ETV Bharat / entertainment

ಇಂಡಿಯನ್ ಐಡಲ್ ಸೀಸನ್​-13: ವಿಜೇತ 'ರಿಷಿ ಸಿಂಗ್'​ಗೆ ಬಂಪರ್​ ಬಹುಮಾನ - ರಿಷಿ ಸಿಂಗ್

ಇಂಡಿಯನ್ ಐಡಲ್ ಸೀಸನ್​ 13ರ ವಿಜೇತ ರಿಷಿ ಸಿಂಗ್ ಅವರು ಕೇವಲ ಟ್ರೋಫಿಯನ್ನು ಗೆದ್ದುಕೊಂಡಿಲ್ಲ, ಬದಲಿಗೆ 25 ಲಕ್ಷ ರೂಪಾಯಿಗಳ ಬಹುಮಾನದ ಮೊತ್ತದೊಂದಿಗೆ ಹೊಸ ಕಾರನ್ನೂ ಪಡೆದಿದ್ದಾರೆ.

Rishi Singh
ಇಂಡಿಯನ್ ಐಡಲ್ ಸೀಸನ್​-13: ವಿಜೇತ ರಿಷಿ ಸಿಂಗ್
author img

By

Published : Apr 3, 2023, 10:49 AM IST

Updated : Apr 3, 2023, 12:06 PM IST

Indian Idol 13: ಕಳೆದ 8-9 ತಿಂಗಳುಗಳಿಂದ ನಡೆಯುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಇಂಡಿಯನ್ ಐಡಲ್' ಸೀಸನ್ 13ರ ವಿಜೇತರನ್ನು ಅಂತಿಮವಾಗಿ ಘೋಷಿಸಲಾಗಿದೆ. ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆ ನಿವಾಸಿ ರಿಷಿ ಸಿಂಗ್ ವಿಜೇತರಾದರು. ಟ್ರೋಫಿ, 25 ಲಕ್ಷ ರೂ ನಗದು ಹಾಗೂ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಅವರಿಗೆ ಹೊಚ್ಚ ಹೊಸ ಕಾರನ್ನು ಉಡುಗೊರೆಯಾಗಿ ನೀಡಲಾಯಿತು.

ಇಂಡಿಯನ್ ಐಡಲ್ ಟ್ರೋಫಿ ಗೆಲ್ಲುವುದು ಪ್ರತಿಯೊಬ್ಬ ಸ್ಪರ್ಧಿಯ ಕನಸಾಗಿದ್ದು, ಈ ಬಾರಿ ರಿಷಿ ಸಿಂಗ್ ಅವರ ಕನಸು ನನಸಾಗಿದೆ. ದೇಬೋಸ್ಮಿತಾ ರಾಯ್ ದ್ವಿತೀಯ ಹಾಗೂ ಚಿರಾಗ್ ಕೊತ್ವಾಲ್ ತೃತೀಯ ಸ್ಥಾನ ಪಡೆದರು. ಬಿದಿಪ್ತ ಚಕ್ರವರ್ತಿ ನಾಲ್ಕನೇ ಸ್ಥಾನ ಪಡೆದರೆ, ಶಿವಂ ಸಿಂಗ್ ಮತ್ತು ಸೋನಾಕ್ಷಿ ಕರ್ ಐದು ಮತ್ತು ಆರನೇ ಸ್ಥಾನ ಪಡೆದರು. ನಿರ್ದೇಶಕ-ನಿರ್ಮಾಪಕ ರಾಕೇಶ್ ರೋಷನ್ ಅವರ ಮಗ ಹೃತಿಕ್ ರೋಷನ್ ಅವರ ಮುಂಬರುವ ಚಿತ್ರಕ್ಕಾಗಿ ರಿಷಿಗೆ ಹಿನ್ನೆಲೆ ಗಾಯನಕ್ಕೆ ಅವಕಾಶವನ್ನು ನೀಡಿದರು. ಭಾರತದ ಅತ್ಯುತ್ತಮ ನೃತ್ಯಗಾರ್ತಿಗಾಗಿ ಗೀತಾ ಕಪೂರ್, ಟೆರೆನ್ಸ್ ಲೂಯಿಸ್ ಭಾಗವಹಿಸಿದ್ದರು. ಹಿಮೇಶ್ ರೇಶಮಿಯಾ, ವಿಶಾಲ್ ದಾದ್ಲಾನಿ ಮತ್ತು ನೇಹಾ ಕಕ್ಕರ್ ತೀರ್ಪುಗಾರರಾಗಿದ್ದರು.

Rishi Singh
ರಿಷಿ ಸಿಂಗ್

ಮೊದಲ ಮತ್ತು ಎರಡನೇ ರನ್ನರ್ ಅಪ್ ಅವರಿಗೆ ಟ್ರೋಫಿ ಮತ್ತು ತಲಾ 5 ಲಕ್ಷ ರೂ., ಮೂರನೇ ಮತ್ತು ನಾಲ್ಕನೇ ರನ್ನರ್‌ಅಪ್‌ಗಳಾದ ಬಿದಿಪ್ತ ಚಕ್ರವರ್ತಿ ಮತ್ತು ಶಿವಂ ಸಿಂಗ್‌ಗೆ ತಲಾ 3 ಲಕ್ಷ ರೂ., ಎಲ್ಲಾ 6 ಫೈನಲಿಸ್ಟ್‌ಗಳು ರೂ 1 ಲಕ್ಷದ ಚೆಕ್ ಅನ್ನು ಪಡೆದರು ಮತ್ತು ನಂತರ ಉಡುಗೊರೆ ಹ್ಯಾಂಪರ್‌ಗಳನ್ನು ಪಡೆದರು. ಇಂಡಿಯನ್ ಐಡಲ್ ಒಂದು ಸಂಗೀತ ಕಾರ್ಯಕ್ರಮ. ಹಲವು ವರ್ಷಗಳಿಂದ ಭಾರತದ ಮೂಲೆ ಮೂಲೆಗಳಿಂದ ಗಾಯಕರನ್ನು ಹುಡುಕಲಾಗುತ್ತಿದೆ. ಸಂಗೀತ ಕ್ಷೇತ್ರದ ಹಲವು ಪ್ರಮುಖ ಕಲಾವಿದರು, ಸಂಯೋಜಕರು ಕಾರ್ಯಕ್ರಮದಲ್ಲಿದ್ದಾರೆ. ಹಿನ್ನೆಲೆ ಗಾಯನ, ಅತ್ಯುತ್ತಮ ಗಾಯಕರಿಗೆ ಅವಕಾಶವನ್ನು ನೀಡುತ್ತದೆ.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ರಿಷಿ ಸಿಂಗ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಾರೆ. ಟ್ರೋಫಿಯನ್ನು ನಂತರ ಬಿಟಿಯೊಂದಿಗೆ ಮಾತನಾಡಿದ ರಿಷಿ, ವಿದೇಶ ಪ್ರವಾಸ ಮತ್ತು ಗಾಯನದ ಬಗ್ಗೆ ಇನ್ನಷ್ಟು ಕಲಿಯಲು ಬಯಸುತ್ತೇನೆ ಎಂದು ಹೇಳಿದರು.

Rishi Singh
ರಿಷಿ ಸಿಂಗ್

'ಕನಸು ನನಸಾಗಿದೆ': ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಿ ಸಿಂಗ್ "ನನ್ನ ಕನಸು ನನಸಾಗಿದ ಕ್ಷಣ. ಇಂತಹ ಜನಪ್ರಿಯ ಮತ್ತು ಅಪ್ರತಿಮ ಕಾರ್ಯಕ್ರಮದ ಪರಂಪರೆಯನ್ನು ಮುಂದುವರಿಸುವುದು ದೊಡ್ಡ ಗೌರವ. ಇಂತಹ ಅದ್ಭುತ ಕಾರ್ಯಕ್ರಮವನ್ನು ನಮಗೆ ನೀಡಿದ ಇಂಡಿಯನ್ ಐಡಲ್ ವಾಹಿನಿ, ತೀರ್ಪುಗಾರರು ಮತ್ತು ಇಡೀ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದ ಸೋನಿ ಚಾನೆಲ್‌ಗೆ ನಾನು ಋಣಿಯಾಗಿದ್ದೇನೆ. ಈ ಅಪೇಕ್ಷಿತ ಪ್ರಶಸ್ತಿಯನ್ನು ಗೆಲ್ಲಲು ಯಾವಾಗಲೂ ನನ್ನನ್ನು ಬೆಂಬಲಿಸಿದ ಮತ್ತು ನನಗೆ ಮತ ಹಾಕಿದ ನನ್ನ ಎಲ್ಲಾ ಅಭಿಮಾನಿಗಳು ಮತ್ತು ವೀಕ್ಷಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕನಸನ್ನು ನನಸು ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು" ಎಂದರು.

