ಮುಂಬೈ: ಕೊರೊನಾ ಮೊದಲ ಅಲೆಯಲ್ಲಿ ಭಾರೀ ಸೋಂಕಿನಿಂದ ತತ್ತರಿಸಿದ್ದ ಮಹಾರಾಷ್ಟ್ರದ ಧಾರಾವಿ ಸ್ಲಂನಲ್ಲಿ ಇಂದು ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಧಾರಾವಿ ಏಷ್ಯಾದ ಅತೀ ದೊಡ್ಡ ಸ್ಲಂ ಏರಿಯಾ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಅತಿ ಹೆಚ್ಚು ಕೊರೊನಾ ಪ್ರಕರಣಗಳಿಂದ ತತ್ತರಿಸಿದ್ದ ಧಾರಾವಿ ಇದೀಗ ಶೂನ್ಯಕ್ಕೆ ಬಂದಿದ್ದು ಅಚ್ಚರಿಯ ಸಂಗತಿ. ಗ್ರೇಟರ್ ಮುಂಬೈ ಮುನ್ಸಿಪಾಲ್ ನೀಡಿರುವ ಮಾಹಿತಿಯಲ್ಲಿ ಸೋಮವಾರದಂದು ಕೊರೊನಾದ ಒಂದೇ ಒಂದು ಪ್ರಕರಣ ಧಾರಾವಿಯಲ್ಲಿ ವರದಿಯಾಗಿಲ್ಲ.
ಇನ್ನು ಭಾನುವಾರದಂದು ಧಾರಾವಿಯಲ್ಲಿ ಕೇವಲ ಎರಡು ಪ್ರಕರಣಗಳು ದಾಖಲಾಗಿದ್ದವು. ಸದ್ಯ ಧಾರಾವಿಯಲ್ಲಿ ಕೇವಲ 13 ಸಕ್ರಿಯ ಪ್ರಕರಣಗಳಿದ್ದವು. ಮೊದಲ ಅಲೆಯಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು.
2020ರಲ್ಲಿ ಧಾರಾವಿ ಮೇಲೆ ಕೊರೊನಾ ಕರಿಛಾಯೆ ಬಿದ್ದು, ಸುಮಾರು 350 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ, ಈ ಬಾರಿ ಇಲ್ಲಿ ಕೇವಲ 42 ಮಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ಹಾಕಿದರು. ಧಾರಾವಿ ಎರಡೂ ಕೊರೊನಾ ಅಲೆಗಳಿಂದ ಪಾರಾಗಿ ಬಂದಿದೆ. ಇದು ಪವಾಡವೇ ಎನ್ನಬಹುದು. ಕಿಕ್ಕಿರಿದು ತುಂಬಿರುವ ಜನಸಮೂಹದಿಂದ ಕೂಡಿರುವ ಧಾರಾವಿ ಕೊರೊನಾ ಗೆಲ್ಲುವಲ್ಲಿ ಯಶಸ್ವಿಯಾಗಿರುವುದು ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಂತೂ ಸುಳ್ಳಲ್ಲ.