ETV Bharat / entertainment

'ಉಪಾಧ್ಯಕ್ಷ' ಸಿನಿಮಾ‌ ಮೂಲಕ ಹೀರೋ ಆಗಿ ಮಿಂಚಲಿರುವ ಹಾಸ್ಯ ನಟ ಚಿಕ್ಕಣ್ಣ - ಉಪಾಧ್ಯಕ್ಷ ಚಿತ್ರದ ಮುಹೂರ್ತ ಸಮಾರಂಭ

ಹಾಸ್ಯನಟ ಚಿಕ್ಕಣ್ಣ ಸ್ಯಾಂಡಲ್​ವುಡ್​​​ನ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಕೂಡ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ.

ಉಪಾಧ್ಯಕ್ಷ
ಉಪಾಧ್ಯಕ್ಷ
author img

By

Published : Jun 17, 2022, 12:54 PM IST

ಮಂಡ್ಯ ಭಾಷೆ ಹಾಗೂ ಹಾಸ್ಯ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರುವ ನಟ ಅಂದ್ರೆ ಚಿಕ್ಕಣ್ಣ. ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಸಿನಿಮಾ ಪ್ರೇಕ್ಷಕರನ್ನ ನಕ್ಕು ನಲಿಸುತ್ತಿದ್ದ ಚಿಕ್ಕಣ್ಣ, ಈಗ ತಾವೇ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ. 'ಅಧ್ಯಕ್ಷ' ಚಿತ್ರದಲ್ಲಿ ನಾನು 'ಉಪಾಧ್ಯಕ್ಷ' ಅಂತಾ ಪ್ರಖ್ಯಾತಿ ಹೊಂದಿದ್ದ ಅವರು, ಈಗ ಪೂರ್ಣ ಪ್ರಮಾಣದಲ್ಲಿ 'ಉಪಾಧ್ಯಕ್ಷ'ನಾಗಲಿದ್ದಾರೆ.

'ಉಪಾಧ್ಯಕ್ಷ' ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಸ್ಮಿತಾ ಉಮಾಪತಿ ಹಾಗೂ ನಾಯಕ ಚಿಕ್ಕಣ್ಣ ಅವರ ತಾಯಿ ಆರಂಭ ಫಲಕ ತೋರಿದರು. ಸಾಧು ಕೋಕಿಲ ಕ್ಯಾಮರಾಕ್ಕೆ ಚಾಲನೆ ನೀಡಿದರು.

'ಉಪಾಧ್ಯಕ್ಷ' ಚಿತ್ರದ ಮುಹೂರ್ತ ಸಮಾರಂಭ
'ಉಪಾಧ್ಯಕ್ಷ' ಚಿತ್ರದ ಮುಹೂರ್ತ ಸಮಾರಂಭ

ಸಿನಿಮಾ ಬಗ್ಗೆ ಮಾತನಾಡಿರೋ ಚಿಕ್ಕಣ್ಣ, ನನಗೆ 'ರಾಜಾಹುಲಿ','ಅಧ್ಯಕ್ಷ' ಚಿತ್ರಗಳ ನಂತರ ಹೀರೋ ಆಗಲು ಸಾಕಷ್ಟು ಅವಕಾಶಗಳು ಬಂತು. ಆದರೆ ನಾನು ಒಪ್ಪಿರಲಿಲ್ಲ. ಈ ಚಿತ್ರ ಕೇಳಿ ಒಪ್ಪಿಕೊಂಡೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಬ್ಬ ಹಾಸ್ಯ ಕಲಾವಿದ ನಾಯಕನಾಗಿ ನಟಿಸುತ್ತಾನೆ ಎಂದರೆ, ಚಿಕ್ಕ ಬಜೆಟ್​ನಲ್ಲಿ ಮುಗಿಸುತ್ತಾರೆ.

