ಹೈದರಾಬಾದ್ (ತೆಲಂಗಾಣ): ಲಲಿತ್ ಮೋದಿ ಅವರು ತಮ್ಮ ಹಾಗೂ ಸುಶ್ಮಿತಾ ಸೇನ್ ಮಧ್ಯದ ಸಂಬಂಧವನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಬಹಿರಂಗಗೊಳಿಸಿದ ನಂತರ ಈಗ, ಸುಶ್ಮಿತಾ ಸೇನ್ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಈ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತನ್ನ ಮಾಜಿ ಲವರ್ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದನ್ನು ಒಂದು ರೀತಿಯಲ್ಲಿ ರೋಹ್ಮನ್ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.
2018ರಲ್ಲಿ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಮಾಡೆಲ್ ರೋಹ್ಮನ್ ಶಾಲ್ ಜೊತೆಗೆ ಸುಶ್ಮಿತಾ ಡೇಟಿಂಗ್ ಮಾಡುತ್ತಿದ್ದರು. ಕಳೆದ ವರ್ಷ ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಇಬ್ಬರೂ ಹೇಳಿಕೊಂಡಿದ್ದರು. ಆದರೆ ಇಬ್ಬರೂ ಬೇರೆಯಾದ ನಂತರವೂ ಮಧುರವಾದ ಸಂಬಂಧ ಉಳಿಸಿಕೊಂಡಿದ್ದಾರೆ. ಈಗ ಲಲಿತ್ ಮೋದಿಯೊಂದಿಗೆ ಡೇಟಿಂಗ್ ಮಾಡಿದರೂ ರೋಹ್ಮನ್ ಸುಶ್ಮಿತಾರನ್ನು ಸಮರ್ಥಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.
- " class="align-text-top noRightClick twitterSection" data="
">
ಡಿಜಿಟಲ್ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ರೋಹ್ಮನ್, ಸುಶ್ಮಿತಾರ ಆಯ್ಕೆಯ ಬಗ್ಗೆ ಸಂಶಯ ಪಡಲು ಕಾರಣಗಳಿಲ್ಲ ಎಂದು ಹೇಳಿದ್ದಾರೆ.
"ಅವರ ಖುಷಿಯಲ್ಲಿ ಖುಷಿ ಕಾಣೋಣ. ಪ್ರೀತಿ ಸುಂದರವಾಗಿದೆ. ಆಕೆ ಯಾರನ್ನಾದರೂ ಆಯ್ಕೆ ಮಾಡಿಕೊಂಡಿದ್ದಾಳೆಂದರೆ ಅವರು ಅದಕ್ಕೆ ಅರ್ಹರಾಗಿರುತ್ತಾರೆ. ಇಷ್ಟು ಮಾತ್ರ ನನಗೆ ಗೊತ್ತು" ಎಂದಿದ್ದಾರೆ ರೋಹ್ಮನ್.
ರೋಹ್ಮನ್ ಹಾಗೂ ಸುಶ್ಮಿತಾ ಮೂರು ವರ್ಷಗಳ ಕಾಲ ಒಟ್ಟಾಗಿದ್ದರು.
- " class="align-text-top noRightClick twitterSection" data="
">
ಶುಕ್ರವಾರದಂದು ರೋಹ್ಮನ್ ಸೋಶಿಯಲ್ ಮೀಡಿಯಾದಲ್ಲಿ ವ್ಯಂಗ್ಯಭರಿತ ಟೀಕಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದಾರೆ. "ಯಾರನ್ನಾದರೂ ನೋಡಿ ನಕ್ಕರೆ ನಿನಗೆ ಸುಖ ಸಿಗುವ ಹಾಗಿದ್ದರೆ ನಗು. ಆದರೆ ದುಃಖಿತರಾಗಿರುವುದು ಅವರಲ್ಲ, ನೀನು. #SpreadLoveNotHate" ಎಂದು ಅವರು ಇನ್ಸ್ಟಾಗ್ರಾಂ ನಲ್ಲಿ ಬರೆದಿದ್ದಾರೆ.
ಈ ಮೂಲಕ ರೋಹ್ಮನ್, ತನ್ನ ಮಾಜಿ ಗೆಳತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪಹಾಸ್ಯ ಮಾಡಿದ್ದಕ್ಕಾಗಿ ಟ್ರೋಲರ್‌ಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬೀವಿ ನಂ.1 ಚಿತ್ರದ ಖ್ಯಾತಿಯ ನಟಿ ಸುಶ್ಮಿತಾ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸುಶ್ಮಿತಾ ಹಾಗೂ ಲಲಿತ್ ಮೋದಿ ಅವರ ಮಧ್ಯೆ 10 ವರ್ಷ ವಯಸ್ಸಿನ ಅಂತರವಿರುವುದನ್ನೇ ದೊಡ್ಡ ವಿಷಯವನ್ನಾಗಿಸಿ ಟ್ರೋಲರ್ಗಳು ಟ್ರೋಲ್ ಮಾಡುತ್ತಿದ್ದಾರೆ.
ಲಲಿತ್ ಈ ಹಿಂದೆ ಮಿನಲ್ ಸಗ್ರಾನಿ ಎಂಬುವರನ್ನು ಅಕ್ಟೋಬರ್ 1991 ರಲ್ಲಿ ಅವರು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳು - ಮಗ ರುಚಿರ್ ಮತ್ತು ಮಗಳು ಆಲಿಯಾ. ದುರದೃಷ್ಟವಶಾತ್, ಮಿನಲ್ 2018 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಸುಶ್ಮಿತಾ ಇಬ್ಬರು ದತ್ತು ಪುತ್ರಿಯರಾದ ರೆನೀ ಮತ್ತು ಅಲಿಸಾ ಅವರ ತಾಯಿ.