ಮುಂದುವರೆದು ರಿಷಿ ತನ್ನ ಪೋಷಕರು ತನ್ನನ್ನು ದತ್ತು ತೆಗೆದುಕೊಂಡ ಬಗ್ಗೆ ಹೇಳಿದ್ದಾರೆ. ಅವರು ಇಲ್ಲದಿದ್ದರೆ, "ನಾನು ಎಲ್ಲೋ ಕೊಳೆಯುತ್ತಿದ್ದೆ, ಅಥವಾ ಬಹುಶಃ ಸಾಯುತ್ತಿದ್ದೆ. ಇತ್ತೀಚೆಗಷ್ಟೇ ರಿಯಾಲಿಟಿ ಶೋನ ಥಿಯೇಟರ್ ರೌಂಡ್ ನಲ್ಲಿ ತನ್ನ ಹಿಂದಿನ ಬಗ್ಗೆ ತಿಳಿದುಕೊಂಡಿದ್ದೇನೆ. ಅಂದು ಪೋಷಕರು ಅವರ ಜೀವನದ ದೊಡ್ಡ ಸತ್ಯವನ್ನು ಹಂಚಿಕೊಂಡರು. ಅವರಿಲ್ಲದಿದ್ದರೆ, ನಾನು ಇಲ್ಲಿ ಇರುತ್ತಿರಲಿಲ್ಲ ಎಂದು ನನಗೆ ತಿಳಿದಿದೆ. ಅವರು ನನಗೆ ದೇವರಂತೆ" ಎಂದು ಭಾವುಕರಾದರು.

Rishi Singh
ರಿಷಿ ಸಿಂಗ್

"ಭಾರತೀಯ ದೂರದರ್ಶನದಲ್ಲಿ ದೀರ್ಘಾವಧಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಇಂಡಿಯನ್ ಐಡಲ್ ರಾಷ್ಟ್ರಕ್ಕೆ ಕೆಲವು ಅತ್ಯುತ್ತಮ ಗಾಯಕರನ್ನು ನೀಡಿದೆ. ಈ ಸೀಸನ್ ರೋಮಾಂಚನಕಾರಿಯಾಗಿತ್ತು. ನಾವು ರಾಷ್ಟ್ರದಾದ್ಯಂತದ ಪ್ರತಿಭೆಗಳನ್ನು ಹುಡುಕಿದ್ದೇವೆ. ಅವರೆಲ್ಲರೂ ಅತ್ಯುತ್ತಮರಾಗಿದ್ದರು. ಅವರೊಂದಿಗೆ ಈ ಪ್ರಯಾಣದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಈ 6 ಸ್ಪರ್ಧಿಗಳಲ್ಲಿ ಪ್ರತಿಯೊಬ್ಬರು ಅರ್ಹರಾಗಿದ್ದಾರೆ. ಆದಾಗ್ಯೂ, ರಿಷಿ ಸಿಂಗ್ ಅವರು ಸ್ಪರ್ಧೆಯಲ್ಲಿ ಗೆದ್ದಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಏಕೆಂದರೆ ಅವರು ಸಾಕಷ್ಟು ಭರವಸೆ ಮತ್ತು ಬಹುಮುಖ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ"- ತೀರ್ಪುಗಾರ ಹಿಮೇಶ್ ರೇಶಮಿಯಾ

ಇದನ್ನೂ ಓದಿ: ಸಾಹಸಮಯ 'ಖತ್ರೋನ್ ಕೆ ಕಿಲಾಡಿ' 13ನೇ ಸೀಸನ್ ಶೀಘ್ರವೇ ಪ್ರಾರಂಭ: ಸ್ಪರ್ಧಿಗಳ ಪಟ್ಟಿ ಇಲ್ಲಿದೆ..

Last Updated : Apr 3, 2023, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.