ETV Bharat / entertainment

'ಚಳಿ, ಕೇಕ್, ಮುದ್ದಾಟ..': ಸ್ಯಾಂಡಲ್​ವುಡ್ ಸಿಂಡ್ರೆಲಾ ಬರ್ತ್​ಡೇ ಸೆಲೆಬ್ರೇಷನ್ ಫೋಟೋ - ಯಶ್ ರಾಧಿಕಾ ಪಂಡಿತ್

ಕನ್ನಡ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಬರ್ತ್​ಡೇ ಸೆಲೆಬ್ರೇಷನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

radhika pandit
ರಾಧಿಕಾ ಪಂಡಿತ್
author img

By

Published : Mar 9, 2023, 8:24 AM IST

ಸ್ಯಾಂಡಲ್​ವುಡ್ ಸಿಂಡ್ರೆಲಾ ಎಂದೇ ಕರೆಯಲಾಗುವ ನಟಿ ರಾಧಿಕಾ ಪಂಡಿತ್ ಈ ವರ್ಷ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಾರ್ಚ್​ 7 ರಂದು 39ನೇ ವರ್ಷದ ಬರ್ತ್​ಡೇ ಸಂಭ್ರಮದಲ್ಲಿದ್ದ 'ಮಿಸಸ್​ ರಾಮಾಚಾರಿ' ಇದೀಗ ಜನ್ಮದಿನದಂದು ಕಳೆದ ಕ್ಷಣಗಳ ಕುರಿತಾದ ಫೋಟೋಗಳನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಅವರು ಬರ್ತ್‌ಡೇ ಆಚರಿಸಿದ್ದೆಲ್ಲಿ ಎಂಬುದನ್ನು ಬಹಿರಂಗಪಡಿಸಿಲ್ಲ.

ಬಿಳಿ ಬಣ್ಣದ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡ ರಾಧಿಕಾ ಪಂಡಿತ್, ಪತಿ ಯಶ್ ಹಾಗೂ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಕೇಕ್ ಕಟ್ ಮಾಡಿದ್ದಾರೆ. ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ಐರಾ ಕೇಕ್​ ಕಟ್​ ಮಾಡಲು ಸಹಾಯ ಮಾಡುವುದನ್ನು ಫೋಟೋದಲ್ಲಿ ನೋಡಬಹುದು. ಹಾಗೆಯೇ ರಾಧಿಕಾ ಪಂಡಿತ್ ಅವರ ತಾಯಿ ಮತ್ತು ತಂದೆ ಕೂಡ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಎಲ್ಲರೂ ಬರ್ತ್​ಡೇ ಆಚರಣೆಯ ಖುಷಿಯಲ್ಲಿರುವುದು ಚಿತ್ರದಲ್ಲಿದೆ.

radhika pandit
ಪತಿ ಯಶ್ ಜೊತೆ ರಾಧಿಕಾ ಪಂಡಿತ್

ಇದನ್ನೂ ಓದಿ: ಕೆಜಿಎಫ್ ಚಾಪ್ಟರ್​-2 ಗೆ ನೀವೆಲ್ಲರೂ ಪಿಲ್ಲರ್​ಗಳು: ತಾರಾಬಳಗಕ್ಕೆ ಅಭಿನಂದಿಸಿದ ರಾಧಿಕಾ ಪಂಡಿತ್​

ರಾಧಿಕಾ ಹಂಚಿಕೊಂಡ ಫೋಟೋಗಳಲ್ಲಿ ಮೊದಲು ಪತಿ ಮತ್ತು ಮಕ್ಕಳೊಂದಿಗೆ ಕೇಕ್​ ಕತ್ತರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ಮುದ್ದಿನ ಮಡದಿಯ ಜೊತೆ ರಾಕಿ ಬಾಯ್​ ಯಶ್​ ಸಂತಸದಿಂದ ಕುಳಿತು ಕೇಕ್ ಸವಿಯುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಅಪ್ಪ, ಅಮ್ಮನ ಜೊತೆ ಇದ್ದಾರೆ. ಇನ್ನು ಫೋಟೋಗಳನ್ನು ಶೇರ್​ ಮಾಡಿ ಕ್ಯಾಪ್ಶನ್ ಕೊಟ್ಟ ರಾಧಿಕಾ ಪಂಡಿತ್, ಚಳಿ, ಕೇಕ್ ಮತ್ತು ಮುದ್ದಾಟ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಜನ್ಮದಿನವನ್ನು ಅದ್ಭುತವಾಗಿ ಕಳೆದಿದ್ದಕ್ಕೆ ಹಾಗೂ ಶುಭ ಕೋರಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

