ನವದೆಹಲಿ: ಕೋವಿಡ್ ಬಿಕ್ಕಟ್ಟಿನ ನಿರ್ವಹಣೆ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಸಾಂಕ್ರಾಮಿಕ ರೋಗವನ್ನು ಮೋದಿ ಸರ್ಕಾರ ನಿರ್ಲಕ್ಷಿಸಿದ್ದಕ್ಕಾಗಿ ದೇಶವು "ಭಯಾನಕ ಬೆಲೆ" ತೆರುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಕುರಿತು ಚರ್ಚಿಸಲು ಸೋನಿಯಾ ಗಾಂಧಿ ಕರೆದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ನಾವು (ಸಿಡಬ್ಲ್ಯೂಸಿ) ಕೊನೆಯದಾಗಿ ಏಪ್ರಿಲ್ 17 ರಂದು ಭೇಟಿಯಾದೆವು. ಕಳೆದ ನಾಲ್ಕು ವಾರಗಳಲ್ಲಿ, ಕೋವಿಡ್ ಪರಿಸ್ಥಿತಿ ಇನ್ನಷ್ಟು ದುರಂತವಾಗಿದೆ. ಆಡಳಿತ ವೈಫಲ್ಯಗಳು ಇನ್ನಷ್ಟು ವಿನಾಶಕಾರಿಯಾಗಿದವೆ. ವೈಜ್ಞಾನಿಕ ಸಲಹೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ. ಸಾಂಕ್ರಾಮಿಕ ರೋಗವನ್ನು ಮೋದಿ ಸರ್ಕಾರ ನಿರ್ಲಕ್ಷಿಸಿದ್ದಕ್ಕಾಗಿ ದೇಶವು ಭಯಾನಕ ಬೆಲೆ ತೆರುತ್ತಿದೆ ಎಂದು ಅವರು ತಿಳಿಸಿದರು.
ಮುಂಬರುವ ಮೂರನೇ ಕೊರೊನಾ ಅಲೆ ಬಗ್ಗೆ ಕೆಲವು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದು, ಭಾರತ ಅದಕ್ಕೆ ಸಜ್ಜಾಗಬೇಕಿದೆ. ಈ ಕಾರಣದಿಂದಾಗಿ ಅನೇಕ ರಾಜ್ಯಗಳು ಈಗಾಗಲೇ ಸಂಪೂರ್ಣ ಲಾಕ್ಡೌನ್ ಘೋಷಿಸಿರುವುದು ಒಳ್ಳೆಯದು ಎಂದರು.
ದೇಶಾದ್ಯಂತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಕುಸಿದಿದೆ. ಆದರೆ ವ್ಯಾಕ್ಸಿನೇಷನ್ ವ್ಯಾಪ್ತಿಯು ಅಗತ್ಯಕ್ಕಿಂತ ಕಡಿಮೆಯಾಗಿದೆ. ಅದರೂ ಅಗತ್ಯವಿರುವ ದರದಲ್ಲಿ ವಿಸ್ತರಿಸುತ್ತಿಲ್ಲ. ಮೋದಿ ಸರ್ಕಾರ ತನ್ನ ಜವಾಬ್ದಾರಿಯನ್ನು ತ್ಯಜಿಸಿದೆ. 18 ರಿಂದ 45 ವಯೋಮಾನದ ನೂರಾರು ಮಿಲಿಯನ್ ಜನರಿಗೆ ಲಸಿಕೆ ಹಾಕುವ ವೆಚ್ಚವನ್ನು ರಾಜ್ಯಗಳು ಭರಿಸುತ್ತವೆ ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾ ಮಾಡಿದರು.
ಕೇಂದ್ರ ಸರ್ಕಾರವು ವಿರೋಧ ಪಕ್ಷದ ಆಡಳಿತದ ರಾಜ್ಯಗಳ ವಿರುದ್ಧ ತಾರತಮ್ಯವನ್ನು ಮುಂದುವರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆರೋಪಿಸಿದರು.