ETV Bharat / entertainment

ಬಿಗ್​ ಬಾಸ್​ ಮನೆಯಲ್ಲಿ ತುಕಾಲಿ ಸಂತೋಷ್​ ಮಾಡಿದ್ರು ಕಠೋರ ಶಪಥ; ಏನದು? - ಈಟಿವಿ ಭಾರತ ಕನ್ನಡ

Bigg Boss Season 10: ಬಿಗ್​ ಬಾಸ್​ ಮನೆಯಲ್ಲಿ ತುಕಾಲಿ ಸಂತೋಷ್​ ಮಾಡಿದ ಕಠೋರ ತಪಸ್ಸು ಏನು ಗೊತ್ತಾ?

Bigg Boss Season 10
ಬಿಗ್​ ಬಾಸ್​ ಮನೆಯಲ್ಲಿ ತುಕಾಲಿ ಸಂತೋಷ್​ ಮಾಡಿದ್ರು ಕಠೋರ ಶಪಥ; ಏನದು?
author img

By ETV Bharat Karnataka Team

Published : Oct 17, 2023, 9:22 PM IST

ಕಿಚ್ಚ ಸುದೀಪ್​ ನಡೆಸಿಕೊಡುವ ಬಿಗ್​ ಬಾಸ್​ ಶೋ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಮನರಂಜನೆಯನ್ನು ಹೆಚ್ಚಿಸುತ್ತಿದೆ. ತುಕಾಲಿ ಸಂತೋಷ್​ ಅವರ ಕಾಮಿಡಿ ಮಾಡೋ ಶೈಲಿಯೇ ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಮೊನ್ನೆಯಷ್ಟೇ ಅವರು, 'ದೊಡ್ಮನೆಯೊಳಗಿನ ಹೆಣ್ಣುಮಕ್ಕಳಿಗೆ ಅಣ್ಣ ಆಗುವ ಬದಲಿಗೆ ವಾರಪೂರ್ತಿ ಪಾತ್ರೆ ತೊಳಿತೀನಿ' ಎಂದು ತಮಾಷೆಯಾಗಿ ಹೇಳಿದ್ದರು. ಅವರ ಮಾತನ್ನು ಸುದೀಪ್ ನಿಜವಾಗಿಸಿಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ.

ನಂತರ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು? ಪಾತ್ರೆಗಳನ್ನು ಅವರೊಬ್ಬರೇ ತೊಳೆದ್ರಾ? ಅಥವಾ ಸೋತುಹೋದ್ರಾ? ಈ ಎಲ್ಲಾ ಅನುಮಾನಗಳಿಗೆ ಉತ್ತರ ಬಿಗ್‌ಬಾಸ್‌ ಕನ್ನಡವನ್ನು ಉಚಿತವಾಗಿ ನೇರಪ್ರಸಾರ ಮಾಡುತ್ತಿರುವ ಜಿಯೋ ಸಿನಿಮಾದ ಅನ್​ಸೀನ್​ ಕಥೆಗಳು ಸೆಗ್ಮೆಂಟ್‌ನಲ್ಲಿ ಇವೆ.

ಮನೆಯೊಳಗಿದ್ದಾಗ ತುಕಾಲಿ ಸಂತೋಷ್‌ಗೆ ಎದುರಾದ ಈ ಪರಿಸ್ಥಿತಿಯ ಬಗ್ಗೆ ನಮ್ರತಾ, ಸ್ನೇಹಿತ್ ಅವರು ತುಕಾಲಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಆಗ ಹೆಣ್ಣುಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಅಣ್ಣನಾಗುವ ಮಾತು ಬಂದಿದೆ. ಅದಕ್ಕೆ ಸಂತೋಷ್‌ ರೊಚ್ಚಿಗೆದ್ದು ನೇರವಾಗಿ ಬಿಗ್‌ ಬಾಸ್‌ಗೆ ಸವಾಲುಹಾಕಿದ್ದಾರೆ.

