ETV Bharat / entertainment

ಅಣ್ಣ-ತಂಗಿ ಬಾಂಧವ್ಯದ 'ಸೋಲ್ ಆಫ್ ಬೆಂಕಿ' ಸಾಂಗ್​ ರಿಲೀಸ್​ - Anish

'ರಾಮಾರ್ಜುನಾ' ಚಿತ್ರದ ಬಳಿಕ ಅನೀಶ್‌ ನಟಿಸುತ್ತಿರುವ ಹಾಗು ಹಿರಿಯ ನಿರ್ದೇಶಕ ಎ.ಆರ್‌.ಬಾಬು ಪುತ್ರ ಶಾನ್‌ ನಿರ್ದೇಶಿಸುತ್ತಿರುವ 'ಬೆಂಕಿ' ಸಿನಿಮಾದ 'ಸೋಲ್ ಆಫ್ ಬೆಂಕಿ' ಹಾಡು ಬಿಡುಗಡೆಯಾಗಿದೆ.

ಬೆಂಕಿ
ಬೆಂಕಿ
author img

By

Published : May 22, 2022, 8:50 AM IST

'ಪೊಲೀಸ್ ಕ್ವಾರ್ಟರ್ಸ್', 'ಅಕಿರ', 'ವಾಸು ನಾನು ಪಕ್ಕಾ ಕಮರ್ಷಿಯಲ್' ಸಿನಿಮಾಗಳ ಮೂಲಕ ಸ್ಯಾಂಡಲ್​ವುಡ್‌ಗೆ ಪರಿಚಯವಾಗಿರುವ ನಟ ಅನೀಶ್ ತೇಜೇಶ್ವರ್. 'ರಾಮಾರ್ಜುನಾ' ಚಿತ್ರದ ಬಳಿಕ ಇವರ ನಟನೆಯ 'ಬೆಂಕಿ' ಸಿನಿಮಾದ ಸೋಲ್ ಆಫ್ ಬೆಂಕಿ ಹಾಡು ಬಿಡುಗಡೆಯಾಗಿದೆ. ಅಣ್ಣ-ತಂಗಿಯ ನಡುವಿನ ಬಾಂಧವ್ಯದ ಗೀತೆಗೆ ನಟಿ ಚೈತ್ರಾ ಆಚಾರ್ ಧ್ವನಿಯಾಗಿದ್ದಾರೆ.

ತಾಯಿಯನ್ನು ಕಳೆದುಕೊಂಡ ತಂಗಿಗೆ ಪೋಷಕರ ಸ್ಥಾನ ತುಂಬುವ ಅಣ್ಣ ಹಾಗು ತಾಯಿಯ ತ್ಯಾಗವನ್ನು ಈ ಹಾಡು ಬಣ್ಣಿಸುತ್ತದೆ. ನಾಗಾರ್ಜುನ್ ಶರ್ಮಾ ಸಾಹಿತ್ಯಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ನೀಡಿದ್ದಾರೆ.

  • " class="align-text-top noRightClick twitterSection" data="">

ಈ ಮೊದಲು ಬಿಡುಗಡೆಯಾಗಿದ್ದ ಅನೀಶ್ ಡ್ಯಾನ್ಸಿಂಗ್ ನಂಬರ್ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. 'ಬೆಂಕಿ', ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾ. ಚಿತ್ರದ ನಾಯಕಿಯಾಗಿ 'ರೈಡರ್‌' ಸಿನಿಮಾದ ಸಂಪದ ಹುಲಿವಾನ ನಟಿಸಿದ್ದಾರೆ. ಶ್ರುತಿ ಪಾಟೀಲ್‌, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ ಮೂಲಕ ಅನೀಶ್‌ 'ಬೆಂಕಿ' ಚಿತ್ರ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಲಾಲ್ ಮಹಲ್ ನೃತ್ಯ ಪ್ರಕರಣ ; ನರ್ತಕಿ ವೈಷ್ಣವಿ ಪಾಟೀಲ್ ಸೇರಿ ಮೂವರ ವಿರುದ್ಧ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.