ಆದರೆ, ನಮ್ಮ ನಿರ್ಮಾಪಕರು ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ನಿರ್ದೇಶಕ ಅನಿಲ್ ಕುಮಾರ್ ನನಗೆ ಬಹಳ‌ ದಿನಗಳ ಪರಿಚಯ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲ್ಲುವುದು ಖಂಡಿತಾ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

ಮಲೈಕಾ ಜೊತೆ ಚಿಕ್ಕಣ್ಣ
ಮಲೈಕಾ ಜೊತೆ ಚಿಕ್ಕಣ್ಣ

ಈಗಾಗಲೇ ಧಾರಾವಾಹಿಯಲ್ಲಿ ಗಮನ ಸೆಳೆದಿರುವ ಯುವ ನಟಿ ಮಲೈಕಾ ಅವರು ಚಿಕ್ಕಣ್ಣಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ‌. ಹಾಸ್ಯ ನಟ ಧರ್ಮಣ್ಣ ಈ ಚಿತ್ರದಲ್ಲಿ ಚಿಕ್ಕಣ್ಣ ಸ್ನೇಹಿತನಾಗಿ ಅಭಿನಯಿಸುತ್ತಿದ್ದಾರೆ.

ಉಪಾಧ್ಯಕ್ಷ ಚಿತ್ರತಂಡ
ಉಪಾಧ್ಯಕ್ಷ ಚಿತ್ರತಂಡ

ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ, 'ಉಪಾಧ್ಯಕ್ಷ' , 'ಅಧ್ಯಕ್ಷ' ಚಿತ್ರದ ಮುಂದುವರೆದ ಭಾಗ ಎನ್ನಬಹುದು. ಆ ಚಿತ್ರದಲ್ಲಿ ಎಲ್ಲಿ ಕಥೆ ನಿಂತಿತ್ತೊ ಅಲ್ಲಿಂದ ಈ ಚಿತ್ರದ ಕಥೆ ಆರಂಭವಾಗುತ್ತದೆ. ಮೊದಲ ಸನ್ನಿವೇಶದಿಂದ ಕೊನೆಯ ತನಕ‌ ಜನರನ್ನು ನಕ್ಕುನಲಿಸುವ ಸಿನಿಮಾ ಇದು.

ಜೊತೆಗೆ ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿಕ್ಕಣ್ಣ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. 'ಅಧ್ಯಕ್ಷ' ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿರುತ್ತಾರೆ. ಸಾಧುಕೋಕಿಲ ಅವರು ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಿದರು.

'ಉಪಾಧ್ಯಕ್ಷ' ಚಿತ್ರದ ಮುಹೂರ್ತ ಸಮಾರಂಭ
'ಉಪಾಧ್ಯಕ್ಷ' ಚಿತ್ರದ ಮುಹೂರ್ತ ಸಮಾರಂಭ

'ಹೆಬ್ಬುಲಿ', 'ರಾಬರ್ಟ್' ಹಾಗೂ 'ಮದಗಜ' ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸ್, ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ‌. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿರಲಿದೆ.

ನಾಳೆಯಿಂದ ಮೈಸೂರಿನಲ್ಲಿ ನಿರ್ಮಿಸಲಾಗಿರುವ ಮನೆಯ ಸೆಟ್​ನಲ್ಲಿ ಮೂವತ್ತೆರಡು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಆನಂತರ ಬೆಂಗಳೂರು, ಮುಂತಾದ ಕಡೆ ಶೂಟಿಂಗ್​ ಸಾಗಲಿದೆ. ಆಗಸ್ಟ್ ಕೊನೆಯಲ್ಲಿ ಚಿತ್ರೀಕರಣ ಮುಗಿಸಿ ಅದಷ್ಟು ಬೇಗ ಈ‌ ಸಿನಿಮಾವನ್ನ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿದೆ.

'ಉಪಾಧ್ಯಕ್ಷ' ಚಿತ್ರದ ಮುಹೂರ್ತ ಸಮಾರಂಭ
'ಉಪಾಧ್ಯಕ್ಷ' ಚಿತ್ರದ ಮುಹೂರ್ತ ಸಮಾರಂಭ

ಇದನ್ನೂ ಓದಿ: ನಟ ಹೃತಿಕ್ ರೋಷನ್ ಅಜ್ಜಿ ಪದ್ಮಾ ರಾಣಿ ಓಂ ಪ್ರಕಾಶ್ ನಿಧನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.