ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿ ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಈ ಸಂತೋಷದ ಸಂದರ್ಭದಲ್ಲಿ, ಮಗಳು ಶಿಲ್ಪಾ ಶೆಟ್ಟಿ, ಪ್ರೀತಿಯ ಅಮ್ಮನಿಗಾಗಿ ವಿಶೇಷ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಶಿಲ್ಪಾ ಅವರು ಹೊಸ ಮತ್ತು ಹಳೆಯ ಫೋಟೋಗಳ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೀವು ನನ್ನ ಪ್ರಪಂಚ, ಆತ್ಮೀಯ ಗೆಳತಿ. ನೀವು ಸೂರ್ಯ, ಚಂದ್ರರಂತೆ ಸದಾ ಹೊಳೆಯುವ ನಕ್ಷತ್ರ. ನಿಮಗೆ ಜನ್ಮದಿನದ ಶುಭಾಶಯಗಳು. ನಿಮಗೆ ದೇವರು ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ ಎಂದು ಹಾರೈಸುತ್ತೇನೆ ಬರೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರ ಸಹೋದರಿ, ನಟಿ ಶಮಿತಾ ಶೆಟ್ಟಿ ಕೂಡ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ತಾಯಿಯೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ ಶಮಿತಾ, 'ನನಗೆ ತಿಳಿದಿರುವ ಶಕ್ತಿಶಾಲಿ ಮಹಿಳೆಗೆ ಜನ್ಮದಿನದ ಶುಭಾಶಯಗಳು… ನೀವು ಘನತೆಯ ಪ್ರತಿರೂಪವಾಗಿದ್ದೀರಿ. ನೀವು ಮಾಡುವ ಪ್ರತಿಯೊಂದಕ್ಕೂ ಧನ್ಯವಾದಗಳು ಎಂದು ಬರೆದಿದ್ದಾರೆ.
ಇದನ್ನೂ ಓದಿ: 'ನಿಕಮ್ಮ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಶಿಲ್ಪಾ ಶೆಟ್ಟಿ, ಅಭಿಮನ್ಯು ದಸ್ಸಾನಿ