ETV Bharat / entertainment

ಕಾರ್ತಿಕ್-ಸಂಗೀತಾ ಸ್ನೇಹಕ್ಕೆ ಫುಲ್​ಸ್ಟಾಪ್​​; ವೈರಲ್​ ಆಯ್ತು ಬಿಗ್ ಬಾಸ್​ ಪ್ರೋಮೋ - Kannada Bigg Boss

'ಕಾರ್ತಿಕ್-ಸಂಗೀತಾ ದೋಸ್ತಿ ಮುಗಿದ ಅಧ್ಯಾಯ!' ಎಂಬ ಶೀರ್ಷಿಕೆಯಡಿ ಬಿಗ್​ ಬಾಸ್​ ಪ್ರೋಮೋ ರಿಲೀಸ್ ಮಾಡಿದೆ.

Kannada Bigg Boss
ಕನ್ನಡ ಬಿಗ್​ ಬಾಸ್​
author img

By ETV Bharat Karnataka Team

Published : Jan 14, 2024, 4:37 PM IST

'ಕನ್ನಡ ಬಿಗ್​ ಬಾಸ್​​ ಸೀಸನ್​ 10' ರಿಯಾಲಿಟಿ ಶೋ ಅಂತಿಮ ಹಂತ ತಲುಪಿದೆ. ಫಿನಾಲೆ ಹೊಸ್ತಿಲಿನಲ್ಲಿರುವ ಕಿರುತೆರೆಯ ಜನಪ್ರಿಯ ಕಾರ್ಯಕ್ರಮದಿಂದ ಇಂದು ಮತ್ತೋರ್ವರು ಹೊರನಡೆಯಲಿದ್ದಾರೆ. ವೀಕೆಂಡ್​ ಎಪಿಸೋಡ್​ಗಳಲ್ಲಿ ನಿರೂಪಕ ಸುದೀಪ್​ ಹಲವು ವಿಚಾರವಾಗಿ ಮನೆಮಂದಿಯ ಅಭಿಪ್ರಾಯ ಕೇಳುತ್ತಾರೆ. ಅದರಂತೆ ಕಾರ್ತಿಕ್-ಸಂಗೀತಾ ಈ ಮೊದಲಿನಂತೆ ಉತ್ತಮ ಸ್ನೇಹಿತರಾಗೋಲ್ಲ, ಸ್ನೇಹ ಮುಂದುವರಿಸಲು ಇಚ್ಛಿಸೋದೂ ಇಲ್ಲ ಎಂಬುದು ಇದೀಗ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಂಡುಬಂದಿದೆ.

ವಾರದ ಕಥೆ ಕಿಚ್ಚನ ಜೊತೆ: 'ಬಿಗ್​ ಬಾಸ್​​' ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿರುವ ಕಾರ್ಯಕ್ರಮಗಳಲ್ಲೊಂದು. ವಾರಾಂತ್ಯ ಬಂತೆಂದರೆ ವೀಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಗೆ ಪ್ರತ್ಯೇಕ​ ಅಭಿಮಾನಿ ಬಳಗವಿದೆ. ಕಿಚ್ಚನ ನಿರೂಪಣಾ ಶೈಲಿ ವ್ಯಾಪಕ ಪ್ರಶಂಸೆಗೆ ಒಳಪಟ್ಟಿದೆ. ನಯವಾಗಿಯೇ ಸ್ಪರ್ಧಿಗಳ ಚಳಿ ಬಿಡಿಸುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿರುತ್ತಾರೆ.

ಬಿಗ್​ ಬಾಸ್ ಹೊಸ​ ಪ್ರೋಮೋ: 'ಸೂಪರ್​ ಸಂಡೇ ವಿತ್ ಸುದೀಪ'​ ಎಪಿಸೋಡ್​ನಲ್ಲಿ ಓರ್ವ ಸ್ಪರ್ಧಿ ಮನೆಯಿಂದ ಎಲಿಮಿನೇಟ್​ ಆಗುತ್ತಾರೆ. ಎಲಿಮಿನೇಶನ್​ಗೂ ಮುನ್ನ ಎಸ್​ ಅಥವಾ​ ನೋ ರೌಂಡ್ಸ್ ಕೂಡ ಇರುತ್ತೆ. ಅಲ್ಲದೇ ನಾನಾ ವಿಚಾರವಾಗಿ ಮನೆಮಂದಿಯ ಅಭಿಪ್ರಾಯ ಕೇಳಲಾಗುತ್ತದೆ. ಈ ಸಂದರ್ಭದಲ್ಲಿ ''ಕಾರ್ತಿಕ್-ಸಂಗೀತಾ ಸ್ನೇಹದಲ್ಲಿ ಬಿರುಕು'' ವಿಚಾರ ಸ್ಪಷ್ಟವಾಗಿ ಗೋಚರಿಸಿದೆ. ಕಲರ್ಸ್ ಕನ್ನಡ ಸೋಷಿಯಲ್​​ ಮೀಡಿಯಾಗಳಲ್ಲಿ ''ಕಾರ್ತಿಕ್-ಸಂಗೀತಾ ದೋಸ್ತಿ ಮುಗಿದ ಅಧ್ಯಾಯ!'' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಳಿಸಿದೆ. ಈ ಪ್ರೋಮೋ ನೋಡಿದವರು ಸಂಪೂರ್ಣ ಸಂಚಿಕೆ ವೀಕ್ಷಿಸಲು ಕಾತರರಾಗಿದ್ದಾರೆ.

