ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ, ಸೀತಾರಾಮ್ ಬಿನೋಯ್ ಕೇಸ್ ನಂಬರ್ 18 ಸಿನಿಮಾ ಬಳಿಕ ಈಗ ಮತ್ತೊಮ್ಮೆ ಹೊಸಬರ ಜತೆ ಕೈ ಜೋಡಿಸಿದ್ದಾರೆ. ಹೌದು, ಈಗ ಚಿನ್ನಾರಿ ಮುತ್ತ 'ರಾಘು' ಆಗಿ ಮಿಂಚಲಿದ್ದಾರೆ. ವಿಜಯ್ ರಾಘವೇಂದ್ರ ನಟಿಸುತ್ತಿರುವ 'ರಾಘು' ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣಗೊಂಡಿದೆ. ವಿಜಯ್ ರಾಘವೇಂದ್ರ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಆನ, ಬ್ಯಾಂಗ್ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಆನಂದ್ ರಾಜ್ ರಾಘು ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ಸದ್ಯ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವಂತಿದೆ. ರಾಘು ಥ್ರಿಲ್ಲರ್ ಎಕ್ಸ್ ಪಿರಿಮೆಂಟಲ್ ಸಿನಿಮಾ. ಕನ್ನಡದಲ್ಲಿ ಇದೊಂದು ಹೊಸತನದ ಸಿನಿಮಾವಾಗಿದ್ದು, ನಟ ವಿಜಯ್ ರಾಘವೇಂದ್ರ ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ.
ಡಿಕೆಎಸ್ ಸ್ಟುಡಿಯೋಸ್ ಮತ್ತು ಕೋಟ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿ ರಣ್ವೀತ್ ಶಿವಕುಮಾರ್, ಅಭಿಷೇಕ್ ಕೋಟ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬ್ಯಾಂಗ್, ಫ್ಯಾಮಿಲಿ ಪ್ಯಾಕ್ ಖ್ಯಾತಿಯ ಉದಯ್ ಲೀಲಾ ಕ್ಯಾಮರಾ ವರ್ಕ್, ಸೂರಜ್ ಜೋಯಿಸ್ ಸಂಗೀತ ಸಂಯೋಜನೆ, ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ. ಮೇ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ಟೈಟಲ್ ಹಾಗೂ ಫಸ್ಟ್ ಲುಕ್ ಬಿಟ್ಟು ಚಿತ್ರರಸಿಕರ ಕ್ಯೂರಿಯಾಸಿಟಿಯನ್ನು ರಾಘು ಚಿತ್ರತಂಡ ದುಪ್ಪಟ್ಟು ಮಾಡಿದೆ.
ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್ನಲ್ಲಿ RRR ಸಿನಿಮಾ ದಾಖಲೆ ಮುರಿದ ಕೆಜಿಎಫ್ ಚಾಪ್ಟರ್ 2?