ಖ್ಯಾತ ಚಿತ್ರನಿರ್ಮಾಪಕ ಕರಣ್ ಜೋಹರ್ ಅವರ ಜನಪ್ರಿಯ ಟಾಕ್ ಶೋ ಕಾಫಿ ವಿತ್ ಕರಣ್-7 ರ ಮೊದಲ ಎರಡು ಸಂಚಿಕೆಗಳು ಕೆಲವೊಂದಿಷ್ಟು ಸುದ್ದಿಯಾಗಿದ್ದವು. ಇದೀಗ ಕಾರ್ಯಕ್ರಮದ ಮೂರನೇ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ. ಮೂರನೇ ಸಂಚಿಕೆಯಲ್ಲಿ ಬಾಲಿವುಡ್ ಮತ್ತು ಸೌತ್ ಫಿಲ್ಮ್ ಇಂಡಸ್ಟ್ರಿಯಿಂದ ಇಬ್ಬರು ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ.
ಮೊದಲ ಸಂಚಿಕೆಗೆ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಭಾಗವಹಿಸಿದ್ದರು ಮತ್ತು ಎರಡನೇ ಸಂಚಿಕೆಯಲ್ಲಿ ಬಾಲಿವುಡ್ ಸ್ಟಾರ್ ಕಿಡ್ಸ್ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಆಗಮಿಸಿದ್ದರು. ಈ ಬಾರಿ ಅಕ್ಷಯ್ ಕುಮಾರ್ ಮತ್ತು ಸೌತ್ ಸಿನಿಮಾದ ನಂಬರ್ ಒನ್ ನಟಿ ಸಮಂತಾ ರುತ್ ಪ್ರಭು ಪಾಲ್ಗೊಂಡಿದ್ದಾರೆ.
- " class="align-text-top noRightClick twitterSection" data="
">
ಕಾರ್ಯಕ್ರಮದ ಎರಡು ಸಂಚಿಕೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಮೂರನೇ ಸಂಚಿಕೆಯ ಪ್ರೋಮೋ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಅವರ ಸಿನಿ ಜರ್ನಿಯನ್ನು ತಮಾಷೆಯಾಗಿ ಚರ್ಚಿಸಿರುವುದನ್ನು ಕಾಣಬಹುದಾಗಿದೆ. ಹಾಗೆ ಸಮಂತಾ ಅವರ ಕೆಲವು ಗಾಸಿಪ್ಗಳು ಮತ್ತು ಅವರ ಇಷ್ಟದ - ಬೇಸರದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರೋಮೋದಲ್ಲಿ ಕರಣ್ ಅವರು ಅಕ್ಷಯ್ ಮತ್ತು ಸಮಂತಾಗೆ ಕೇಳುವ ಕೆಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಹಿಂದಿನ ಆಸ್ಕರ್ ನಿರೂಪಕ ಕ್ರಿಸ್ ರಾಕ್ಸ್ ನಿಮ್ಮ ಪತ್ನಿ ಟ್ವಿಂಕಲ್ ಖನ್ನಾ ಬಗ್ಗೆ ತಮಾಷೆ ಮಾಡಿದ್ದರೆ ನೀವು ಏನು ಮಾಡುತ್ತಿದ್ದಿರಿ ಎಂದು ಕರಣ್ ಜೋಹರ್ ಅವರು ಅಕ್ಷಯ್ ಕುಮಾರ್ ಅವರನ್ನು ಕೇಳಿದರು. ಅಕ್ಷಯ್ ಕುಮಾರ್ ಅವರು "ಅವರ ಅಂತಿಮ ಸಂಸ್ಕಾರಕ್ಕೆ ನಾನು ಹಣ ಪಾವತಿಸುತ್ತೇನೆ", "ಸರಿ" ಎಂದು ಕಟುವಾಗಿ ಉತ್ತರಿಸಿದ್ದಾರೆ.
ಅಕ್ಷಯ್ ಮತ್ತು ಸಮಂತಾಗೆ ಕೇಳಿದ ಒಂದೋ ಎರಡೋ ಪ್ರಶ್ನೆಗಳು ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ ಮತ್ತು ಇದೀಗ ಅವರು ಶೋ ಸ್ಟ್ರೀಮಿಂಗ್ಗಾಗಿ ಕಾಯುತ್ತಿದ್ದಾರೆ. ಹಿಂದಿನ ಆಸ್ಕರ್ ನಿರೂಪಕ ಕ್ರಿಸ್ ರಾಕ್ಸ್ ನಿಮ್ಮ ಪತ್ನಿ ಟ್ವಿಂಕಲ್ ಖನ್ನಾ ಬಗ್ಗೆ ತಮಾಷೆ ಮಾಡಿದ್ದರೆ ನೀವು ಏನು ಮಾಡುತ್ತೀರಿ ಎಂದು ಕರಣ್ ಅಕ್ಷಯ್ ಕುಮಾರ್ ಅವರನ್ನು ಕೇಳಿದರು. ಅಕ್ಷಯ್ ಕುಮಾರ್ ಅವರು 'ಅವರ ಅಂತಿಮ ಸಂಸ್ಕಾರಕ್ಕೆ ನಾನು ಹಣ ಕೊಡುತ್ತೇನೆ' ಎಂದು ಕಟುವಾಗಿ ಉತ್ತರಿಸಿದ್ದಾರೆ.
ಕರಣ್ ಜೋಹರ್ ಸಮಂತಾ ಅವರನ್ನು ನೀವು ನಿಮ್ಮ ಆತ್ಮೀಯ ಸ್ನೇಹಿತರ ಬ್ಯಾಚುಲರ್ ಪಾರ್ಟಿಯನ್ನು ಆಯೋಜಿಸಲು ಬಯಸಿದರೆ, ಪಾರ್ಟಿಯಲ್ಲಿ ನೃತ್ಯ ಮಾಡಲು ನೀವು ಯಾವ ಇಬ್ಬರು ಬಾಲಿವುಡ್ ತಾರೆಗಳನ್ನು ನೇಮಿಸಿಕೊಳ್ಳಲು ಬಯಸುತ್ತೀರಿ ಎಂದು ಕೇಳಿದ್ದಕ್ಕೆ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ರ ಹೆಸರನ್ನು ಹೇಳಿದ್ದಾರೆ. ಈ ಸಂಚಿಕೆಯು ಜುಲೈ 21 ರಂದು ಸಂಜೆ 7 ಗಂಟೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.
ಸಮಂತಾ ಅವರು ಮುಂದಿನ ದಿನಗಳಲ್ಲಿ 'ಶಾಕುಂತಲಂ' ಮತ್ತು 'ಖುಷಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಹೊರತಾಗಿ ಅವರು ಬಾಲಿವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಅಕ್ಷಯ್ ಕುಮಾರ್ ಅವರ 'ರಕ್ಷಾ ಬಂಧನ' ಬಿಡುಗಡೆಗೆ ಸಿದ್ಧವಾಗುತ್ತಿದೆ. ನಂತರ ಅವರ ಬಳಿ ರಾಮ ಸೇತು, ಓ ಮೈ ಗಾಡ್ ಮತ್ತು ಸೆಲ್ಫಿ ಚಿತ್ರಗಳಿವೆ.
ಇದನ್ನೂ ಓದಿ : 'ಟೆಹ್ರಾನ್' ಸಿನಿಮಾದಲ್ಲಿ ಜಾನ್ ಅಬ್ರಹಾಂ ಜೊತೆ ಕಾಣಿಸಿಕೊಳ್ಳಲಿದ್ದಾರೆ ಮಾನುಷಿ ಚಿಲ್ಲರ್