ಕೊನೆಯವರೆಗೂ ಬೇಕಾಗಿರುವ ಸ್ನೇಹ ಯಾವುದು? ಇಲ್ಲೇ ಬಿಟ್ಟು ಹೋಗೋ ಫ್ರೆಂಡ್​​ಶಿಪ್​ ಯಾವುದು? ಎಂದು ಸುದೀಪ್​​ ಮನೆಯವರಲ್ಲಿ ಪ್ರಶ್ನಿಸಿದ್ದಾರೆ. ಟೇಬಲ್​ ಮೇಲಿದ್ದ ಫೋಟೋ ತೆಗೆದುಕೊಂಡ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಕೊಡಲು ಶುರು ಹಚ್ಚಿಕೊಂಡಿದ್ದಾರೆ. ನಮ್ರತಾ ಸ್ನೇಹ ಮುಂದುವರಿಸಲು ಇಚ್ಛಿಸುತ್ತೇನೆಂದು ವಿನಯ್​ ತಿಳಿಸಿದ್ದಾರೆ. ತನಿಷಾ ಅವರು ಕಾರ್ತಿಕ್​​ ಜೊತೆ ಸ್ನೇಹ ಮುಂದುವರಿಸೋದಿಲ್ಲ ಎಂದು ಹೇಳಿ, ಜೊತೆಗಿದ್ದ ಫೋಟೋ ಹರಿದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಕಾರ್ತಿಕ್ ಮತ್ತು ಸಂಗೀತಾ ಕೂಡ ಸ್ನೇಹದಲ್ಲಿ ಬಿರುಕು ಮೂಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ನೋಡುವ ಬಯಕೆ ವ್ಯಕ್ತಪಡಿಸಿದ ಶಾರುಖ್

ನನಗೆ ನೋವಾಗುತ್ತೆ ಅಂತ ತಿಳಿದಿದ್ದರೂ, ನೋವ್ ಮಾಡ್ತಾರೆ. ಸ್ನೇಹ ಉಳಿಸಿಕೊಳ್ಳಲು ಯಾವುದೇ ಫ್ರೆಂಡ್​ಶಿಪ್​ ಉಳಿದಿಲ್ಲ. ಇಲ್ಲಿಂದ ಹೋದ ಬಳಿಕವೂ ಪ್ಯಾಚ್ ಅಪ್​ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಕಾರ್ತಿಕ್​ ಬಗ್ಗೆ ಸಂಗೀತಾ ತಿಳಿಸಿದ್ದಾರೆ. ಕಾರ್ತಿಕ್​ ಸರದಿ ಬಂದಾಗ, ಒಂದೊಳ್ಳೆ ಫ್ರೆಂಡ್​ಶಿಪ್​​ ಇತ್ತು. ನಾನು ಈ ಸ್ನೇಹವನ್ನು ಮುಂದುವರಿಸುವ ಮನಸ್ಸು ಮಾಡಿದ್ರೂ ಆ ಕಡೆಯಿಂದ ನೋ ಅಂತಾನೇ ಇದೆ ಎಂದು ತಿಳಿಸಿದ್ದಾರೆ. ಕಾರ್ತಿಕ್​-ಸಂಗೀತಾ-ತನಿಷಾ ಬಿಗ್​ ಬಾಸ್​ ಆರಂಭದಿಂದ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ನಡುವಲ್ಲಿ ಸಂಗೀತಾ ಹೊರ ಬಂದಂತಿತ್ತು. ಇದೀಗ ಮೂವರ ನಡುವೆ ಆ ಸ್ನೇಹ ಉಳಿದಿಲ್ಲ ಅನ್ನೋದು ಹಲವರ ಅಭಿಪ್ರಾಯ.

ಇದನ್ನೂ ಓದಿ: ಸಂತು-ಪಂತು ದೂರವಾಗುವ ಸಮಯ: ಕಣ್ಣೀರು ಸುರಿಸಿದ ಬಿಗ್​ ಬಾಸ್​ ಆಪ್ತ ಸ್ನೇಹಿತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.