ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮನಾಲಿಯಲ್ಲಿ ಸುಂದರ ಮನೆಯೊಂದನ್ನ ಖರೀದಿಸಿದ್ದು, ತಮ್ಮ ಹೊಸ ನಿವಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮನೆಯ ದೊಡ್ಡ ಗೋಡೆಯ ಮೇಲೆ ಹಲವು ರೀತಿಯ ಪೇಂಟಿಂಗ್‌ಗಳನ್ನು ಅಳವಡಿಸಲಾಗಿದೆ. ಹಿಮಾಚಲದ ವಿವಿಧ ಸಂಪ್ರದಾಯಗಳನ್ನು ಗೋಡೆ ಮೇಲೆ ತೋರಿಸಲಾಗಿದೆ.
ಮಹಿಳಾ ಸೂಪರ್ ಹೀರೋ ಆಗಿ ಅಭಿನಯಿಸಿ ಬಿಡುಗಡೆಯಾದ 'ಧಾಕಡ್' ಸಿನಿಮಾ ಬಿಡುಗಡೆಗೂ ಮುನ್ನ ಸಖತ್ ಸೌಂಡ್ ಮಾಡಿತ್ತಾದರೂ, ದುರಾದೃಷ್ಟವಶಾತ್ ಬಾಕ್ಸ್ ಆಫೀಸ್ನಲ್ಲಿ ಗಳಿಕೆಯಿಲ್ಲದೇ ಸಂಪೂರ್ಣ ನೆಲಕಚ್ಚಿದೆ. 'ಧಾಕಡ್’ ಚಿತ್ರದ ಸೋಲಿನ ನಂತರ ಕಂಗನಾ ಮನೆ ಖರೀದಿಸಿ, ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಬಹಳಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಈ ಕುರಿತು ಮಾಹಿತಿ ನೀಡಿರುವ ಕಂಗನಾ, 'ನಾನು ಹೊಸ ಮನೆಯನ್ನ ನಿರ್ಮಿಸಿದ್ದೇನೆ, ಇದು ಮನಾಲಿಯಲ್ಲಿರುವ ನನ್ನ ಪ್ರಸ್ತುತ ನಿವಾಸ. ಇದನ್ನು ನದಿಯ ಕಲ್ಲು, ಸ್ಥಳೀಯ ಸ್ಲೇಟ್ ಮತ್ತು ಮರದಿಂದ ಮಾಡಿದ ಪಹಾರಿ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಾನು ಹಿಮಾಚಲಿ ಚಿತ್ರಕಲೆ, ನೇಯ್ಗೆ, ಕಾರ್ಪೆಟ್, ಕಸೂತಿ ವಸ್ತುಗಳನ್ನು ಸೇರಿಸಿದ್ದೇನೆ' ಎಂದು ಕಂಗನಾ ಹೇಳಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ತೋಪೆದ್ದ 'ಧಾಕಡ್': ನಿರ್ಮಾಪಕ, ನಟಿ ಕಂಗನಾ ಕಂಗಾಲು