ETV Bharat / entertainment

ಜೀವ ಬೆದರಿಕೆ ಆರೋಪ.. ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ವಿರುದ್ಧ ದೂರು - comedy kiladi fame actress nayana

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲಾಗಿದೆ.

Comedian Somasekhar
ಕಾಮಿಡಿಯನ್ ಸೋಮಶೇಖರ್
author img

By

Published : Nov 21, 2022, 12:01 PM IST

ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ಹಾಸ್ಯ ನಟಿ ನಯನಾ ವಿರುದ್ಧ ಜೀವ ಬೆದರಿಕೆ ಹಾಗೂ ನಿಂದನೆ ಆರೋಪದಡಿ ಆರ್‌.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಪಡೆದಿದ್ದ ನಯನಾ ಆ್ಯಂಡ್​ ಟೀಮ್ ವಿರುದ್ಧ ಕಾಮಿಡಿಯನ್ ಸೋಮಶೇಖರ್ ಎಂಬುವರು ದೂರು ನೀಡಿದ್ದಾರೆ. ನಯನಾ ತಂಡದಲ್ಲಿ ಸೋಮಶೇಖರ್ ಸದಸ್ಯನಾಗಿದ್ದ‌ರು. ದ್ವಿತೀಯ ಸ್ಥಾನದಿಂದ ಬಂದಿದ್ದ ನಗದು ಹಣ ಬಹುಮಾನ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗ್ತಿದೆ.

ಸೀನಿಯರ್ ನಟರಿಗೆ ಹಣ ಕೊಟ್ಟಿಲ್ಲ‌ ಎಂದು ಸೋಮಶೇಖರ್ ವಿರುದ್ಧ ನಯನಾ ಕಿಡಿಕಾರಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ನಯನಾರನ್ನು ಠಾಣೆಗೆ ಕರೆಯಿಸಿ ಇನ್ಮುಂದೆ ನಮ್ಮ ತಂಟೆಗೆ ಬರದಂತೆ ತಿಳುವಳಿಕೆ ಹೇಳಬೇಕು, ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸೋಮಶೇಖರ್ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 'ಪಾಪ ಪಾಂಡು'ವಿಗೆ ಕಾಮಿಡಿ ಕಿಲಾಡಿ ನಯನ ಎಂಟ್ರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.