ನವದೆಹಲಿ: ಕೊರೊನಾ ವಿರುದ್ಧದ ಔಷಧ 2-ಡಿಜಿ ಯ 10,000 ಸ್ಯಾಚೆಟ್ ಇಂದಿನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಕೊರೊನಾ ನಿಯಂತ್ರಣ ಔಷಧವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ' ಇ-ಹೆಲ್ತ್ ಅಸಿಸ್ಟೆನ್ಸ್ ಮತ್ತು ಟೆಲಿ-ಕನ್ಸಲ್ಟೇಷನ್ (SeHAT)'ಒಪಿಡಿ ಪೋರ್ಟಲ್ ಅನ್ನು ಬಿಡುಗಡೆಗೊಳಿಸಿದ ಸಿಂಗ್, ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು. ಇದು ಸೇವಾ ಸಿಬ್ಬಂದಿಯ ಆರೋಗ್ಯಕ್ಕಾಗಿ ಅತ್ಯಂತ ನಿರ್ಣಾಯಕ ಸಮಯದಲ್ಲಿ ತೆಗೆದುಕೊಂಡ ಪ್ರಮುಖ ಹೆಜ್ಜೆಯಾಗಿದೆ ಹಾಗೆ ಆಸ್ಪತ್ರೆಯಲ್ಲಿನ ಒತ್ತೆ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ.
ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬ್ ಸಹಾಯದಿಂದ ಡಿಆರ್‌ಡಿಒ ಅತ್ಯಗತ್ಯವಾದ ಕೋವಿಡ್ ವಿರೋಧಿ ಔಷಧ 2-ಡಿಜಿ ಉತ್ಪಾದಿಸಿದೆ. .ಇದು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ. ಯಾರಿಗೆ 2-ಡಿಜಿ ಬೇಕು ಎಂದು ನಾನು ಅನೇಕ ರಾಜ್ಯಗಳಿಂದ ಮಾಹಿತಿಯನ್ನು ಪಡೆಯುತ್ತಿದ್ದೇನೆ. 10,000 ಸ್ಯಾಚೆಟ್‌ಗಳು ಇಂದು ಮಾರುಕಟ್ಟೆಗೆ ಬರುತ್ತಿವೆ ಎಂದು ಹೇಳಲು ನನಗೆ ಸಂತೋಷವಾಗಿದೆ ಎಂದರು.
ಈ ಔಷಧದ ಮೊದಲ ಬ್ಯಾಚ್ ಅನ್ನು ರಕ್ಷಣಾ ಸಚಿವ ಸಿಂಗ್ ಮತ್ತು ಕೇಂದ್ರ ಆರೋಗ್ಯ ಸಚಿವ ಶ್ರೀ ಹರ್ಷ್ ವರ್ಧನ್ ಅವರು ಮೇ 17 ರಂದು ಬಿಡುಗಡೆ ಮಾಡಿದ್ದರು.
2-ಡಿಜಿ ಯ ಮೊದಲ ಬ್ಯಾಚ್ ಏಮ್ಸ್, ಸಶಸ್ತ್ರ ಪಡೆ ಆಸ್ಪತ್ರೆಗಳು, ಡಿಆರ್‌ಡಿಒ ಆಸ್ಪತ್ರೆಗಳು ಮತ್ತು ಅಗತ್ಯವಿರುವ ಇತರ ಸ್ಥಳಗಳಿಗೆ ಮಾತ್ರ ಲಭ್ಯವಿರುತ್ತದೆ ಎಂದು ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ತಿಳಿಸಿದ್ದರು.