ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಹಿಂದಿ ಬಿಗ್ ಬಾಸ್ ಸೀಸನ್ 17ರ ಸ್ಪರ್ಧಿ. ಮೊದಲ ಬಾರಿಗೆ ಅವರು ಸುಶಾಂತ್ ಜೊತೆ ಬ್ರೇಕಪ್ ಆದ ಸಂದರ್ಭವನ್ನು ತೆರೆದಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮಿಬ್ಬರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸುಮಾರು ಏಳು ವರ್ಷಗಳ ಕಾಲ ನಾವು ಜೊತೆಯಾಗಿ ಇದ್ದೆವು. ಸುಶಾಂತ್ ಬಾಲಿವುಡ್ಗೆ ಎಂಟ್ರಿ ಕೊಟ್ಟು ಯಶಸ್ಸು ಗಳಿಸುತ್ತಿರುವ ಸಮಯದಲ್ಲಿ ನಾವಿಬ್ಬರು ದೂರವಾದೆವು. ಆ ಒಂದು ರಾತ್ರಿ ಎಲ್ಲವೂ ಬದಲಾಯಿತು ಎಂದು ಹೇಳಿದ್ದಾರೆ.
-
When you think you can suppress every girl the way you control your wife (#AnkitaLokhande) with your words, but all this won't work with #AishwaryaSharma.#VickyJain #BB17 #BiggBoss17pic.twitter.com/rZUPY6OY3A
— ♥KING UMAR♥ (@143all1) October 30, 2023 " class="align-text-top noRightClick twitterSection" data="
">When you think you can suppress every girl the way you control your wife (#AnkitaLokhande) with your words, but all this won't work with #AishwaryaSharma.#VickyJain #BB17 #BiggBoss17pic.twitter.com/rZUPY6OY3A
— ♥KING UMAR♥ (@143all1) October 30, 2023When you think you can suppress every girl the way you control your wife (#AnkitaLokhande) with your words, but all this won't work with #AishwaryaSharma.#VickyJain #BB17 #BiggBoss17pic.twitter.com/rZUPY6OY3A
— ♥KING UMAR♥ (@143all1) October 30, 2023
ಬಿಗ್ ಬಾಸ್ 17ರ ಸಹ ಸ್ಪರ್ಧಿಯಾಗಿರುವ ಮುನಾವರ್ ಫರೂಕಿ ಅವರೊಂದಿಗೆ ನಟಿ ಅಂಕಿತಾ ಲೋಖಂಡೆ, ಸುಶಾಂತ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. "ಅವನು ಇದ್ದಕ್ಕಿಂದ್ದಂತೆ ನನ್ನ ಜೀವನದಿಂದ ದೂರವಾದ. ಸುಶಾಂತ್ ಸಿಂಗ್ಗೆ ಬಾಲಿವುಡ್ನಲ್ಲಿ ಯಶಸ್ಸು ಸಿಕ್ಕ ಬಳಿಕ ಅವನ ಮೇಲೆ ಕೆಲವರು ಪ್ರಭಾವ ಬೀರಲು ಆರಂಭಿಸಿದರು. ಅವನು ನನ್ನ ಸನಿಹದಿಂದ ಏಕಾಏಕಿ ಮಾಯಾವಾಗಿಬಿಟ್ಟ. ಅವನ ಕಣ್ಣು ನೋಡುವಾಗ ಮೊದಲ ಪ್ರೀತಿ ಕಾಣಿಸಲೇ ಇಲ್ಲ. ಅವನು ನನ್ನಿಂದ ದೂರವಾಗುವಾಗ ಯಾವುದೇ ಕಾರಣವನ್ನು ನೀಡಿಲ್ಲ. ಇಂದಿಗೂ ನಾವಿಬ್ಬರು ಯಾಕಾಗಿ ದೂರವಾದೆವು ಎಂಬುದೇ ತಿಳಿದಿಲ್ಲ" ಎಂದಿದ್ದಾರೆ.
