ನಟ ಸುದೀಪ್ ನಿರೂಪಣೆಯ 'ಬಿಗ್ ಬಾಸ್ ಸೀಸನ್ 10' ಬಹುತೇಕ ಫಿನಾಲೆ ತಲುಪಿದೆ. ಇಂದು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ದೊಡ್ಮನೆ ಒಳಗೆ ಆಗಮಿಸಿ, ಸ್ಪರ್ಧಿಗಳ ಭವಿಷ್ಯ ನುಡಿದಿದ್ದಾರೆ. ಪ್ರತಾಪ್ ಅವರ ಕೌಟುಂಬಿಕ ಭವಿಷ್ಯ ಕಠಿಣವಾಗಿದ್ದು, ಪ್ರತಾಪ್ ಕಣ್ಣೀರಿಟ್ಟಿದ್ದಾರೆ. 'ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಭವಿಷ್ಯ ಕೇಳಿ ದಂಗಾದ್ರಾ ಸ್ಪರ್ಧಿಗಳು?' ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರು ಕುತೂಹಲರಾಗಿದ್ದಾರೆ.
-
ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಭವಿಷ್ಯ ಕೇಳಿ ದಂಗಾದ್ರಾ ಸ್ಪರ್ಧಿಗಳು?
— Colors Kannada (@ColorsKannada) January 2, 2024 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/W0knEi6mu9
">ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಭವಿಷ್ಯ ಕೇಳಿ ದಂಗಾದ್ರಾ ಸ್ಪರ್ಧಿಗಳು?
— Colors Kannada (@ColorsKannada) January 2, 2024
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/W0knEi6mu9ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಭವಿಷ್ಯ ಕೇಳಿ ದಂಗಾದ್ರಾ ಸ್ಪರ್ಧಿಗಳು?
— Colors Kannada (@ColorsKannada) January 2, 2024
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/W0knEi6mu9
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ದೇವರ ಪೂಜೆ ಮಾಡಿ, ಸ್ಪರ್ಧಿಗಳಿಗೆ ಆಶೀರ್ವಾದ ನೀಡಿದ್ದಾರೆ. ಜೊತೆಗೆ, ಮನೆಮಂದಿಯ ಭವಿಷ್ಯ ಸಹ ನುಡಿದಿದ್ದಾರೆ. ವರ್ತೂರು ಸಂತೋಷ್ ಬಳಿ ನೀವು ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದೀರ. ಅಂದಿನಿಂದ ಕಷ್ಟಗಳು ಎದುರಾಗಿವೆ ಎಂದು ಗುರೂಜಿ ತಿಳಿಸಿದಾಗ ವರ್ತೂರ್ ಕೂಡ ಹೌದು ಎಂದು ಒಪ್ಪಿಕೊಂಡಿದ್ದಾರೆ. ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗುತ್ತದೆ ಎಂದು ನಮ್ರತಾ ಅವರಲ್ಲಿ ತಿಳಿಸಿದ್ದಾರೆ.
-
ಕಾರ್ತಿಕ್-ತನಿಷಾ ನಡುವೆ ಬಿರುಕು ಮೂಡಬಹುದಾ?
— Colors Kannada (@ColorsKannada) January 2, 2024 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/C6QtIATkgT
">ಕಾರ್ತಿಕ್-ತನಿಷಾ ನಡುವೆ ಬಿರುಕು ಮೂಡಬಹುದಾ?
— Colors Kannada (@ColorsKannada) January 2, 2024
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/C6QtIATkgTಕಾರ್ತಿಕ್-ತನಿಷಾ ನಡುವೆ ಬಿರುಕು ಮೂಡಬಹುದಾ?
