ಪಾಲಿ (ರಾಜಸ್ಥಾನ): ಶಸ್ತ್ರಸಜ್ಜಿತ ದರೋಡೆಕೋರರು ಆಭರಣ ಅಂಗಡಿಗೆ ನುಗ್ಗಿ 50 ಲಕ್ಷ ರೂಪಾಯಿ ಮೌಲ್ಯದ ಆಭರಣ ಮತ್ತು 2 ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿದ್ದಾರೆ. ರಾಜಸ್ಥಾನದ ಪಾಲಿಯಲ್ಲಿ ಈ ಘಟನೆ ಜರುಗಿದೆ.
ದುಷ್ಕರ್ಮಿಗಳು ದಾಳಿ ವೇಳೆ ಮೊಬೈಲ್ ಫೋನ್, ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಪಡಿಸಿದ್ದಾರೆ. ಘಟನೆ ಸಂಬಂಧ ಮಾಹಿತಿ ಪಡೆದ ನಂತರ, ಪೊಲೀಸ್ ಅಧಿಕಾರಿಗಳು ತಂಡದೊಂದಿಗೆ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಕೃತ್ಯ ಎಸಗಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಮುಖ ವಿಷಯ ಎಂದರೆ ಶಾಪ್ನ ಮಾಲೀಕ ಕಿಶನ್ ಲಾಲ್ ಸೋನಿ ಗ್ರಾಹಕರಿಂದ ವಿವಾಹದ ಆಭರಣಗಳನ್ನು ಮಾಡಿಕೊಡಲು ಆರ್ಡರ್ ಪಡೆದುಕೊಂಡಿದ್ದರು. ಇವೆಲ್ಲವನ್ನೂ ದರೋಡೆ ಮಾಡಲಾಗಿದೆ.
ಶನಿವಾರ ಸಂಜೆ ಅಂಗಡಿ ತೆರೆದ ತಕ್ಷಣ ಮೂವರು ಅಪರಿಚಿತರು ಚಿನ್ನಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂಗಡಿಯವನು ನಿರಾಕರಿಸಿದಾಗ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದಾರೆ. ಇದಕ್ಕೂ ಮೊದಲು ದುಷ್ಕರ್ಮಿಗಳು ಟೇಪ್ನಿಂದ ಮಾಲೀಕನ ಬಾಯಿಯನ್ನು ಮುಚ್ಚಿ ಆಭರಣ ಮತ್ತು ಹಣ ಲೂಟಿ ಮಾಡಿದ್ದಾರೆ.