-
Heartfelt convo on #SushantSinghRajput𓃵 & their breakup!#AnkitaLokhande says: “There was no reason for our breakup. It ended and changed in one night. Jab aap success ka ladder climb karte hai toh people start putting words in your ears” #BiggBoss17pic.twitter.com/bhA5h3chck
— Jen 🍷 (@DsouzaJennifer) October 31, 2023 " class="align-text-top noRightClick twitterSection" data="
">Heartfelt convo on #SushantSinghRajput𓃵 & their breakup!#AnkitaLokhande says: “There was no reason for our breakup. It ended and changed in one night. Jab aap success ka ladder climb karte hai toh people start putting words in your ears” #BiggBoss17pic.twitter.com/bhA5h3chck
— Jen 🍷 (@DsouzaJennifer) October 31, 2023Heartfelt convo on #SushantSinghRajput𓃵 & their breakup!#AnkitaLokhande says: “There was no reason for our breakup. It ended and changed in one night. Jab aap success ka ladder climb karte hai toh people start putting words in your ears” #BiggBoss17pic.twitter.com/bhA5h3chck
— Jen 🍷 (@DsouzaJennifer) October 31, 2023
ಇದನ್ನೂ ಓದಿ: ಜೀ ರಿಷ್ತೆ ಅವಾರ್ಡ್ಸ್ 2020: ಸುಶಾಂತ್ನನ್ನು ನೆನಪಿಸಿಕೊಂಡ ನಟಿ ಅಂಕಿತಾ ಲೋಖಂಡೆ
ಅಂಕಿತಾ ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಬಿಗ್ ಬಾಸ್ ಸೀಸನ್ 17ರ ಸ್ಪರ್ಧಿಯಾಗಿದ್ದಾರೆ. ಏಕ್ತಾ ಕಪೂರ್ ಅವರ ಪವಿತ್ರ ರಿಷ್ತಾದಲ್ಲಿ ನಟಿ ಅಂಕಿತಾ ಲೋಖಂಡೆ ಕಾಣಿಸಿಕೊಂಡಿದ್ದರು. ಅರ್ಚನಾ ಪಾತ್ರ ನಿರ್ವಹಿಸಿದ್ದು, ದಿ. ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಜೋಡಿಯಾಗಿದ್ದರು. ವಿವಾಹಿತ ಜೋಡಿಯ ಸುತ್ತ ಕಥೆ ಹೆಣೆಯಲಾಗಿದ್ದು, ಈ ಇಬ್ಬರಿಗೂ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ನಿಜವಾಗಿ ಹೇಳಬೇಕೆಂದರೆ, ರೀಲ್ ಲೈಫ್‌ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲಿಯೂ ಇಬ್ಬರು ಶೋ ಶೂಟಿಂಗ್‌ನಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪವಿತ್ರ ರಿಷ್ತಾ ಜನರ ಮನೆ ಮಾತಾಗಿತ್ತು. ಈಗಲೂ ಪವಿತ್ರ ರಿಷ್ತಾ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.
ಬಾಲಿವುಡ್ನ ಭರವಸೆ ನಟನಾಗಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್ 2020ರ ಜುಲೈ 14 ರಂದು ನಿಧನರಾದರು. ನಟನ ಮೃತದೇಹ ಮುಂಬೈನ ಅವರ ನಿವಾಸದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಬಾಲಿವುಡ್ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿತ್ತು. ಅವರ ಕೊನೆಯ ಚಿತ್ರವೇ ದಿಲ್ ಬೆಚಾರ.
ಇದನ್ನೂ ಓದಿ: 14 ವರ್ಷಗಳ ''ಪವಿತ್ರ ರಿಶ್ತಾ'' ವಿಡಿಯೋ ಹಂಚಿಕೊಂಡ ಅಂಕಿತಾ: ಸುಶಾಂತ್ ಸಿಂಗ್ ರನ್ನು ನೆನಪಿಸಿಕೊಂಡ ಅಭಿಮಾನಿಗಳು...