್‌ಗಳು, ರೈಲುಗಳನ್ನು ವ್ಯವಸ್ಥೆಗೊಳಿಸಲಾಯಿತು. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಗೊತ್ತುಪಡಿಸಿದ ಸ್ಥಳಗಳಿಗೆ ಕಳುಹಿಸಲಾಗಿದೆ. ನಮಗೆ ಇಷ್ಟು ಆಮ್ಲಜನಕ ಬೇಕು ಎಂದು ನಮಗೆ ತಿಳಿದಿರಲಿಲ್ಲ. ವಾಯುಸೇನೆಯಿಂದ, ವಿದೇಶದಿಂದ ನೌಕಾಪಡೆಯು ಕಂಟೇನರ್‌ಗಳನ್ನು ತಂದಿವೆ. 1500 ಪಿಎಸ್‌ಎ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥಿತವಾಗಿ ಕೊರೊನಾ ನಿಯಂತ್ರಣ ಸಂಬಂಧದ ಕೆಲಸಗಳನ್ನು ನೋಡಿಕೊಳ್ಳಬೇಕೆಂದು ನಾನು ಸಂಸದರನ್ನು ಕೋರುತ್ತೇನೆ ಎಂದಿದ್ದಾರೆ.

ಕ್ರಯೋಜೆನಿಕ್ ಟ್ಯಾಂಕ್‌ಗಳನ್ನೂ ಹೆಚ್ಚಿಸಲಾಗಿದೆ ಹಾಗೆ ರೆಮ್ಡಿಸಿವಿರ್ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಇದೆ. 2084 ಕೊರೊನಾ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಸರ್ಕಾರವು ಫಾರ್ಮಾ ಕಂಪನಿಗಳಿಗೆ ಪರವಾನಿಗೆ ನೀಡಿದೆ ಮತ್ತು ಅಸ್ತಿತ್ವದಲ್ಲಿರುವ ಫಾರ್ಮಾ ಕಂಪನಿಗಳಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ಸೂಚಿಸಲಾಗಿದೆ. ವರ್ಷಾಂತ್ಯದ ವೇಳೆಗೆ 130 ಕೋಟಿ ಭಾರತೀಯರಿಗೆ ಎರಡೂ ಡೋಸ್‌ಗಳನ್ನು ನೀಡಲಾಗುವುದು ಎಂದು ಇದೇ ವೇಳೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.