ETV Bharat / headlines

ಚಾಮರಾಜನಗರ: ಮಿನಿಸ್ಟರ್ ಪ್ರೆಸ್​ಮೀಟ್​ ಬಳಿಕ ಹೈಡ್ರಾಮ.. ಸಾವಿನ ಸಂಖ್ಯೆಗಳೇ ಸುಳ್ಳೆಂದ ಕೈ ಶಾಸಕರು..! - ಚಾಮರಾಜನಗರ ಆಕ್ಸಿಜನ್​ ಕೊರತೆಯಿಂದ ಸಾವು ಸುದ್ದಿ

ಭಾನುವಾರ ಹನೂರಿನಲ್ಲಿ ಮೂವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಆದರೆ, ಇಂದು ಸಚಿವ ಸುಧಾಕರ್ ನೀಡಿದ ಮೃತರ ವಿವರಗಳಲ್ಲಿ ನಮ್ಮ ತಾಲೂಕಿನ ಮೂವರ ಹೆಸರೇ ಇಲ್ಲ, ಇಡೀ ಅಂಕಿ ಅಂಶಗಳೇ ಸುಳ್ಳಾಗಿದೆ.

Chamarajanagara
Chamarajanagara
author img

By

Published : May 3, 2021, 5:12 PM IST

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಆರೋಗ್ಯ ಸಚಿವ ಸುಧಾಕರ್ ಸುದ್ದಿಗೋಷ್ಠಿ ಬಳಿಕ ಗರಂ ಆದ ಕಾಂಗ್ರೆಸ್ ಶಾಸಕರಾದ ಆರ್.ನರೇಂದ್ರ ಮತ್ತು ಸಿ.ಪುಟ್ಟರಂಗ ಶೆಟ್ಟಿ ಸಾವಿನ ಪ್ರಕರಣಗಳ ಸಂಖ್ಯೆಗಳನ್ನೇ ಮುಚ್ಚಿಡುತ್ತಿದ್ದಾರೆಂದು ಗಂಭೀರ ಮಾಡಿದರು.

ಭಾನುವಾರ ಹನೂರಿನಲ್ಲಿ ಮೂವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಆದರೆ, ಇಂದು ಸಚಿವ ಸುಧಾಕರ್ ನೀಡಿದ ಮೃತರ ವಿವರಗಳಲ್ಲಿ ನಮ್ಮ ತಾಲೂಕಿನ ಮೂವರ ಹೆಸರೇ ಇಲ್ಲ, ಇಡೀ ಅಂಕಿ ಅಂಶಗಳೇ ಸುಳ್ಳಾಗಿದೆ. ಜೊತೆಗೆ, ಸತ್ತವರ ಸಮಯವನ್ನು ಸುಳ್ಳು ಹೇಳಿದ್ದು ರಾತ್ರಿ ಸಮಯದಲ್ಲೇ ಹೆಚ್ಚು ಮಂದಿ ಮೃತಪಟ್ಟರು, ಮೂವರು ಮಾತ್ರ ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆಮ್ಲಜನಕದ ಕೊರತೆಯಿಂದಲೇ ಅಸುನೀಗಿದ್ದಾರೆ ಎಂದು ಹನೂರು ಶಾಸಕ ಆರ್.ನರೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಅಧಿಕಾರಿಗಳಿಂದ ತನಿಖೆಯಾದರೆ ಏನೂ ಪ್ರಯೋಜನವಿಲ್ಲ, ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.

ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಕೇವಲ ಮೂವರು ಮಾತ್ರ ಸಾವನ್ನಪ್ಪಿದ್ದಾರೆ: ಸಚಿವ ಸುಧಾಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.