radhika pandit
ಫ್ಯಾಮಿಲಿ ಜೊತೆ ರಾಧಿಕಾ ಪಂಡಿತ್

ಇದನ್ನೂ ಓದಿ : ಹ್ಯಾಪಿ ಹುಟ್ದಬ್ಬ 'ಮಿಸಸ್​ ರಾಮಾಚಾರಿ'! ದೂರದೂರಿನಲ್ಲಿ ಸೆಲೆಬ್ರೇಷನ್​, ಫ್ಯಾನ್ಸ್​ಗೆ ನಿರಾಶೆ

ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಇನ್ಸ್​ಸ್ಟಾಗ್ರಾಮ್​ನಲ್ಲಿ 2.8 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಬರ್ತ್​ಡೇ ದಿನ ಹಂಚಿಕೊಂಡ ಫೋಟೋಗಳಿಗೆ 3,88,106 ಲೈಕ್ಸ್ ಬಂದಿವೆ. ಇದರ ಜೊತೆಗೆ ಅಭಿಮಾನಿಗಳು ಸಹ ಮತ್ತೊಮ್ಮೆ ಬರ್ತ್​ಡೇ ವಿಶ್ ತಿಳಿಸಿದ್ದಾರೆ.

ಇದನ್ನೂ ಓದಿ: ದುಬೈನಲ್ಲಿ ಯಶ್​-ರಾಧಿಕಾ ಮಿಂಚಿಂಗ್​.. ಸಿಂಹಕ್ಕೆ ಮಾಂಸ ತಿನ್ನಿಸಿದ ರಾಕಿಭಾಯ್​

ಸುಂದರ ದಾಂಪತ್ಯ ಜೀವನ: 'ಮೊಗ್ಗಿನ ಮನಸು' ಸಿನಿಮಾದ ಮೂಲಕ ಜೊತೆ ಜೊತೆಯಾಗಿ ಬೆಳ್ಳಿ ತೆರೆ ಪ್ರವೇಶಿಸಿದ ಯಶ್​ ಮತ್ತು ರಾಧಿಕಾ ಕನ್ನಡ ಚಿತ್ರರಂಗಕ್ಕೆ ಅನೇಕ ಬ್ಲಾಕ್‌ ಬಸ್ಟರ್‌​ ಸಿನಿಮಾಗಳನ್ನು ನೀಡಿದ್ದಾರೆ. ಈ ಮೂಲಕ ಚಿತ್ರಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 'ಮಿಸ್ಟರ್​ ಅಂಡ್​ ಮಿಸಸ್​ ರಾಮಾಚಾರಿ' ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುವ ಮೂಲಕ ಇಬ್ಬರು ತಮ್ಮ ಮೇಲಿನ ಗಾಸಿಪ್​ಗಳಿಗೆ ವಿದಾಯ ಹೇಳಿದರು. ಬಳಿಕ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಡಿಸೆಂಬರ್​ 9, 2016 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ತಾರಾ ದಂಪತಿಗೆ ಐರಾ ಮತ್ತು ಯಥರ್ವ ಎಂಬ ಇಬ್ಬರು ಮುದ್ದು ಮಕ್ಕಳಿದ್ದಾರೆ.

ಇದನ್ನೂ ಓದಿ : Viral Video: ತಮ್ಮನಿಗೆ ತಿಂಡಿ ತಿನ್ನಿಸಲು ಮುಂದಾದ ಐರಾ ಯಶ್​: ಆಮೇಲೇನಾಯ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.