ETV Bharat / entertainment

'ಕೆಡಿ' ಅಡ್ಡಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಸೂಪರ್​ ಸ್ಟಾರ್​​ ಸಂಜಯ್ ದತ್ - Dhruva Sarja new film

ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಸಿನಿಮಾ 'ಕೆಡಿ' ಚಂದನವನದಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಇದೀಗ 'ಕೆಡಿ' ಅಡ್ಡಕ್ಕೆ ಬಾಲಿವುಡ್​ ಸೂಪರ್​ ಸ್ಟಾರ್​​ ಸಂಜಯ್ ದತ್ ಬಂದಿದ್ದಾರೆ.

sanjay dutt
ಸಂಜಯ್ ದತ್
author img

By

Published : Jan 27, 2023, 12:55 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಕೆಡಿ'ಯಾಗಿ ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಕೆಜಿಗಟ್ಟಲೇ ತೂಕ ಇಳಿಸಿಕೊಂಡು ಅಖಾಡಕ್ಕೆ ಇಳಿಯಲು 'ಪೊಗರು' ಪೋರ ರೆಡಿಯಾಗಿದ್ರೆ, ಧ್ರುವ ಎದುರು ಸಂಜು ಬಾಬಾನನ್ನು ತಂದು ನಿಲ್ಲಿಸಲು ಕನ್ನಡ ಚಿತ್ರರಂಗದಲ್ಲಿ ಡೈರೆಕ್ಟರ್ ಜೋಗಿ ಪ್ರೇಮ್ ನೀಲನಕ್ಷೆ ರೂಪಿಸಿದ್ದಾರೆ.

ಜೋಗಿ ಪ್ರೇಮ್ ಸಿನಿಮಾಗಳಂದ್ರೆ ಭಾರಿ ಸೌಂಡ್​ ಇರುತ್ತೆ. ಬ್ರ್ಯಾಂಡ್​ ಕೂಡಾ ಇದೆ. ಹೊಸ ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ರಿಲೀಸ್ ಆಗುವವರೆಗೂ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುವ ಪ್ರೇಮ್, ಇದೀಗ ಆ್ಯಕ್ಷನ್ ಪ್ರಿನ್ಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, 'ಕೆಡಿ' ಅಡ್ಡಕ್ಕೆ ದುಬಾರಿ ಸಂಭಾವನೆ ಕೊಟ್ಟು ಕೆಜಿಎಫ್ ಅಧೀರನನ್ನು ಕರೆದುಕೊಂಡು ಬಂದಿದ್ದಾರೆ.

sanjay dutt
ಸಂಜಯ್ ದತ್ ನಿರ್ದೇಶಕ ಜೋಗಿ ಪ್ರೇಮ್ ಭೇಟಿ

ಕಳೆದ ವರ್ಷ ಡಿಸೆಂಬರ್​ನಲ್ಲಿ ಯಾರಿಗೂ ತಿಳಿಯದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕರೆತಂದು ಅಣ್ಣಯ್ಯಪ್ಪ ಪಾತ್ರಕ್ಕೆ ಬಣ್ಣ ಹಾಕಿಸಿ, ಹೊಸ ವರ್ಷಕ್ಕೆ ಫೋಟೋ ರಿವೀಲ್ ಮಾಡುವ ಮೂಲಕ ಸಿನಿಮಾ ಪ್ರೇಮಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು. ಈಗ ಅದೇ ರೀತಿ ಸೈಲೆಂಟ್ ಆಗಿಯೇ ಎರಡನೇ ಶೆಡ್ಯೂಲ್ ಶುರು ಮಾಡಿರುವ ಪ್ರೇಮ್, ಬಾಲಿವುಡ್​ ಸೂಪರ್​ ಸ್ಟಾರ್​​ ಸಂಜಯ್ ದತ್ ಅವರನ್ನು ಕರೆದುಕೊಂಡು ಬಂದು ಶೂಟಿಂಗ್ ಶುರು ಮಾಡಿದ್ದಾರೆ. ಕೆಡಿ ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ಪ್ರಾರಂಭವಾಗಿದೆ. ವಿಶೇಷ ಅಂದ್ರೆ, ಕೆಡಿ ಚಿತ್ರದ ಶೂಟಿಂಗ್​ನಲ್ಲಿ ಸಂಜಯ್ ದತ್​ಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳಿಲ್ಲ, ಬದಲಿಗೆ ಸ್ಟಾರ್ ಸ್ಟಂಟ್ ಮಾಸ್ಟರ್ ರವಿವರ್ಮ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: ಕೆಡಿ ಸಿನಿಮಾಕ್ಕಾಗಿ ಬರೊಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಆ್ಯಕ್ಷನ್ ಪ್ರಿನ್ಸ್​!: ಅದ್ಧೂರಿ ಆರ್ಭಟ ಹೀಗಿದೆ

ಬೆಂಗಳೂರಿನ ಜಾಲಹಳ್ಳಿ ಬಳಿ ಇರುವ ಎಚ್‌ಎಂಟಿಎಫ್ ಫ್ಯಾಕ್ಟರಿಯಲ್ಲಿ ಅದ್ಧೂರಿಯಾಗಿ ಸೆಟ್ ಹಾಕಿರುವ 'ಕೆಡಿ' ಬಳಗ, ಸಂಜಯ್ ದತ್ ಎಂಟ್ರಿ ಸೀನ್​ಗಾಗಿಯೇ ಕೋಟಿ ಕೋಟಿ ಖರ್ಚು ಮಾಡಿದೆಯಂತೆ. ಫೆಬ್ರವರಿ ಎರಡನೇ ವಾರದಲ್ಲಿ ಮೂರನೇ ಶೆಡ್ಯೂಲ್ ಪ್ಲಾನ್ ಮಾಡಿದ್ದು, ಈ ಹಂತದ ಚಿತ್ರೀಕರಣದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಡ್ಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪಾತ್ರಕ್ಕಾಗಿ 18 ಕೆಜಿ ತೂಕ ಇಳಿಸಿರುವ ಧ್ರುವ, ಎಪ್ಪತ್ತರ ದಶಕದ ಲುಕ್ ಅಂಡ್ ಗೆಟಪ್​ನಲ್ಲಿ ಮಿಂಚಲಿದ್ದಾರೆ. ಇನ್ನು ನಾಯಕಿಯ ಸುಳಿವನ್ನು ಪ್ರೇಮ್​ ಇದುವರೆಗೂ ಬಿಟ್ಟು ಕೊಟ್ಟಿಲ್ಲ.

KD  film
ಜೋಗಿ ಪ್ರೇಮ್ ಜೊತೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಇದನ್ನೂ ಓದಿ: 'ಕೆ ಡಿ' ರವಿಚಂದ್ರನ್ ಫಸ್ಟ್ ಲುಕ್ ರಿವೀಲ್​.. ಭರ್ಜರಿಯಾಗಿದೆ ಕ್ರೇಜಿಸ್ಟಾರ್​ ಡಿಫರೆಂಟ್​ ಲುಕ್​

ರವಿಚಂದ್ರನ್ ಫಸ್ಟ್ ಲುಕ್: ಜನವರಿ 1ರಂದು ನಟ ರವಿಚಂದ್ರನ್ ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಇದರಲ್ಲಿ ಕಪ್ಪು ಶರ್ಟ್, ಹಣೆಯಲ್ಲಿ ವಿಭೂತಿ ಹಾಕಿ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದಾರೆ. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.