ETV Bharat / entertainment

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಬಿಗ್ ಬಾಸ್: ಅಪ್ಪನ ಧ್ವನಿ ಕೇಳಿ ಅತ್ತ ಪ್ರತಾಪ್​ - ಈಟಿವಿ ಭಾರತ ಕನ್ನಡ

Bigg Boss: ಡ್ರೋನ್​ ಪ್ರತಾಪ್​ಗೆ ಬಿಗ್​ ಬಾಸ್​ ಕಡೆಯಿಂದ ಭಾವುಕ ಸರ್​ಪ್ರೈಸ್​ ಸಿಕ್ಕಿದೆ. ಅದೇನು ಗೊತ್ತಾ?

Kannada Bigg boss season 10 promo
ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಬಿಗ್ ಬಾಸ್: ಅಪ್ಪನ ಧ್ವನಿ ಕೇಳಿ ಅತ್ತ ಪ್ರತಾಪ್​
author img

By ETV Bharat Karnataka Team

Published : Nov 18, 2023, 9:26 PM IST

ಕನ್ನಡದ 'ಬಿಗ್​ ಬಾಸ್​' ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿವಿಧ ಸನ್ನಿವೇಶಗಳಲ್ಲಿ ಸ್ಪರ್ಧಿಗಳ ನಾನಾ ಭಾವನೆಗಳು ವ್ಯಕ್ತವಾಗುತ್ತವೆ. ಅಚ್ಚುಕಟ್ಟಾಗಿ ಆಟ ಆಡುವವರು, ಪ್ರೇಕ್ಷಕರ ಗಮನ ಸೆಳೆಯುವವರು ಕೊನೆ ಹಂತದವರೆಗೂ ತಲುಪುತ್ತಾರೆ. ಬಿಗ್​ ಬಾಸ್​ ಕೊಡುವ ಟಾಸ್ಕ್ ಸಹ ಸವಾಲಿನದ್ದೇ ಆಗಿರುತ್ತದೆ. ಈ ಸವಾಲುಗಳನ್ನು ಸ್ಪರ್ಧಿಗಳು ಹೇಗೆ ಸ್ವಿಕರಿಸುತ್ತಾರೆಂಬುದೇ 'ಅವರ ಪರೀಕ್ಷೆ'.

ವಾರ ಕಳೆದಂತೆ ಮನೆ ಮಂದಿಯ ಸ್ವಭಾವ, ವರ್ತನೆಗಳು ಬದಲಾಗುತ್ತಿವೆ. ಅದರಲ್ಲಿಯೂ ಡ್ರೋನ್​ ಪ್ರತಾಪ್​ ಮೊದಲಿದ್ದ ರೀತಿಗೂ ಈಗಿರುವ ರೀತಿಗೂ ಅಜಗಜಾಂತರವಿದೆ. ಪ್ರಾರಂಭದಲ್ಲಿ ಒಬ್ಬರೇ ಇರುತ್ತಿದ್ದಅವರು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಅದರಲ್ಲಿಯೂ ಡ್ರೋನ್​ ವಿಚಾರವಾಗಿ ಕೆಲವು ಮಾತುಗಳನ್ನು ಇತರ ಸ್ಪರ್ಧಿಗಳು ಆಡಿದ್ದರು. ಅದನ್ನು ಎದುರಿಸಿ ಪ್ರತಾಪ್​ ತಮ್ಮನ್ನು ತಾವು ನಿರೂಪಿಸಿಕೊಂಡ ರೀತಿ ನಿಜಕ್ಕೂ ಪ್ರಶಂಸನೀಯ.

ಮೊದಲಿನಿಂದಲೂ ಪ್ರತಾಪ್, ತಮ್ಮ ಕುಟುಂಬದವರ ಬಗ್ಗೆ ಮಾತನಾಡಿದ್ದು ಕಡಿಮೆಯೇ. ಆದರೆ ಅವರು ಎಷ್ಟೋ ವರ್ಷಗಳಿಂದ ಕುಟುಂಬದಿಂದ ದೂರವಿದ್ದಾರೆ ಎಂಬುದನ್ನು ಹೇಳಿಕೊಂಡಿದ್ದರು. ಅಲ್ಲದೇ ತಂದೆ ತಾಯಿ ಮತ್ತು ತಂಗಿಯ ಜೊತೆಗೆ ಮಾತಾಡಬೇಕು ಅನಿಸುತ್ತಿದೆ ಎಂದೂ ಹೇಳಿದ್ದರು. ಕಳೆದ ವಾರ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ, ಅದರಲ್ಲಿ ಪ್ರತಾಪ್ ವಿಫಲರಾದರು. ಹಾಗಾಗಿ ಅವರು ನಿರಾಶೆಗೊಂಡಿದ್ದರು.

ಈಗ ವೀಕೆಂಡ್​ ವಿತ್​​ ಕಿಚ್ಚ ಸುದೀಪ್​​ನ ಪಂಚಾಯಿತಿಯಲ್ಲಿ ಪ್ರತಾಪ್​ಗೆ ಒಂದು ಸರ್​ಪ್ರೈಸ್​ ಕೊಟ್ಟಿದ್ದಾರೆ. ಆ ಸರ್​ಪ್ರೈಸ್​ ಅಷ್ಟೇ ಭಾವುಕ ಕೂಡ ಆಗಿದೆ. ಇಂದು ಕಲರ್ಸ್​ ಕನ್ನಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಇದನ್ನು ಕಾಣಬಹುದು. 'ನಿಮ್ಮ ಮನೆಯಿಂದ ಬರುತ್ತಿದ್ದ ಪತ್ರದಲ್ಲಿ ನೀವು ಏನು ನಿರೀಕ್ಷಿಸಿದ್ದೀರಿ?' ಎಂದು ಪ್ರತಾಪ್ ಅವರನ್ನು ಕೇಳಿದ್ದಾರೆ. ಅದನ್ನು ಹೇಳುವ ಮೊದಲೇ ಮನೆಯೊಳಗೆ ಪ್ರತಾಪ್ ತಂದೆಯ ಧ್ವನಿ ಮೊಳಗಿದೆ. ಫೋನ್‌ನಲ್ಲಿ ತಂದೆಯ ಧ್ವನಿಯನ್ನು ಕೇಳಿದ ಪ್ರತಾಪ್, 'ಅಪ್ಪಾ ನನ್ನ ಕ್ಷಮಿಸಿಬಿಡಿ. ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೀನಿ' ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇಂದಿನ ಬಿಗ್​ ಬಾಸ್​ ವಾರದ ಕತೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಲ್ಲದೇ, ಭಾನುವಾರದ ಬದಲಿಗೆ ಇಂದೇ ಎಲಿಮಿನೇಶನ್​ ಕೂಡ ನಡೆಯಲಿದೆ. ಮನೆಯಿಂದ ಹೊರ ಹೋಗೋದ್ಯಾರು? ಉಳಿಯೋರ್ಯಾರು? ಎಂಬುದನ್ನು ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ ನೇರ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ಕನ್ನಡವನ್ನು ವೀಕ್ಷಿಸಬಹುದಾಗಿದೆ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರ ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ವಾರದ ಕತೆ ಕಿಚ್ಚನ ಜೊತೆ: ಪಂಚಾಯಿತಿಯ ಮೊದಲ ದಿನವೇ ಎಲಿಮಿನೇಶನ್ ಹೊಗೆ​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.