ಕೋಝಿಕ್ಕೋಡ್: ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರದಲ್ಲಿನ 'ವರಾಹರೂಪ' ಹಾಡಿನ ಪ್ರಸಾರಕ್ಕೆ ಕೋಝಿಕ್ಕೋಡ್ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮಲಯಾಳಂನ ಹೆಸರಾಂತ ರಾಕ್ ಬ್ಯಾಂಡ್ 'ತೈಕುಡಂ ಬ್ರಿಡ್ಜ್' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅನುಮತಿಯಿಲ್ಲದೆ ಹಾಡನ್ನು ಪ್ರದರ್ಶಿಸದಂತೆ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಿಗೆ ಸೂಚಿಸಿದೆ.
ಹಾಡನ್ನು ಪ್ರಸಾರ ಮಾಡದಂತೆ ಅಮೆಜಾನ್ ಪ್ರೈಮ್, ಯುಟ್ಯೂಬ್ ಮತ್ತು ಲಿಂಕ್ ಮ್ಯೂಸಿಕ್ ಕಂಪನಿಗಳಿಗೆ ಸಹ ನ್ಯಾಯಾಲಯ ನಿರ್ದೇಶಿಸಿದೆ.
ತಮ್ಮ ಬ್ಯಾಂಡ್ನ ಒರಿಜಿನಲ್ ಮ್ಯೂಸಿಕ್ ಅನ್ನು ಚಲನಚಿತ್ರ ತಯಾರಕರು ನಕಲು ಮಾಡಿದ್ದಾರೆ ಎಂದು ಆರೋಪಿಸಿ, ಹಾಡಿಗೆ ತಡೆ ಕೋರಿ ತೈಕುಡಮ್ ಬ್ರಿಡ್ಜ್ ರಾಕ್ ಬ್ಯಾಂಡ್ನವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 'ವರಾಹರೂಪ' ಹಾಡು 2015 ರಲ್ಲಿ ಬಿಡುಗಡೆ ಮಾಡಿದ ತಮ್ಮ ಮೂಲ ಸಂಯೋಜನೆ 'ನವರಸ'ದ ನಕಲು ಎಂದು ಬ್ಯಾಂಡ್ ಆರೋಪಿಸಿದೆ.
ಇದನ್ನೂ ಓದಿ: ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಿಕೊಂಡ ಕಾಂತಾರ: 10 ಪಟ್ಟು ಹೆಚ್ಚು ಲಾಭ ತಂದ ಪಂಜುರ್ಲಿ