ಜೈಪುರ (ರಾಜಸ್ಥಾನ): ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಇಂದು ಸ್ವರ್ಣನಗರಿಯಲ್ಲಿರುವ ಸೂರ್ಯಗಢ್ ಹೋಟೆಲ್‌ನಲ್ಲಿ ವಿವಾಹವಾಗಲಿದ್ದಾರೆ. ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇಲ್ಲಿಗೆ ಆಗಮಿಸಿದ್ದಾರೆ. ಮುಖ್ಯವಾಗಿ ಜೂಹಿ ಚಾವ್ಲಾ, ಅವರ ಪತಿ ಜೈ ಮೆಹ್ತಾ, ನಿರ್ಮಾಪಕ ಕರಣ್ ಜೋಹರ್, ನಟ ಶಾಹಿದ್ ಕಪೂರ್ ಮತ್ತು ಇತರರು ಸೇರಿದ್ದಾರೆ. ಇನ್ನು, ಕಿಯಾರಾ ಅಡ್ವಾಣಿ ಅವರ ಬಾಲ್ಯದ ಗೆಳತಿ ಮತ್ತು ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಭಾನುವಾರ ಸೂರ್ಯಗಢ ಹೋಟೆಲ್‌ಗೆ ಬಂದಿದ್ದರು. ಸ್ವಲ್ಪ ಸಮಯದ ಬಳಿಕ ಅವರು ಮರಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿದ್ಧಾರ್ಥ್ - ಕಿಯಾರಾ ಮದುವೆ: ನಟಿಯ ಬ್ರೈಡಲ್ ಫೋಟೋ ವೈರಲ್..
ಮತ್ತೊಂದೆಡೆ ಮೆಹೆಂದಿ ಸಮಾರಂಭದ ಬಳಿಕ ಸೋಮವಾರ ರಾತ್ರಿ ಅದ್ಧೂರಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳೊಂದಿಗೆ ಕುಟುಂಬ ಸದಸ್ಯರು ಭರ್ಜರಿ ನೃತ್ಯ ಮಾಡಿದರು. ಈ ಸಮಯದಲ್ಲಿ, ವರ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಧು ಕಿಯಾರಾ ಅಡ್ವಾಣಿ ಕೂಡ ನೃತ್ಯ ಪ್ರದರ್ಶನ ನೀಡಿದರು. ಜನಪ್ರಿಯ ಹಾಡುಗಳಾದ ಕಾಲಾ ಚಶ್ಮಾ, ನಚ್‌ದೇ ನೆ ಸಾರೆ, ಜಗ್ ಜಗ್ ಜಿಯೋ ರಂಗಿ ಸೀರೆ, ಗುಲಾಬಿ ಚುನಾರಿಯಾ, ಡಿಸ್ಕೋ ದಿವಾನೆ ಸೇರಿ ಇತರ ಅನೇಕ ಹಾಡುಗಳಿಗೆ ಶಾಹಿದ್, ಮೀರಾ, ಕರಣ್ ಜೋಹರ್ ಮತ್ತು ಜೂಹಿ ಚಾವ್ಲಾ ಇತರರು ಹೆಜ್ಜೆ ಹಾಕಿದರು.
ವಿಶೇಷವಾಗಿ ನಟಿ ಕಿಯಾರಾ ಅಡ್ವಾಣಿ ಅವರ ಸಹೋದರ ಮಿಶಾಲ್ ಅಡ್ವಾಣಿ ಅವರು ತಮ್ಮ ಸಹೋದರಿಗಾಗಿ ಸಂಗೀತ ಕಚೇರಿಯಲ್ಲಿ ವಿಶೇಷ ನೃತ್ಯವನ್ನು ಮಾಡಿದರು. ಕಿಯಾರಾ ಅವರ ಸಹೋದರ ಮಿಶಾಲ್ ಅಡ್ವಾಣಿ ಸ್ವತಃ ರ‍್ಯಾಪರ್ ಸಂಯೋಜಕ ಮತ್ತು ಸಂಗೀತ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: ಸಿದ್ಧಾರ್ಥ್ ಕಿಯಾರಾ ವಿವಾಹ: ವಧುವಿನ ಕಡೆಯವರಿಗಿಂತ ವರನ ಅತಿಥಿಗಳ ಸಂಖ್ಯೆಯೇ ದುಪ್ಪಟ್ಟು!
ಮುಂಬೈ ಮತ್ತು ದೆಹಲಿಯಿಂದ ಅಡುಗೆ ತಂಡ: ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯು ಮದುವೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮುಂಬೈ ಮತ್ತು ದೆಹಲಿಯಿಂದ ಅಡುಗೆ ತಂಡವನ್ನು ಕರೆಸಿದೆ. ಮದುವೆಯಲ್ಲಿ ಸ್ಥಳೀಯರನ್ನು ಯಾವುದೇ ಕೆಲಸಕ್ಕೆ ತೊಡಗಿಸುತ್ತಿಲ್ಲ. ಸುಮಾರು 500 ವೇಟರ್‌ಗಳ ತಂಡವನ್ನು ನಿಯೋಜಿಸಲಾಗಿದ್ದು, ಅದರಲ್ಲಿ 200 ಮಂದಿ ಮುಂಬೈನವರು. ವೇಟರ್‌ಗಳಿಗೆ ಬಿಳಿ ಪ್ಯಾಂಟ್ ಮತ್ತು ಶರ್ಟ್ ಮತ್ತು ತಲೆಯ ಮೇಲೆ ಪೇಟದ ಡ್ರೆಸ್ ಕೋಡ್ ಅನ್ನು ನಿರ್ಧರಿಸಲಾಗಿದೆ. ಅಡುಗೆ ಕಾರ್ಯದ ನಿರ್ವಹಣೆಗೆ ಹೋಟೆಲ್ ಸಿಬ್ಬಂದಿ ಸಹಾಯ ಮಾಡುತ್ತಾರೆ.
ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಬಾಲಿವುಡ್ ತಾರೆಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಮದುವೆ ಸಂಭ್ರಮ: ನಾಳೆ ಅರಮನೆ ತಲುಪಲಿರುವ ಜೋಡಿ