ಮೊದ ಮೊದಲು ಪಾತ್ರೆಗಳ ರಾಶಿ ನೋಡಿದಾಗ, 'ಅಯ್ಯೋ..! ಈ ಹುಡುಗಿಯರ ಸಹವಾಸವೂ ಬೇಡ. ಈ ಪಾತ್ರೆ ತೊಳೆಯುವುದೂ ಬೇಡ’ ಅನ್ನಿಸಿಬಿಟ್ಟಿತ್ತಂತೆ. ಆದರೆ ಎರಡು ಮೂರು ಸಲ ತೊಳೆದು ರೂಢಿ ಆದ ಮೇಲೆ ಅವರಿಗೆ ಮತ್ತೆ ಛಲ ಉಕ್ಕಿದೆ. ನಾನು ಎಂದಿಗೂ ಈ ಮನೆಯೊಳಗಿನ ಹೆಣ್ಮಕ್ಳಿಗೆ ಅಣ್ಣನಾಗಲಾರೆ ಎಂದು ಅವರು ನಿರ್ಧರಿಸಿಬಿಟ್ಟಿದ್ದಾರೆ. ಸ್ವಿಮ್ಮಿಂಗ್ ಫೂಲ್‌ ಬಳಿ ನಿಂತಿದ್ದಾಗ ನಮ್ರತಾ, 'ಅಣ್ಣನಾಗಬೇಕಾಗತ್ತೆ ಎಂಬ ಕಾರಣಕ್ಕೆ ಇರೋ ಬರೋ ಪಾತ್ರೆಯೆಲ್ಲ ತೊಳಿತಿದ್ದೀರಲ್ಲಾ ನೀವು' ಎಂದು ತುಕಾಲಿ ಅವರ ಕಾಲೆಳೆದಿದ್ದಾರೆ. ಸ್ನೇಹಿತ್, 'ರಾಖಿ ತರಿಸಿಕೊಡ್ತೀನಿ ಬನ್ನಿ' ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ: ವಾರದ ಕಥೆ ಕಿಚ್ಚನ ಜೊತೆ: ''ದೇವರೇ ಕ್ಷಮೆ ಕೊಡಬೇಕಾದ್ರೆ ನಾವ್ಯಾರು, ನೀವ್ಯಾರು'' - ಹೇಗಿತ್ತು ಸುದೀಪ್​​ ಕ್ಲಾಸ್?

ನೇರವಾಗಿ ಕ್ಯಾಮರಾ ಎದುರಿಗೆ ಬಂದು ನಿಂತ ತುಕಾಲಿ ಸಂತೋಷ್​ ಅವರು, 'ನಾನ್ಯಾಕೆ ರಾಖಿ ಕಟ್ಟಿಸ್ಕೋಬೇಕು? ಇನ್ನೂ ಬೇಕಾದ್ರೆ ಬಿಗ್‌ ಬಾಸ್‌ ಮನೆಯೊಳಗೆ ಇರೋವರೆಗೂ ಪಾತ್ರೆ ತೊಳಿತೀನಿ. ಆದ್ರೆ ರಾಖಿ ಮಾತ್ರ ಕಟ್ಟಿಸಿಕೊಳ್ಳಲ್ಲ. ನಾನು ಎಲ್ಲಿಯವರೆಗೂ ಬಿಗ್‌ಬಾಸ್‌ ಮನೆಯೊಳಗೆ ಇರ್ತಿನೋ ಅಲ್ಲಿಯವರೆಗೂ ಬ್ಯಾಚುಲರ್‍ರೇ' ಎಂದು ಶಪಥ ಮಾಡಿದ್ದಾರೆ.

ಅವರ ಶಪಥವನ್ನು ಕೇಳಿದ ಸ್ನೇಹಿತ್‌, ತುಕಾಲಿ ಅವರ ಹೆಂಡತಿಗೆ ಅಲ್ಲಿಂದಲೇ 'ಚಿನ್ನಿ ಅವರೇ, ಈ ಎಲ್ಲ ಮಾತು ಕೇಳಿಸಿಕೊಂಡ ಮೇಲೆ ನೀವೇ ಏನಾದ್ರೂ ಮಾಡಬೇಕು. ಮೇನ್‌ಡೋರ್​ನಿಂದ ಬಂದು ಏನಾದ್ರೂ ಮಾಡಿ' ಎಂದು ವಿನಂತಿಸಿಕೊಂಡಿದ್ದಾರೆ. ಮುಂದೆನಾಯ್ತು ಎಂಬ ಕುತೂಹಲ ನಿಮಗಿದ್ದರೆ, ಬಿಗ್‌ ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinema ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್​ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ: BBK 10: ತುಕಾಲಿ ಸಂತೋಷ್ ಹುಟ್ಟಿದ್ದೇ ಪವಾಡವಂತೆ! ಇಂಟ್ರಸ್ಟಿಂಗ್​ ಕಥೆ ನೀವೂ ಕೇಳಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.