ತಮಿಳುನಾಡು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರತ್ತೆ ಅನ್ನೋ ಒಂದು ಮಾತಿದೆ. ಸತಿ-ಪತಿಗಳನ್ನು ಆ ದೇವರೇ ಜೋಡಿಯಾಗಿ ಕಳುಹಿಸಿರುತ್ತಾನಂತೆ. ಹೀಗೆ ಮದುವೆಯಲ್ಲಿ ಒಂದಾದ ಜೋಡಿಯೊಂದು ಸಾವಿನಲ್ಲೂ ಜೊತೆಯಾಗಿದೆ.
ಅವರು ತಿರುವಂಕಡಂ-ಅಮ್ಸವಳ್ಳಿ ಎಂಬ ವೃದ್ಧ ದಂಪತಿಗಳು. ತಂಜಾವೂರು ಜಿಲ್ಲೆಯ ತಿರುವೈರು ನಿವಾಸಿಗಳು. ಹಠಾತ್ ಅನಾರೋಗ್ಯದಿಂದಾಗಿ ಇಂದು ಮುಂಜಾನೆ ಅಮ್ಸವಳ್ಳಿ ನಿಧನರಾದರು. ಆಕೆಯ ಸಾವಿಗೆ ಅವರ ಕುಟುಂಬ ಸದಸ್ಯರು ಶೋಕಿಸುತ್ತಿದ್ದಂತೆ, ಅಮ್ಸವಳ್ಳಿಯ ಮೃತದೇಹದ ಪಕ್ಕದಲ್ಲಿ ಅಳುತ್ತಿದ್ದ ಪತಿ ತಿರುವೆಂಕಡಂ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದರು.
ಅವರು ಹಾಗೆ ಬಿದ್ದದ್ದನ್ನು ಕಂಡ ಕುಟುಂಬದವರು ಆತನ ನಾಡಿಯನ್ನು ಪರಿಶೀಲಿಸಿದ್ದಾರೆ. ಆಗ ತಿರುವಂಕಡಂ ಕೂಡ ತನ್ನ ಹೆಂಡತಿಯೊಂದಿಗೆ ಸ್ವರ್ಗಸ್ಥರಾಗಿರುವುದು ತಿಳಿದು ಬಂದಿದೆ. ಸಾವಿನಲ್ಲೂ ಒಂದಾದ ಈ ದಂಪತಿ ಪ್ರೀತಿ, ಅಲ್ಲಿನ ವಾಸಿಗಳನ್ನು ಇನ್ನಷ್ಟು ದುಃಖಕ್ಕೀಡು ಮಾಡಿದೆ.