— Colors Kannada (@ColorsKannada) January 2, 2024
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/C6QtIATkgT
ಬಳಿಕ ಪ್ರತಾಪ್ ಭವಿಷ್ಯ ನುಡಿದಿದ್ದು, ಪ್ರೇಕ್ಷಕರು ಮರುಗಿದ್ದಾರೆ. ಈ ವಿಚಾರ ಹೇಳಲು ನನಗೆ ಸಂಕಟವಾಗುತ್ತಿದೆ. ನೀನು ಕುಟುಂಬದಿಂದ ದೂರಾನೇ ಇರಬೇಕಾಗುತ್ತೆ. ಕುಟುಂಬದ ಜೀವನ ಯಾಕೋ ಅಷ್ಟು ಸರಿ ಇಲ್ಲ. ದೂರ ಇದ್ದು ಧೂಪವಾಗ್ತಿಯೋ, ಹತ್ತಿರ ಇದ್ದು ಹೇಸಿಗೆಯಾಗ್ತಿಯೋ ನಿನಗೆ ಬಿಟ್ಟದ್ದು ಎಂದು ಗುರುಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಚೊಚ್ಚಲ ಚಿತ್ರದಲ್ಲೇ ಮಾಲಾಶ್ರೀ ಪುತ್ರಿಗೆ ಅದ್ಭುತ ಯಶಸ್ಸು: ವಿದೇಶದಲ್ಲಿ ಅಮ್ಮ-ಮಗಳ ಡ್ಯಾನ್ಸ್
'ಕಾರ್ತಿಕ್-ತನಿಷಾ ನಡುವೆ ಬಿರುಕು ಮೂಡಬಹುದಾ?' ಎಂಬ ಶೀರ್ಷಿಕೆಯಡಿ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ. ಸ್ಪರ್ಧಿಗಳು ಟಾಸ್ಕ್ ಒಂದನ್ನು ಆಡಿದ್ದಾರೆ. ಬಳಿಕ, ಮನೆಯ ಸದಸ್ಯರ ಪೈಕಿ ಈ ಟಾಸ್ಕ್ ಆಡಲು ಅನರ್ಹರಾದವರನ್ನು ಸೂಚಿಸಿ ಎಂದು ಬಿಗ್ ಬಾಸ್ ತನಿಷಾ ಬಳಿ ಕೇಳಿದ್ದಾರೆ. ಅದಕ್ಕೆ ತುಕಾಲಿ ಸಂತೋಷ್ ಮತ್ತು ಕಾರ್ತಿಕ್ ಹೆಸರನ್ನು ಸೂಚಿಸಿದ್ದಾರೆ. ಕಾರ್ತಿಕ್ ಅವರಲ್ಲಿ ಸ್ವಲ್ಪ ಆತುರ ಜಾಸ್ತಿ. ನಾನೇ ಮಾಡ್ತೀನಿ, ನಾನೇ ಮಾಡಿದ್ದು ಅನ್ನೋ ಫೀಲಿಂಗ್ ಅವರಲ್ಲಿ ಇರುತ್ತೆ. ಕೆಲವೊಂದ್ ಸರಿ ಅದು ಉಲ್ಟಾ ಹೊಡೆದಿರೋದು ಇದೆ ಎಂದು ತನಿಷಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರ್ತಿಕ್ ಸೇರಿ ನಮ್ರತಾ ಕೂಡ ಅಸಮಧಾನ ಹೊರಹಾಕಿದ್ದಾರೆ. ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ಇನ್ಯಾರಿಗೆ ಭವಿಷ್ಯ ಹೇಳಿದ್ದಾರೆ? ಕಾರ್ತಿಕ್-ತನಿಷಾ ಸಮಸ್ಯೆ ಸರಿಪಡಿಸಿಕೊಳ್ತಾರಾ? ಅನ್ನೋದನ್ನು ತಿಳಿದುಕೊಳ್ಳಲು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸಂಪೂರ್ಣ ಸಂಚಿಕೆ ವೀಕ್ಷಿಸಿ..
ಇದನ್ನೂ ಓದಿ: 'ಲಿಯೋ' ಮೀರಿಸಿದ 'ಸಲಾರ್'; ಜೈಲರ್, ಬಾಹುಬಲಿ ದಾಖಲೆ ಮುರಿಯಲು ಸಜ್ಜು