ETV Bharat / entertainment

Har Ghar Tiranga.. ಬಾಲಿವುಡ್ ಸೂಪರ್‌ಸ್ಟಾರ್‌ಗಳಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ - ಹರ್ ಘರ್ ತಿರಂಗ

ಹರ್ ಘರ್ ತಿರಂಗ ಅಭಿಯಾನಕ್ಕೆ ಬಾಲಿವುಡ್ ಸೂಪರ್‌ಸ್ಟಾರ್‌ಗಳು ಸಾಥ್​​ ನೀಡಿದ್ದಾರೆ.

Har Ghar Tiranga Campaign in Bollywood
ಬಾಲಿವುಡ್ ಸೂಪರ್‌ಸ್ಟಾರ್‌ಗಳಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ
author img

By

Published : Aug 16, 2022, 10:03 AM IST

ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಹರ್ ಘರ್ ತಿರಂಗ' ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 13 ರಿಂದ 15 ರೊಳಗೆ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಅಳವಡಿಸುವಂತೆ ಮನವಿ ಮಾಡಿತ್ತು. ಇದಕ್ಕೆ ಬಾಲಿವುಡ್ ಸೂಪರ್‌ಸ್ಟಾರ್‌ಗಳು ಕೂಡ ಕೈ ಜೋಡಿಸಿದ್ದಾರೆ.

ಬಾಲಿವುಡ್ ಸೂಪರ್‌ಸ್ಟಾರ್‌ಗಳಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ

ನಟ ಅಕ್ಷಯ್ ಕುಮಾರ್ ಎಷ್ಟು ದೇಶಭಕ್ತರು ಎಂಬುದು ಅವರ ಅಭಿಮಾನಿಗಳಿಗೆ ತಿಳಿದಿದೆ. ಇವರು ಮಿಲಿಟರಿ ಹಿನ್ನೆಲೆಗೆ ಸೇರಿದವರು. ಅಕ್ಷಯ್ ತನ್ನ ಮನೆಯಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ್ದಾರೆ. ಅಲ್ಲದೇ ಟ್ವಿಟರ್‌ನ ಡಿಪಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಿದ್ದಾರೆ.

ಅಜಯ್ ದೇವಗನ್ ಕೇವಲ ದೇಶಭಕ್ತಿಯ ಚಿತ್ರಗಳನ್ನು ಮಾಡುವುದಲ್ಲದೇೆ, ದೇಶವನ್ನು ಪ್ರೀತಿಸುತ್ತಾರೆ. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನಕ್ಕೆ ಬೆಂಬಲ ನೀಡುವ ಮೂಲಕ ಅಜಯ್ ದೇವಗನ್ ತಮ್ಮ ಡಿಪಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಿದ್ದಾರೆ.

Har Ghar Tiranga Campaign

ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ ಕೂಡ ದೇಶದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ಧಾರೆ. ಅವರು ತಮ್ಮ ಮನೆಯಲ್ಲಿ ತಮ್ಮ ಮಗ ಅಬ್ರಾಮ್ ಅವರ ಕೈಯಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ್ದಾರೆ. ಅಲ್ಲದೇ ಶಾರುಖ್ ಅವರ ಇಡೀ ಕುಟುಂಬ ದೇಶಕ್ಕೆ ಸ್ವಾತಂತ್ರ್ಯ ದಿನದಂದು ಶುಭಾಶಯ ಕೋರಿದೆ.

Har Ghar Tiranga Campaign
ಮನೆಯಲ್ಲಿ ಧ್ವಜವನ್ನು ಹಾರಿಸಿದ ಶಾರುಖ್ ಖಾನ್

ಕಾರ್ತಿಕ್ ಆರ್ಯನ್ ಭಾರತೀಯ ಸೈನಿಕರೊಂದಿಗೆ ದಿನ ಕಳೆದು, ಅವರೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅಷ್ಟೇ ಅಲ್ಲ ಕಾರ್ತಿಕ್ ಮನೆಯಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾರೆ. ಈ ಪಟ್ಟಿಯಲ್ಲಿ ಅಮೀರ್ ಖಾನ್ ಹೆಸರು ಇದೆ. ಅಮೀರ್ ತಮ್ಮ ಮನೆಯ ಬಾಲ್ಕನಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಿದ್ದಾರೆ. ಹರ್ ಘರ್ ತಿರಂಗ ಅಭಿಯಾನಕ್ಕೆ ಅಮೀರ್ ಕೂಡ ಸಂಪೂರ್ಣ ಬೆಂಬಲ ನೀಡಿದ್ದಾರೆ.

Har Ghar Tiranga Campaign
ಭಾರತೀಯ ಸೈನಿಕರೊಂದಿಗೆ ದಿನ ಕಳೆದ ಕಾರ್ತಿಕ್ ಆರ್ಯನ್

ಇದನ್ನೂ ಓದಿ: ಚಂದನವನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ಚಂದನವನದ ಸ್ಪೆಷಲ್ ಫೋಟೋಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.