ಬೆಂಗಳೂರು: ಕೋವಿಡ್ ಸೋಂಕಿತರಿಗೆ ಬೆಡ್ಗಳ ಹಂಚಿಕೆಯಾಗುವ ಬಿಬಿಎಂಪಿ ವಾರ್ ರೂಂಗೆ ಇಂದು ಸಿಎಂ ಭೇಟಿ ನೀಡಿದರು. ಸ್ವತಃ ತಾವೇ ಕರೆ ಸ್ವೀಕರಿಸಿ ಮಾತನಾಡಿದರು. ಕೆಲ ಸಮಯ ಟೆಲಿಕಾಲರ್ ಆಗಿ ಕೆಲಸ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸೋಂಕಿತ ವ್ಯಕ್ತಿಯೊಬ್ಬರಿಗೆ ಐಸಿಯು ಬೆಡ್ ಹಂಚಿಕೆ ಮಾಡಿ ಗಮನ ಸೆಳೆದರು.
‘‘ವ್ಯಕ್ತಿಯೊಬ್ಬರು ಮಾಡಿದ್ದ ಕರೆ ಸ್ವೀಕರಿಸಿದ ಸಿಎಂ ಹಲೋ ಹಲೋ ಯಾರ್ ಮಾತ್ನಾಡ್ತಿದ್ದೀರಾ.. ಹು ಈಸ್ ಸ್ಪೀಕಿಂಗ್, ಮೇ ಐ ನೋ ಯುವರ್ ನೇಮ್.. ಕ್ಯಾನ್ ಯು ಹಿಯರ್ ಮೀ’’ ಎನ್ನುತ್ತಾ ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರು.
ಆತಂಕದಲ್ಲಿ ಕರೆ ಮಾಡಿದ್ದ ವ್ಯಕ್ತಿಯನ್ನು ಸಮಾಧಾನಪಡಿಸಿ ಸಮಸ್ಯೆ ಆಲಿಸಿದರು. ಉಸಿರಾಟದ ತೊಂದರೆಯಾಗುತ್ತಿದೆ ಹಾಗಾಗಿ ಐಸಿಯು ಬೆಡ್ ಬೇಕು ಎನ್ನುವ ಕೋರಿಕೆಯನ್ನು ಮುಂದಿಟ್ಟ ವ್ಯಕ್ತಿಗೆ ನಾಳೆಯೇ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ ಸಿಎಂ ನಂತರ ಈಗಲೇ ಐಸಿಯು ಬೆಡದ ವ್ಯವಸ್ಥೆ ಮಾಡುತ್ತೇನೆ, ಈಗಲೇ ನೀವು ನಿಮ್ಮ ಸಂಬಂಧಿಯನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸೋಂಕಿತ ವ್ಯಕ್ತಿಯ ಬಿಯು ಸಂಖ್ಯೆ ಪಡೆದು ಐಸಿಯು ಬೆಡ್ ಅಲಾಟ್ ಮಾಡಿದರು. ನಂತರ ನಿಗದಿತ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಲಭ್ಯವಾದ ಮಾಹಿತಿಯನ್ನು ಸಹಾಯವಾಣಿ ಸಿಬ್ಬಂದಿ ಮೂಲಕ ರವಾನಿಸಿದರು
ಮಾಧ್ಯಮಗಳಿಗೆ ಪೊಲೀಸರ ನಿರ್ಬಂಧ : ಸಿಎಂ ಬಿಎಸ್ವೈರಿಂದ ವಾರ್ ರೂಮ್ ಭೇಟಿ ಹಿನ್ನೆಲೆ ಸಿಎಂ ವಾರ್ ರೂಮ್ ಭೇಟಿಯ ಮಾಧ್ಯಮ ವರದಿಗೆ ಪೊಲೀಸರಿಂದ ನಿರ್ಬಂಧ ಎದುರಾಗಿದೆ. ಮಾಧ್ಯಮ ವಾಹನಗಳನ್ನು ಅಡ್ಡಗಟ್ಟಿದ ಪೊಲೀಸರು ಮಾಧ್ಯಮಗಳ ನಿರ್ಬಂಧಕ್ಕೆ ಯತ್ನಿಸಿದ್ದಾರೆ