ETV Bharat / entertainment

ಬಿಗ್​ ಬಾಸ್​ಗೆ ಶೈನ್​ ಶೆಟ್ಟಿ, ಶುಭಾ ಪೂಂಜಾ ಎಂಟ್ರಿ: ಈ ವಾರ ಡಬಲ್​ ಎಲಿಮಿನೇಶನ್​! - Bigg Boss kannada

Bigg Boss: 'ಮನೆಗೆ ಬಂದ್ರು ಶೈನ್ ಶೆಟ್ಟಿ ಮತ್ತು ಶುಭಾ; ಇಂದು ಡಬಲ್ ಎಲಿಮಿನೇಶನ್?' ಶೀರ್ಷಿಕೆಯಡಿ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ.

Shine Shetty and Shubha Poonja entry to Bigg Boss
ಬಿಗ್​ ಬಾಸ್​ಗೆ ಶೈನ್​ ಶೆಟ್ಟಿ, ಶುಭಾ ಪೂಂಜಾ ಎಂಟ್ರಿ
author img

By ETV Bharat Karnataka Team

Published : Dec 24, 2023, 12:27 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​​ ಬಾಸ್​ ಸೀಸನ್​ 10' ಕೊನೆ ಹಂತ ಸಮೀಪಿಸುತ್ತಿದೆ. ಬಗೆ ಬಗೆಯ ಟಾಸ್ಕ್, ಟ್ವಿಸ್ಟ್ ಕೊಡೋ ಮೂಲಕ ಕನ್ನಡಿಗರಿಗೆ ಫುಲ್ ಎಂಟರ್​​ಟೈನ್ಮೆಂಟ್​ ಕೊಡೋದ್ರಲ್ಲಿ ಈ ರಿಯಾಲಿಟಿ ಶೋ ಯಶಸ್ವಿ ಆಗಿದೆ. ಪ್ರೇಕ್ಷಕರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ ಎಂದು ನಂಬಲಾಗಿದೆ. ಪ್ರತಿದಿನದ ಸಂಚಿಕೆಗಾಗಿ ಅಪಾರ ಸಂಖ್ಯೆಯ ಪ್ರೇಕ್ಷಕರು ಕಾತರರಾಗಿರುತ್ತಾರೆ.

ವಾರದ ದಿನಗಳಲ್ಲಿ ಟಾಸ್ಕ್ ಚಿಂತೆಯಲ್ಲಿರುವ ಸ್ಪರ್ಧಿಗಳಿಗೆ ವಾರಾಂತ್ಯ ಬಂತೆಂದರೆ ಎಲಿಮಿನೇಶನ್​​ ಬಿಸಿ ಕಾಡುತ್ತೆ. ಅಭಿನಯ ಚಕ್ರವರ್ತಿ ಸುದೀಪ್​ ಬಂದು 'ವೀಕೆಂಡ್​ ವಿತ್​ ಸುದೀಪ್​' ಕಾರ್ಯಕ್ರಮ ನಡೆಸಿಕೊಡುತ್ತಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಸಪರೇಟ್​ ಫ್ಯಾನ್​ ಬೇಸ್ ಇದೆ. ವಾರವಿಡೀ ಕಾರ್ಯಕ್ರಮ ವೀಕ್ಷಿಸದಿರುವವರೂ ಕೂಡ ಕಿಚ್ಚನಿಗಾಗೇ ವಾರಾಂತ್ಯದ ಸಂಚಿಕೆಗಳನ್ನು ನೋಡೋದುಂಟು. ಸುದೀಪ್​​ ನಿರೂಪಣೆ ಶೈಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ರೆ ಈ ವಾರಾಂತ್ಯದ ಕಾರ್ಯಕ್ರಮವನ್ನು ನಟ ಸುದೀಪ್​​ ನಡೆಸಿಕೊಟ್ಟಿಲ್ಲ.

ಶನಿವಾರದ ಸಂಚಿಕೆಗೆ ಬಿಗ್​ ಬಾಸ್​​ ವಿಜೇತೆ, ಹಿರಿಯ ನಟಿ ಶ್ರುತಿ ಆಗಮಿಸಿ ನ್ಯಾಯ ಪಂಚಾಯಿತಿ ನಡೆಸಿಕೊಟ್ಟಿದ್ದರು. ಇಂದಿನ ಸಂಚಿಕೆಯಲ್ಲಿ ಶೈನ್​ ಶೆಟ್ಟಿ ಮತ್ತು ಶುಭಾ ಪೂಂಜಾ ಮಿಂಚು ಹರಿಸಲಿದ್ದಾರೆ. 'ಮನೆಗೆ ಬಂದ್ರು ಶೈನ್ ಶೆಟ್ಟಿ ಮತ್ತು ಶುಭಾ; ಇಂದು ಡಬಲ್ ಎಲಿಮಿನೇಶನ್?' ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: 'ಸಲಾರ್'​ ಅಬ್ಬರದ ನಡುವೆಯೂ 'ಡಂಕಿ' ಗಳಿಕೆಯಲ್ಲಿ ಅಲ್ಪ ಏರಿಕೆ

''ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಶೈನಿ ಶೆಟ್ಟಿ ಮತ್ತು ಶುಭಾ ಪೂಂಜಾ'' ಎಂದು ಪ್ರೋಮೋ ಆರಂಭಗೊಳ್ಳುತ್ತದೆ. ಇಬ್ಬರೂ ಈ ಮೊದಲಿನ ಸಂಚಿಕೆಗಳಲ್ಲಿ ಭಾಗಿ ಆಗಿದ್ದು, ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. ಮನೆಯೊಳಗೆ ಬರುತ್ತಲೇ ನಿಮ್ಮ ಮೈಕನ್ನು ಸರಿಪಡಿಸಿಕೊಳ್ಳಿ ಎಂದು ನಟಿ ಶುಭಾ ಪೂಂಜಾಗೆ ಬಿಗ್​ ಬಾಸ್​​ ಸೂಚಿಸಿದ್ದು, ಮನೆಯೊಳಗಿನ ಎಲ್ಲರ ಮೊಗದಲ್ಲಿ ನಗು ಜೋರಾಗಿತ್ತು. ಈ ಇಬ್ಬರೂ ಕೆಲ ಕಾಲ ಮನೆಯೊಳಗಿದ್ದು ನಂತರ ಹೊರಟಂತೆ ತೋರುತ್ತಿದೆ. ಮನೆಯೊಳಗಿರುವವರ ಪೈಕಿ ಆರು ಮಂದಿ ನಾಮಿನೇಟ್ ಆಗಿದ್ದಾರೆ. ಎರಡು ಕಾರುಗಳು ಮನೆಯ ಆವರಣದಲ್ಲಿ ಸಂಚರಿಸಿ, ನಾಮಿನೇಶನ್​ ಬಿಸಿ ಏರಿಸಿದೆ. ಓರ್ವರು ಅಥವಾ ಇಬ್ಬರ ಪಾಲಿಗೆ ಈ ಮನೆ ಬಾಗಿಲು ಶಾಶ್ವತವಾಗಿ ಮುಚ್ಚಿಕೊಳ್ಳಲಿದೆಯೇ ? ಎಂದು ಬಿಗ್​ ಬಾಸ್​ ಪ್ರಶ್ನಿಸಿದ್ದಾರೆ. ಡಬಲ್​ ಎಲಿಮಿನೇಶನ್​? ಎಂದು ಮನೆಯವರು ಚಿಂತೆಗೀಡಾಗಿರೋದನ್ನು ಪ್ರೋಮೋದಲ್ಲಿ ಕಾಣಬಹುದು.

ಇದನ್ನೂ ಓದಿ: ಮಿನುಗುವ ಸೀರೆಯಲ್ಲಿ ಕಂಗೊಳಿಸಿದ ಜಾಹ್ನವಿ ಕಪೂರ್​ : Photos​

ನಿನ್ನೆಯ ಸಂಚಿಕೆಯಲ್ಲಿ ನಟಿ ಶ್ರುತಿ ಭಾಗಿಯಾಗಿದ್ದರು. ಮನೆಯೊಳಗೆ ಮೊಬೈಲ್​ ಬಳಸುತ್ತಿದ್ದಾರೆ ಅನ್ನೋ ಊಹಾಪೋಹ ಸೋಷಿಯಲ್​ ಮೀಡಿಯಾದಲ್ಲಿ ಎದ್ದಿತ್ತು. ಆನ್​ಲೈನ್​​ನಲ್ಲಿ ಹರಡಿದ ವದಂತಿಗಳಿಗೆ ನಿನ್ನೆಯ ಸಂಚಿಕೆಯಲ್ಲಿ ಸ್ಪಷ್ಟನೆ ಸಿಕ್ಕಿದೆ. ಅದು ಮೊಬೈಲ್​ ಚಾರ್ಜರ್​ ಅಲ್ಲ, ಟ್ರಿಮ್ಮರ್ ಚಾರ್ಜರ್ ಅನ್ನೋದು ಬಯಲಾಗಿದೆ. ಈ ಮೂಲಕ ನೆಟ್ಟಿಗರ ಅನುಮಾನ ದೂರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.